ಶುಭಕೋರುವ ಯುಗಾದಿ
ಶ್ರೀಖರನ ಭರದಿಂ ಹಿಂದೆ ಸರಿಸುತ
ನಂದನಾಗಮನ ಹರ್ಷದಿಂದಾಗಿದೆ
ದಯೆ ಕರುಣೆ ಮಮತೆಯಿಂ ಬಾಳಿರೆನುತಿದೆ
ನಲ್ನುಡಿಗಳಿಂ ನಮ್ಮನೆಲ್ಲ ