ಮೂಢ ಉವಾಚ - 56

ಮೂಢ ಉವಾಚ - 56

          ಮೂಢ ಉವಾಚ - 56


ಎಲುಬಿರದ ನಾಲಿಗೆಯ ಮೆದುವೆಂದೆಣಿಸದಿರು
ಭದ್ರ ಹೃದಯವನದು ಛಿದ್ರವಾಗಿಸಬಹುದು|
ಮನ ಮನೆಗಳ ಮುರಿದು ಕ್ಲೇಶ ತರಬಹುದು
ಉರಿವ ಕೆನ್ನಾಲಿಗೆಯ ತಣಿಪುದೆಂತೊ ಮೂಢ||


ನೊಂದಮನಕೆ ಶಾಂತಿಯನು ನೀಡುವುದು
ಮನವ ನೋಯಿಸಿ ನರಳಿಸುವುದು ನಾಲಿಗೆ|
ಜೀವವುಳಿಸೀತು ಹಾಳುಗೆಡವೀತು
ನಾಲಿಗೆಯದೆರಡಲಗಿನ ಕಠಾರಿ ಮೂಢ||


-ಕ.ವೆಂ.ನಾಗರಾಜ್.

Rating
No votes yet

Comments