ವಾಡೆಯ ನೆನಪಲ್ಲಿ.....
ಎಲ್ಲರ ಬಾಲ್ಯಕ್ಕೂ ಒಂದೊಂದು ಕಥೆ ಇರುತ್ತದೆ. ನಾ ನಮ್ಮ ವಾಡೆಯಲ್ಲಿ ಕಳೆದ ಆ ಗಳಿಗೆಗಳು ಚಿರನೂತನ ನೆನಪುಗಳು.
ಎಲ್ಲಕ್ಕೂ ಮೊದಲು ನೆನಪಿಗೆ ಬರುವುದು ಹಣಮುಕಾಕಾನ ಕಥೆಗಳು... ಹಾಗೆಂದು ಆ ಕಥೆಗಳಲ್ಲಿ ನೀತಿ ಇರಲಿಲ್ಲ , ಉಪದೇಶ ಇರಲಿಲ್ಲ. ಬದಲು ಅವುಗಳಲ್ಲಿ ಇದ್ಡಿದ್ದು ಭರಪೂರ ಮನರಂಜನೆ. ನಾವು ಗಂಡು ಹೆಣ್ಣು ಸೇರಿ ಸುಮಾರು ಹತ್ಟು ಜನರ ಗುಂಪು
ಸಂಜೆಯಾಯಿತೆಂದರೆ ಅಂಗಳದಲ್ಲಿ ಚಾಪೆ ಹಾಸಿ ಒಂದು ಟಕ್ಕೆ ಇಟ್ಟು ಕೊಂಡು ಅದಕ್ಕೆ ಒರಗಿ ಅವ ಕುಳಿತನೆಂದರೆ ಅವನ ಸುತ್ತ್ ನಾವು
ಮುಕುರುತ್ತಿದ್ದೆವು. ಆ ಸಂಜೆಗಳಲ್ಲಿ ಏನೆಲ್ಲ ಇತ್ತು ಕಾಂಚನ ಳ ಧ್ವನಿಯೊಳಗಿಂದ " ಜೋಗಿ ಮನೆಗೆ ಬಂದ " ಈ ಹಾಡು ದಿನವೂ ಕೇಳಿದರೂ ತ್ರುಪ್ತಿ ಇರುತ್ತಿರಲಿಲ್ಲ.... ಕಾಂಚನಳ ಧ್ವನಿ ಇನ್ನೂ ಗುಂಯ್ ಗುಡುತಿದೆ.
ಹಣಮುಕಾಕಾ ನಮ್ಮ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹಿಸುತ್ತಿದ್ಡ.... ನಮ್ ಕ್ರಿಕೆಟ್ ಟೀಮ್ ಗೆ " ಇಂಪಿರೀಯ್ ಲ್ " ಅಂತ
ಹೆಸರು ಕೊಟ್ಟಿದ್ಡು ಅವನೇ ಆ ಪದದ ಅರ್ಥ ಆ ದಿನಗಳಲ್ಲಿ ಗೊತ್ತು ಸಹ ಇರಲಿಲ್ಲ.
ಮೊದಲೇ ಹೇಳಿದ ಹಾಗೆ ಮನೋರಂಜನೆ ಪ್ರಧಾನವಾದ ಕ್ತಥೆಗಳು... ಹಾಗಂತ ಎದುರಿರುವರನ್ನು ಸುಮ್ಮನೆ ಬಿಡುವ ಆಸಾಮಿಯಲ್ಲ ಎಲ್ಲರಿಗೂ ಒಂದೊಂದು ಅಡ್ಡ ಹೆಸರು " ಹ್ಯಾಟ್ಯಾ " ಇದು ಅವ ನನಗೆ ದಯಪಾಲಿಸಿದ ಬಿರುದು.
ಯಾಕೋ ಮನ ಭಾರ ವಾಗಿದೆ.....
Comments
ಉ: ವಾಡೆಯ ನೆನಪಲ್ಲಿ.....
In reply to ಉ: ವಾಡೆಯ ನೆನಪಲ್ಲಿ..... by sunaath
ಉ: ವಾಡೆಯ ನೆನಪಲ್ಲಿ.....