ಯುಗಾವತಾರಿಯ ಬಿಡುಗಡೆ ಸಂಭ್ರಮ

ಯುಗಾವತಾರಿಯ ಬಿಡುಗಡೆ ಸಂಭ್ರಮ

ಸಂಪದಿಗರೇ, ನಿಮ್ಮನ್ನೆಲ್ಲಾ ನಾನು ನನ್ನ ತಂಗಿ ಕರೆದೂ ಕರೆದೂ ಸಾಕಾಯ್ತು. ನೀವ್ಯಾರೂ ಬರಲಿಲ್ಲ. ಇರಲಿ... ಮೊನ್ನೆ ಹತ್ತನೇ ತಾರೀಖಿನಂದು ಸಂಜೆ ಆರು ಗಂಟೆಗೆ ಮಂಡ್ಯದ ಕಲಾಮಂದಿರದಲ್ಲಿ ಡಾ.ಪ್ರದೀಪಕುಮಾರ ಹೆಬ್ರಿಯವರ ಮಹಾಕಾವ್ಯ.. ’ಯುಗಾವತಾರಿ’ ಶ್ರೀ ಬಸವ ದರ್ಶನ ಕಾವ್ಯದ ಬಿಡುಗಡೆ ಸಮಾರಂಭ ಬಹಳ ವಿಜೃಂಬಣೆಯಿಂದ ನೆರವೇರಿತು. ಕನ್ನಡ ಸಾಹಿತ್ಯದಲ್ಲಿ ಅನೇಕ ಸಂಶೋಧನೆಯನ್ನು ಮಾಡಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಸರಳ, ಸಜ್ಜನ ವ್ಯಕ್ತಿ ಡಾ. ಎಂ.ಎಂ.ಕಲಬುರ್ಗಿಯವರು ಕಾವ್ಯದ ಮೂರನೇ ಸಂಪುಟವನ್ನು ಲೋಕಾರ್ಪಣೆ ಮಾಡಿದರು. ’ಕ್ಷಣ ಹೊತ್ತು ಆಣಿ ಮುತ್ತು’ ಖ್ಯಾತಿಯ ಶ್ರೀ ಎಸ್. ಷಡಕ್ಷರಿಯವರು ಡಾ. ಪ್ರದೀಪ ಕುಮಾರ ಹೆಬ್ರಿಯವರಿಗೆ ಸನ್ಮಾನ ಮಾಡಿದರು.ತಮ್ಮ ಮೋಡಿಯ ಆಣಿಮುತ್ತುಗಳನ್ನು ನಮಗೊಂದಷ್ಟು ನೀಡಿದರು. ವಜ್ರ ಮಹೋತ್ಸವದ ಸಂಭ್ರಮದಲ್ಲಿರುವ ಮಂಡ್ಯದ ’ಕರ್ನಾಟಕ ಸಂಘ’ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಅದರ ಅಧ್ಯಕ್ಷರಾದ ಪ್ರೊ|| ಬಿ.ಜಯಪ್ರಕಾಶಗೌಡರ ನೇತೃತ್ವದಲ್ಲಿ ಕಾರ್ಯಕ್ರಮದ ರೂಪುರೇಷೆ ಸಿದ್ಧವಾಗಿತ್ತು.. ಮೈಸೂರಿನ ವಾಣಿಜ್ಯ ತೆರಿಗೆ ಅಧಿಕಾರಿ ಶ್ರೀ ಬಿ.ಎಂ.ಬಸಪ್ಪನವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಂಡ್ಯದ ಶಾಸಕರಾದ ಮಾನ್ಯ ಶ್ರೀ ಎಂ.ಶ್ರೀನಿವಾಸ್ ರವರು ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮ ಬೇಬಿ ಮಠದ ಶ್ರೀ ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿಗಳ ದಿವ್ಯಸಾನಿಧ್ಯದಲ್ಲಿ ನೆರವೇರಿತು. ಎಲ್ಲಕ್ಕಿಂತ ಮುಖ್ಯವಾಗಿ ಯುಗಾವತಾರಿಯ ಮೂರು ಸಂಪುಟಗಳಿಂದಾಯ್ದ ಕೆಲವು ದೃಶ್ಯಗಳಿಂದ ನೃತ್ಯರೂಪಕವನ್ನು ನಾಡಿನ ಹೆಸರಾಂತ ನೃತ್ಯಸಂಸ್ಥೆ ’ಶ್ರೀ ಗುರುದೇವ ಲಲಿತಕಲಾ ಅಕಾಡೆಮಿಯ ವಿದ್ಯಾರ್ಥಿಗಳು ನಡೆಸಿಕೊಟ್ಟರು... ಅದೂ ಸಹ ಕಾವ್ಯದ ಧಾರೆಗೊಂದು ಮೆರುಗು ನೀಡಿತ್ತು.. ಹ್ಮ್ಮ್ಮ್.. ಎಲ್ಲಾ ಚೆನ್ನಾಗಿತ್ತು. ಆದರೆ ನೀವ್ಯಾರು ಬರಲಿಲ್ಲ ಅನ್ನೋದೆ ಬೇಸರದ ಸಂಗತಿ. ಮುಂದಿನ ಬಾರಿ ಬರದೇ ಇರಬೇಡಿ... ಆಯ್ತಾ... ಅಂದ ಹಾಗೆ ಇಡೀ ಕಾರ್ಯಕ್ರಮದ ನಿರೂಪಣೆಯನ್ನ ಶ್ರೀಮತಿ ಭವಾನಿ ಲೋಕೇಶ್ ಮಾಡಿದ್ರು... :)

Rating
No votes yet

Comments