ಯಾಂತ್ರಿಕ-ಕಥೆ

ಯಾಂತ್ರಿಕ-ಕಥೆ

 


ಹೊರಟಿದ್ದೆ
ನಾನಂದು
ಎಂದಿನದಂತೆ
ಮಾಮೂಲಿ
ರಸ್ತೆಯಲ್ಲಿ,
ದಿನದಿನವೂ
ಧರಿಸುವ
ದಿರಿಸು ಧರಿಸಿ
ಆಫ಼ೀಸಿಗೆ
ಶಿಸ್ತಿನಲ್ಲಿ.

ಕಾಣುತ್ತಿಲ
ಅಡ್ಡಾದಿಡ್ಡಿಯಾಗಿ
ಓಡಾಡುವ
ಒಂದೂ ವಾಹನವೂ
ಅಶಿಸ್ತಿನಲಿ,
ಉಬ್ಬು ತಗ್ಗಿನ
ಹಳ್ಳ ಕೊರೆದು
ಹಾಳು ಸುರಿವ
ಬೆಂಗಾಡಾಗಿಹ
ಟಾರು ರಸ್ತೆಯಲಿ,

ಏನಿದು ಇಂದು
ರಸ್ತೆ ಖಾಲಿ
ಖಾಲಿ ಎಂದು
ಯೋಚಿಸುತ್ತಾ
ಆಫ಼ೀಸು ಸೇರಿದ್ದೆ
ಮತ್ತದೆ ಸುಸ್ತಿನಲ್ಲಿ,

ಬಾಗಿಲಲ್ಲಿದ್ದ
ಸಿಪಾಯಿ ಎದ್ದು
ಸೆಲುಟ್ ಹೊಡೆದ
ಶಿಸ್ತಿನಲಿ,
ಆಶ್ಚರ್ಯ ಚಹರೆಯ
ಅವನ ಮುಖ
ನೋಡಿ ನೆನಪಾಯ್ತು
ಇಂದು ಭಾನುವಾರ
ರಜಾದಿನ ಕೆಲಸ
ಮಾಡುವ ವ್ಯವಸ್ಥೆಯಲಿ.

Rating
No votes yet