ವಿರಾಮ ಚಿಹ್ನೆಗಳ ಬಗ್ಗೆ ಅನುಮಾನವೇ? ಈ ಆನ್‌ಲೈನ್ ಮಾಹಿತಿ ತಾಣವನ್ನು ನೋಡಿ

ವಿರಾಮ ಚಿಹ್ನೆಗಳ ಬಗ್ಗೆ ಅನುಮಾನವೇ? ಈ ಆನ್‌ಲೈನ್ ಮಾಹಿತಿ ತಾಣವನ್ನು ನೋಡಿ

ಆತ್ಮೀಯ ಸಂಪದಿಗರೇ,

ವಿರಾಮ ಚಿಹ್ನೆಗಳ ಬಗ್ಗೆ ನಮಗೆಷ್ಟು ಗೊತ್ತು? ಕೆಳಗಿನ ಸಾಲುಗಳನ್ನು ಸ್ವಲ್ಪ ಓದಿ ನೋಡಿ:

ವಿರಾಮ ಚಿಹ್ನೆಗಳು

ಕನ್ನಡದಲ್ಲಿ ಗದ್ಯವನ್ನಾಗಲಿ, ಪದ್ಯವನ್ನಾಗಲಿ ಬರೆಯುವಾಗ ಹಿಂದಿನ ಕಾಲದಲ್ಲಿ ವಿರಾಮ ಚಿಹ್ನೆಗಳನ್ನು ಉಪಯೋಗಿಸುತ್ತ ಇರಲಿಲ್ಲ. ತಾಳೆಗರಿಗಳಲ್ಲಿ ಒಂದು ಪದ್ಯವನ್ನು ಪೂರ್ತಿ ಸಾಲಾಗಿ ಬರೆದ ಮೇಲೆ ಕೊನೆಯಲ್ಲಿ ಒಂದು (|) ಗೂಟವನ್ನು ಹಾಕಿ ಗುರುತಿಸಿದರೆ ಆಗಿಹೋಯಿತು. ಕೆಲವರು ಅದನ್ನೂ ಹಾಕುತ್ತಿರಲಿಲ್ಲ. ಇಂಗ್ಲಿಷ್ ಭಾಷೆಯ ಅಭ್ಯಾಸವು ಹೆಚ್ಚಾದ ಹಾಗೆಲ್ಲ, ಆ ಭಾಷೆಯಲ್ಲಿ ಉಪಯೋಗಿಸುತ್ತಿದ್ದ ವಿರಾಮ ಚಿಹ್ನೆಗಳ ಪ್ರಯೋಜನದ ಪರಿಚಯವಾಯಿತು, ನಮ್ಮವರಿಗೂ. ಹೀಗಾಗಿ ಈಗ ಕನ್ನಡದಲ್ಲಿ ಬರಹ ಮಾಡುವರು ಕೆಲವು ವಿರಾಮ ಚಿಹ್ನೆಗಳನ್ನು ಉಪಯೋಗಿಸುತ್ತಿದ್ದಾರೆ. ಆದರೂ ಈ ಚಿಹ್ನೆಗಳ ಉಪಯೋಗವು ಒಂದೇ ಬಗೆಯಾಗಿ ಆಗುತ್ತಿಲ್ಲ. ಆದುದರಿಂದ, ಈ ಚಿಹ್ನೆಗಳ ಬಗ್ಗೆ ಸ್ಪಷ್ಟವಾದ ತಿಳಿವಳಿಕೆಯನ್ನು ಪಡೆದಿರುವುದು ಒಳ್ಳೆಯದು. .........(ಇನ್ನೂ ಇದೆ)

ವಿರಾಮ ಚಿಹ್ನೆಗಳು ಹೀಗಿವೆ:

ಚಿಹ್ನೆಯ ಹೆಸರು ಚಿಹ್ನೆ
೧. ಪೂರ್ಣವಿರಾಮ .
೨. ಅರ್ಧವಿರಾಮ ;
..........
(ಇನ್ನೂ ಇದೆ)

ಇವುಗಳ ಬಗ್ಗೆ, ಇವುಗಳನ್ನು ಏಕೆ ಉಪಯೋಗಿಸುತ್ತಾರೆ ಎಂಬ ಬಗ್ಗೆ ವಿವರಗಳನ್ನು ತಿಳಿದುಕೊಳ್ಳೋಣ.

