ವೇದ ಸಾರ,ಬೆಲೆ ಮತ್ತು ಮಾಣಿಕ್ಯ.

ವೇದ ಸಾರ,ಬೆಲೆ ಮತ್ತು ಮಾಣಿಕ್ಯ.

ವೇದ ಸಾರ.

ಆರು-ಮೂರರ
ಊರಲಿ
ಜಾರಿ
ಗೋರಿಯಾಗದ
ವೀರ
ಯಾರು?

ಆರು
ಅರಿಗಳ
ಅರಿತ
ಧೀರ,
ಮೂರು
ಗುಣಗಳ
ಮರೆತ
ಶೂರ,
ಸುರವ
ವರಿಸಿ,
ಅಸುರವ
ಉರಿಸಿ,
ಅರ್ದನಾರಿಯ
ಊರಿಗೋದವ.

ಬೆಲೆ

ಅರ್ಜುನ-ಅಶ್ವತ್ಥಾಮರ,

ಪುತ್ರ-ಪಿತೃ

ಶೋಕದ

ಬೆಲೆ

ಏಕಲವ್ಯನ ಅಂಗುಷ್ಠಿಕ.

ಮಾಣಿಕ್ಯ

ಮೌನ
ಮಾತೆಯಾದರೆ,
ಮಾತು
ಮಗು.
ಮಗು
ಬೆಳೆದಷ್ಟು
ಮುಗ್ಧತೆಯ
ಮಲಿನ.
ಮಾತು
ಬೆಳೆದಷ್ಟು
ಮೌಲ್ಯನಾಶ.
ಮುಗ್ಧತೆಯನ್ನು
ಉಳಿಸಿಕೊಂಡ
ಮನುಷ್ಯನ
ಮಾತು
ಮಾಣಿಕ್ಯ.

ಅಹೋರಾತ್ರ.

Rating
No votes yet