ಪುಸ್ತಕನಿಧಿ-ಮೊಘಲ್ ಸಾಮ್ರಾಜ್ಯ‌ ಸ್ಥಾಪಕ ಬಾಬರ‌ನ‌ ಡೈರಿ! ‍

ಪುಸ್ತಕನಿಧಿ-ಮೊಘಲ್ ಸಾಮ್ರಾಜ್ಯ‌ ಸ್ಥಾಪಕ ಬಾಬರ‌ನ‌ ಡೈರಿ! ‍

ಇತ್ತೀಚೆಗೆ  'ದಿಲ್ಲೀಶ್ವರನ‌ ಡೈರಿ'  ಎಂಬ‌ ನಾ,ಕಸ್ತೂರಿ ( 'ಅನರ್ಥಕೋಶ‌'ಕ್ಕಾಗಿ ಹೆಸರಾದ‌ ಮಹನೀಯರು ) ಅವರ‌ ಪುಸ್ತಕವನ್ನು ಓದಿದೆ. ಸುಮಾರು ನೂರು ಪುಟಗಳ‌ ಪುಸ್ತಕ‌ ಇದು. ಈಗ‌ ಸಪ್ನ‌ ಬುಕ್ ಹೌಸ್ ನವರು ಮುದ್ರಿಸಿದ್ದಾರೆ. ಬೆಲೆ 60 ರೂಪಾಯಿಗಳು ಮಾತ್ರ‌.

ಇದು ಸ್ವತಹ‌ ಬಾಬರ್ ನು ಬರೆದದ್ದು .  ಇವತ್ತಿನ‌ ಉಜ್ಬೆಕಿಸ್ತಾನ‌ ದಿಂದ‌ ಬಂದು ಭಾರತದಲ್ಲಿ ಮೊಘಲ್ ಸಾಮ್ರಾಜ್ಯವನ್ನು ಸ್ಥಾಪಿಸಿದವನು. ಮಧ್ಯ‌ ಏಷಿಯದಲ್ಲೆಲ್ಲೋ   ಹನ್ನೆರಡೇ ವರ್ಷದವನಿದ್ದಾಗ ತಂದೆ ತೀರಿ ಹೋಗಿ  ಇವನು ಪಟ್ಟಕ್ಕೆಬಂದು ಸೈನ್ಯವನ್ನು ಕಟ್ಟಿ ಅನೇಕ ಯುದ್ಧಗಳನ್ನು ಮಾಡಿ ಬಹಳ ಏರಿಳಿತಗಳನ್ನು ಕಂಡು ಕೊನೆಗೆ ದಿಲ್ಲಿಯಲ್ಲಿ ಮೊದಲಬಾರಿಗೆ ಬಲುದೊಡ್ಡ ಸಾಮ್ರಾಜ್ಯವನ್ನು ಸ್ಥಾಪಿಸಿದ ಈತನು ತನ್ನ ಸಂಗತಿಗಳನ್ನು , ಅನಿಸಿಕೆ,ಅನುಭವಗಳನ್ನು ಪ್ರಾಮಾಣಿಕತೆಯಿಂದ‌  ಬರೆದಿಟ್ಟಿದ್ದಾನೆ . ಇದು ಬಾಬರ್ ನಾಮಾ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಇದನ್ನ್ನು ನಾ.ಕಸ್ತೂರಿಯವರು  'ದಿಲ್ಲೀಶ್ವರನ‌ ಡೈರಿ'  ಹೆಸರಿನಲ್ಲಿ  ಕನ್ನಡಿಸಿದ್ದಾರೆ. 

(ಬಾಬರ್ ನ ಕುರಿತಾದ‌  ವಿಕಿಪೀಡಿಯಾದ ಕೊಂಡಿ ಇಲ್ಲಿದೆ‍‍‍‍‍‍   ‍‍‍‍‍: http://kn.wikipedia.org/wiki/ಬಾಬರ್)

ಅವನು  ತನ್ನ‌  ಸೈನಿಕರು  ಮಾಡುವ‌ ಕೊಳ್ಳೆ ಮತ್ತು ಲೂಟಿಗಳನ್ನು ಸಹಿಸುತ್ತಿರಲಿಲ್ಲ‌ ‍‍‍ ಅದೇನದರು ಅವನಿಗೆ ಗೊತ್ತಾದರೆ "ಒಂದು ಹರಕಲು ಚಿಂದಿ , ಮುರುಕಲು ಸೂಜಿ" ಉಳಿಸದೆ  ಪ್ರತಿಯೊಂದು ಪದಾರ್ಥವನ್ನು ಮರಳಿಸುವ‌ ವ್ಯವಸ್ಥೆ ಮಾಡುತ್ತಿದ್ದನು!

ಬೇರೆ ಬೇರೆ ದೇಶ‌ ಗಳನ್ನು ಅವನು ವರ್ಣಿಸಿದ್ದಾನೆ,  ಹವಾಮಾನ‌ , ಆಹಾರ‌ , ಜೀವನ‌ ಪದ್ಧತಿಗಳ‌ ಅವನ‌ ಗಮನಿಸಿಕೆಗಳನ್ನು ದಾಖಲಿಸಿದ್ದಾನೆ . ಅನೇಕ ಸಂಗತಿಗಳನ್ನು ಅಂಕಿ ಅಂಶ‌ಗಳ ಮೂಲಕ ಖಚಿತವಾಗಿ ತಿಳಿಸಿದ್ದಾನೆ. 