ಅರ್ಧ ವಿರಾಮ ಇದು- ;
ಎರಡು ಸಂಪೂರ್ಣ ವಾಕ್ಯಗಳು ಬೇರೆಬೇರೆಯವೇ ಆಗಿದ್ದರೂ ಅವುಗಳಿಗೆ ಸಂಬಂಧ ಇದ್ದರೆ ಅವುಗಳ ನಡುವೆ ಅರ್ಧವಿರಾಮವನ್ನು ಉಪಯೋಗಿಸಬೇಕು.

ಉದಾ:
...........
೨) ಒಂದು ಸಂಗತಿಯೇನೋ ನಿಶ್ಚಯ; ಈ ಕಾಲಕ್ಕೆ ಕೊನೆಗಾಲ ಒದಗಿದೆ; ಅದಕ್ಕೇ ಈ ಕೌರವರು ಲೋಭ ಮೋಹಗಳಿಗೆ ವಶರಾಗಿದ್ದಾರೆ.

ಎರಡನೆಯ ವಾಕ್ಯದಲ್ಲಿ ಮೂರು ಉಪವಾಕ್ಯಗಳಿದ್ದರೂ ಎಲ್ಲಕ್ಕೂ ಸಂಬಂಧವಿರುವುದು ಸ್ಪಷ್ಟ. .......(ಇನ್ನೂ ಇದೆ)

ಏನನ್ನಿಸಿತು? ಏನಿದು "ಇನ್ನೂ ಇದೆ" ಅಂತ ಹಾಕಿದ್ದಾನಲ್ಲ ಅಂತ ಅನ್ನಿಸುತ್ತಿರಬೇಕಲ್ಲ? ಸುಮ್ಮನೆ ಅಂತರ್ಜಾಲದಲ್ಲಿ ಆನ್‌ಲೈನ್ ನಿಘಂಟೊಂದನ್ನು (ಪ್ರೊ.ಜಿ.ವೆಂಕಟಸುಬ್ಬಯ್ಯ ಅವರದ್ದು) ತಿರುವಿಹಾಕುತ್ತಿದ್ದಾಗ "ವಿರಾಮ ಚಿಹ್ನೆಗಳ ಬಳಕೆಯ" ಬಗ್ಗೆ ಒಂದು ಒಳ್ಳೆಯ ಲೇಖನ ಓದಿದೆ. ಚೆನ್ನಾಗಿದೆ, ಎಲ್ಲರೂ ಒಮ್ಮೆ ಓದುವಂಥ/ಓದಬೇಕಾದ ಲೇಖನ ಅನ್ನಿಸಿತು. ಯಾವತ್ತಾದರೂ ತುರ್ತು ಅಗತ್ಯ ಬಿದ್ದಾಗ ಚುರುಕಾಗಿ ಅನುಮಾನ ಪರಿಹರಿಸಿಕೊಳ್ಳಲು ಸಹಾ ಇದನ್ನು ಉಪಯೋಗಿಸಬಹುದು ಅನ್ನಿಸಿತು (ಒಂದು ರೀತಿಯ Ready Reckoner ತರಹ). ಅದರ ಕೊಂಡಿ ಇಲ್ಲಿದೆ: ವಿರಾಮ ಚಿಹ್ನೆಗಳ ಬಗ್ಗೆ... ಒಮ್ಮೆ ಓದಿ ನೋಡಿ ಏನನ್ನಿಸಿತು ಹೇಳುತ್ತೀರಾ?

- ಶ್ಯಾಮ್ ಕಿಶೋರ್

Rating
No votes yet