ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?

ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?

ಸೂರ್ಯ ಸಿದ್ಧಾಂತ ಅನ್ನೋದು ಭಾರತದಲ್ಲಿನ ಹಳೆಯ ಖಗೋಳ ಶಾಸ್ತ್ರದ ಬಗ್ಗೆ ಬರೆದಿರುವ ಹೊತ್ತಗೆಗಳಲ್ಲೊಂದು.

ಅದರಲ್ಲಿ ಏನು ಹೇಳ್ತಾರೆ ಗೊತ್ತಾ?

ಭೂಮಿಯ ಉತ್ತರಾರ್ಧ ಗೋಳ ದೇವತೆಗಳ ಕಡೆ, ದಕ್ಷಿಣಾರ್ಧ ಗೋಳ ಅಸುರರದ್ದಂತೆ. ದೇವತೆಗಳಿಗೆ ಆರುತಿಂಗಳು ಹಗಲಾದಾಗ, ರಾಕ್ಷಸರಿಗೆ  ಆರು ತಿಂಗಳು ರಾತ್ರಿ.

ಅಂದ್ರೆ ದೇವತೆಗಳು ಆರ್ಕ್ಟಿಕ್ ಪ್ರದೇಶದಲ್ಲೂ, ರಾಕ್ಷಸರು ಅಂಟಾರ್ಕ್ಟಿಕ್ ಪ್ರದೇಶದಲ್ಲೂ ಇದ್ದಿರಬೇಕು :) :)

ಅದಿರ್ಲಿ. ಇದೆಲ್ಲ ಬರೀ ಸಿಂಬಾಲಿಕ್ ಅಷ್ಟೇ. ಸೂರ್ಯ ಸಿದ್ಧಾಂತದಲ್ಲಿ ನಾವು ತಿಳೀಬೇಕಾದ ಎಷ್ಟೋ ಅಂಶಗಳಿವೆ. ಅವುಗಳ ಮೇಲೆ ಆದಾದಹಾಗೆ ಬರೆಯುತ್ತಾ ಹೋಗುವೆ.

ಮೊದ್ಲಿಗೆ ಇದು ಕೇಳಿ: ಲಂಕೆ ಅಂದ್ರೆ ರಾವಣನ ಊರು ಅಂತ ನಾವೆಲ್ಲ ಸಾಧಾರಣವಾಗಿ ಅಂದ್ಕೊಳೋದು ಅಲ್ವಾ? ಆದರೆ, ಖಗೋಳ ಶಾಸ್ತ್ರದಲ್ಲಿ ಇನ್ನೊಂದು ಲಂಕೆ ಇದೆ. 

ಇದು ಲೆಕ್ಕಾಚಾರಕ್ಕೆ ಮಾಡಿಕೊಂಡಿದ್ದ ಒಂದು ಬಿಂದು ಅಷ್ಟೇ. ಉಜ್ಜಯಿನಿಯ ರೇಖಾಂಶ (longitude) ಎಲ್ಲಿ ಭೂಮಧ್ಯ ರೇಖೆಯನ್ನ ಮುಟ್ಟುತ್ತೋ ಅದೇ ಲಂಕೆ.ಎಲ್ಲಾ ಲೆಕ್ಕಾಚಾರಗಳನ್ನೂ ಉಜ್ಜಯಿನಿಯ ರೇಖಾಂಶಕ್ಕೆ ಸಾಪೇಕ್ಷವಾಗಿ ಮಾಡ್ಕೋತಿದ್ರು ಆಗ.

ಈಗ ನಾವು ಭಾರತದ standard time ಅನ್ನ ಹೇಗೆ ೮೨.೫ ರೇಖಾಂಶಕ್ಕೆ ಮಾಡ್ಕೊಂಡಿದೀವೋ, ಅಥವಾ ಪ್ರಪಂಚದಲ್ಲೆಲ್ಲ ಗ್ರೀನ್ವಿಚ್ ಅನ್ನ ಸೊನ್ನೆ ಡಿಗ್ರಿ ಅಂದ್ಕೋತೀವೋ, ಹಾಗೆ ಉಜ್ಜಯಿನಿಯಲ್ಲಿ ಹಾದು ಹೋಗುವ ರೇಖಾಂಶ ಅಂದಿನ ಭಾರತಕ್ಕೆ prime meridian ಆಗಿತ್ತು.

-ಹಂಸಾನಂದಿ

 

Rating
No votes yet

Comments