‍‍‍‍  ಒಂದೆಡೆ "ನನ್ನ ಪರದಾಟವನ್ನು  ನೋಡಿ ನಾನೇ ಅನೇಕ ವೇಳೆ ನಕ್ಕೆನು; ನನ್ನ ಮಂಕುತನಕ್ಕೆ ನಾನೇ ಬೆರಗಾದೆನು. " ಎಂದು  ಹೇಳಿದ್ದಾನೆ !  
 ಇನ್ನೊಂದೆಡೆ " ಜಂಬ‌ ಕೊಚ್ಚಿಕೊಳ್ಳಲು ನಾನು ಇದನ್ನು ಹೇಳುತ್ತಿಲ್ಲ‌; ನಿಜಸ್ಥಿತಿಯನ್ನು ಹೇಳಿರುವೆನು ಅಷ್ಟೆ" ಎಂದಿದ್ದಾನೆ.
"ದುಃಖ‌ದ ಕಹಿ  ಹಿಂದೆ ಇದ್ದರೆ . ಸುಖದ‌ ಸಿಹಿ ಸಾವಿರ‌ ಪಾಲಾಗುತ್ತದೆ!  ದಣಿದವನಿಗೆ   ಉಣಿಸಿನ‌ ಸುಖ‌... ಹೀಗೆ ಅಗಾಧವಾದ‌ ದುಃಖ‌ಸಾಗರದಿಂದ‌ ನಾನು ನಾಲ್ಕೈದು ಬಾರಿ ಅಪರಿಮಿತವಾದ‌ ಆನಂದಕ್ಕೆ ಕಾಲಿಟ್ಟಿದ್ದೇನೆ!"
ಅವಸರವು ಅವಿವೇಕದ‌ ಹೆಗ್ಗುರುತು, "ದುಡುಕಿ ಖಡ್ಗವ‌ ಹೊರಗೆ ತೆಗೆದರೆ ತಲೆಯ‌ ತಗ್ಗಿಸಿ ನಾಚಿ ನಿಲುವರು" ಎಂಬುದರ‌ ಅರ್ಥವು ನನಗೆ ಆಗ‌ ತಿಳಿಯಿತು
ಒಬ್ಬರಾಳಿರಲಿ , ಹೆಚ್ಚಿರಲಿ, ಬೆಂಬಲವು ದೇವರೇ.

ಈತನು ಸ್ವತಹ ಕವಿಯೂ ಇದ್ದ‌ ಹಾಗೆ ತೋರುತ್ತದೆ . ಇನ್ನೊಬ್ಬ‌ ಕವಿಯ‌  ಕವಿತ್ವದ‌ ಬಗ್ಗೆ  ತನ್ನ‌ ಅನಿಸಿಕೆಯನ್ನೂ ತಿಳಿಸಿದ್ದಾನೆ.

ಒಮ್ಮೆ ಸೈನ್ಯ‌ ಸಾಹಸಗಳಲ್ಲಿ ಈತನು ಒಬ್ಬೊಂಟಿಯಾಗಿದ್ದರೆ ಇನ್ನೊಮ್ಮೆ 12000 ಅನುಚ‌ರರು ಇರುತ್ತಾರೆ , ಒಮ್ಮೊಮ್ಮೆ ತಿನ್ನಲೂ ಏನೂ ಇಲ್ಲದೆ ತಮ್ಮ ನಾಯಿ ಕುದುರೆಗಳನ್ನೂ  ಕೊಂದು ತಿನ್ನುತ್ತಾರೆ . 12000 ಸೈನಿಕರನ್ನು ಇಟ್ಟುಕೊಂಡು ಲಕ್ಷಾಂತರ‌ ಸೈನಿಕರನ್ನು ಹೊಂದಿದ‌ ಸೈನ್ಯವನ್ನು ಸೋಲಿಸುತ್ತಾನೆ .

 47 ವರ್ಷ‌ದವನಿದ್ದಾಗ‌ ತನ್ನ‌ ಮಗ‍  ಹುಮಾಯೂನ‌ನ‌ ಪ್ರಾಣವನ್ನು ಉಳಿಸಿಕೊಳ್ಳಲು ತನ್ನ‌ ಪ್ರಾಣ‌ ಒಪ್ಪಿಸುವುದಾಗಿ ದೇವರೊಂದಿಗೆ ಬೇಡಿಕೊಂಡು  ಆ ಪ್ರಕಾರ‌ ಸತ್ತು ಹೋಗುತ್ತಾನೆ . ಈ ಸಂಗತಿಯನ್ನು ಬೇರೆಲ್ಲೋ ಓದಿದ್ದೆ. ಇದನ್ನು ಅವನ‌ ಮಾತಿನಲ್ಲೇ ಓದಬಹುದು.

ಅವನ‌ ಜೀವನದ‌ ಮಹ‌ತ್ವದ‌  ಭಾಗದ‌  ಕೆಲವು ಪುಟಗಳು ಕಳೆದು ಹೋಗಿವೆಯಂತೆ . ಆದರೂ ಒಮ್ಮೆ ಓದಬೇಕಾದ‌ ಪುಸ್ತಕ‌.  ಹಿಂದೂಸ್ಥಾನದ‌ ಬಗ್ಗೆ , ಇಲ್ಲಿಯ‌ ಜನರ‌ ಬಗ್ಗೆ ಅವನ‌ ಅನಿಸಿಕೆಗಳನ್ನು ನೋಡಬಹುದು.

Rating
No votes yet

Comments