ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?

ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?

ಮೊದಲ ಸಲ ನೆಟ್ವರ್ಕಿಂಗ್ ಬಗ್ಗೆ ಹೇಳಿದಾಗ Static ಮತ್ತು DHCP ವಿಧಾನ ಉಪಯೋಗಿಸಿ ಕೊಂಡು ಬಿ.ಎಸ್.ಎನ್.ಎಲ್ ಬ್ರಾಡ್ಬ್ಯಾಂಡ್ ಹ್ಯಾಗೆ ಕಾನ್ಫಿಗರ್ ಮಾಡೋದು ಅಂತ ಹೇಳಿದ್ದೆ. ಕೆಲವರು ಬ್ರಾಡ್ಬ್ಯಾಂಡ್ ಉಪಯೋಗಿಸ ಬೇಕಾದ್ರೆ ಕೂಡ ಲಾಗಿನ್ ಐ.ಡಿ ಮತ್ತು ಪಾಸ್ವರ್ಡ್ ಕೊಡ ಬೇಕಾಗತ್ತೆ. ಅಂತಹವರು ಹ್ಯಾಗೆ ಉಬುಂಟುವಿನಲ್ಲಿ ಇದನ್ನ ಮಾಡ ಬಹುದು ಅನ್ನೋದನ್ನ ಈಗ ನೋಡೋಣ. (ವಿಂಡೋಸ್ ನಲ್ಲಿ ಇದಕ್ಕೆ ಅಂತ ಒಂದು ಐಕಾನ್ ನಿಮಗೆ ಡೈಯಲ್ ಅಪ್ ನೆಟ್ವರ್ಕ್ ನ ಕನೆಕ್ಷನ್ ರೀತಿ ಯಲ್ಲೇ ಇರತ್ತೆ ಅದನ್ನ ಕ್ಲಿಕ್ ಮಾಡಿ ಇಂಟರ್ನೆಟ್ ಗೆ ಕನೆಕ್ಟ್ ಆಗ್ತೀರ)
ನನಗೆ ತಿಳಿದಿರುವ ಪ್ರಕಾರ ಕೆಲ ಟೈಪ್ ೧ ಎ.ಡಿ.ಎಸ್.ಎಲ್ ಮೊಡೆಮ್ ಗಳಿಗೆ ಮಾತ್ರ ಇದು ಅನ್ವಯಿಸುತ್ತದೆ.

ಇದನ್ನ ಲಿನಕ್ಸ್ ನಲಿ ಸಾಧ್ಯವಾಗಿಸಲಿಕ್ಕೆ ಮೊದಲು ನಿಮ್ಮ ಕಂಪ್ಯೂಟರ್ ಅನ್ನು ADSL ಮೊಡೆಮ್ಗೆ  ಕನೆಕ್ಟ್ ಮಾಡಿ (ethernet ಕೇಬಲ್ ನ ಮೂಲಕ). ನಂತರ ನಿಮ್ಮ ಉಬುಂಟು ಡೆಸ್ಕ್ಟಾಪಿನಲ್ಲಿ Applicaiton -> Accessories -> Terminal ಕ್ಲಿಕ್ಕಿಸುವುದರ ಮೂಲಕ ಟರ್ಮಿನಲ್ ಓಪನ್ ಮಾಡಿ. ನಂತರ ಕೆಳಗಿನ ಕಮ್ಯಾಂಡ್ ಟೈಪ್ ಮಾಡಿ.

[quote]sudo pppoeconf[/quote]



ಓಕೆ,  ಈ ಕಮ್ಯಾಂಡ್ ನಿಮ್ಮ BSNL BroadBand ಕನೆಕ್ಷನ್ ನ ಲಾಗಿನ್ ಐ.ಡಿ, ಪಾಸ್ವರ್ಡ್ ಗಳನ್ನ ಕೇಳತ್ತೆ. ಇದರ ಜೊತೆಗೆ ಇನ್ನೂ ಅನೇಕ ವಿಂಡೋಗಳು ನಿಮಗೆ ಹಲವಾರು ಪ್ರಶ್ನೆಗಳನ್ನ ಕೇಳಿದರೂ ಅದು  ಪೂರ್ವನಿಯೋಜಿತವಾಗಿ ಸೂಚಿಸುವ ಉತ್ತರವನ್ನೇ ಬಳಸಿ ನೆಟ್ವರ್ಕ ಕಾನ್ಪಿಗರೇಷನ್ ಮುಗಿಸ ಬಹುದು.

ಕೊನೆಯ ಹಂತದಲ್ಲಿ ನಿಮಗೆ ನೆಟ್ವರ್ಕ್ ಕನೆಕ್ಷನ್ ಅನ್ನು ಸಿಸ್ಟಂ ಶುರುವಾದಾಗಲೇ ಪ್ರಾರಂಭಿಸಬೇಕೆ /ಬೇಡವೆ ಎಂದು ಕೇಳಲಾಗತ್ತೆ. ಇದು ನಿಮಗೆ ಬೇಡವೆನಿಸಿದಲ್ಲಿ ನೀವು ಬೇಡ ಎಂಬ ಆಯ್ಕೆಯನ್ನ ಸೆಲೆಕ್ಟ್ ಮಾಡಿ ಕೊಳ್ಳಬಹುದು. ಹೀಗಾದ ಸಂದರ್ಭದಲ್ಲಿ ಕೆಳಗೆ ಕೊಟ್ಟಿರುವ ಕಮ್ಯಾಂಡನ್ನು ಇಂಟರ್ನೆಟ್ ಸಂಪರ್ಕಕ್ಕೆ ಕನೆಕ್ಟ್ ಆಗಲು ಬಳಸ ಬಹುದು

[quote]pon dsl-provider[/quote]

(ಸೂಚನೆ : ಇಲ್ಲಿ dsl-provider ಅನ್ನೂದು ಕೆನೆಕ್ಷನ್ ನ ಹೆಸರು, ಕಾನ್ಪಿಗರೇಷನ್ ಮಾಡುವಾಗ ಇದನ್ನ ನೀವು ಬದಲಿಸಿದ್ದರೆ, ಸರಿಯಾದ ಹೆಸರನ್ನ pon ನೊಂದಿಗೆ ಸೂಚಿಸಿ.)

ಇಂಟರ್ನೆಟ್ ಅನ್ನು ಡಿಸ್ಕನೆಕ್ಟ್ ಮಾಡಲು ಕೆಳಗಿನ ಕಮ್ಯಾಂಡ್ ಬಳಸ ಬಹುದು.

[quote]poff[/quote]

ಈ pppoe ಅನ್ನೇ ಡಯಲ್ ಅಪ್ ಕನೆಕ್ಷನ್ ಅನ್ನು ಕಾನ್ಫಿಗರ್ ಮಾಡಲು ಬಳಸ ಬಹುದು.

ಮುಂದೆ  wi-fi ಹ್ಯಾಗೆ ಕಾನ್ಫಿಗರ್ ಮಾಡೋದು ಅಂತ ನೋಡೋಣ

Rating
No votes yet

Comments