ರಕ್ಷಾಕವಚ ನೀನೇ

ರಕ್ಷಾಕವಚ ನೀನೇ


ಅಂಬೆಗಾಲಿಟ್ಟು ಬಂದು ತೊಡೆಯೇರುವಾಸೆ
ಹೆಗಲೇರಿ  ಉಪ್ಪುಮೂಟೆಯಾಡುವಾಸೆ
ಕೈಹಿಡಿದು  ಸುತ್ತ ಬೆರಗ ನೋಡುವಾಸೆ
ಅಚ್ಚರಿಯನೆಲ್ಲ  ನಿನ್ನಲ್ಲಿ ಕೇಳುವಾಸೆ  ಅಪ್ಪಾ....

ಗಂಡು  ಹೆಣ್ಣು   ಸೃಷ್ಟಿ  ನಿಯಮ
ತೋರುವೆಯೇಕೆ  ತಾರತಮ್ಯ
ಅಮ್ಮನೊಡಲಲಿ  ಮೊಳೆಯುತಿರುವೆ
ಚಿವುಟದಿರು   ಕಟುಕನಾಗದಿರು  ಅಪ್ಪಾ....

ಕಣ್ತೆರೆಯಲು..., ನಾ ಹೆಣ್ಣೆಂದು
ಹಡೆದವ್ವನ  ಹೊಡೆಯದಿರು
ಕಂಡ ಕಂಡಾಗೆಲ್ಲ ನನ್ನ  ಸಿಡುಕದಿರು
ಎತ್ತಿ ಎಸೆಯದಿರು  ಕತ್ತು ಹಿಸುಕದಿರು
ನಕ್ಕು ನಗುತಾ  ಬಾಳಲು
ಇದೆ ನನಗೂ   ಹಕ್ಕು
ರಕ್ಷಾಕವಚ ನೀನೇ ಅಪ್ಪಾ....

 ಚಿತ್ರಕೃಪೆ-http://www.google.co.in/imgres?q=%E0%B2%AD%E0%B3%8D%E0%B2%B0%E0%B3%82%E0%B2%A3&hl=kn&biw=1280&bih=555&tbm=isch&tbnid=eoJWY_tr68k9QM:&imgrefurl=http://varthabhavanmng.blogspot.com/2011/02/blog-post_06.html&docid=r_FMzWyFKeSnXM&imgurl=http://1.bp.blogspot.com/_YhB4Pm5W3iM/TU6YOAm8r0I/AAAAAAAAC90/RTheFvS4XrA/s320/images.jpg&w=265&h=190&ei=h3oFUNmqGMPyrQfGzqDDBg&zoom=1&iact=hc&vpx=246&vpy=71&dur=2730&hovh=152&hovw=212&tx=144&ty=86&sig=118317387937614075074&page=1&tbnh=106&tbnw=147&start=0&ndsp=21&ved=1t:429,r:1,s:0,i:70

ಉಪ್ಪುಮೂಟೆ-ವ್ಯಕ್ತಿಯ ಬೆನ್ನು ,ತೋಳುಗಳ ಮೇಲೆ  ಎಳೆ ಮಕ್ಕಳು ಸವಾರಿ ಮಾಡುವುದು.ಕೆಲವೆಡೆ ` ಕೂಸುಮರಿಯಾಟ ' ಎನ್ನುತ್ತಾರೆ.

Rating
No votes yet

Comments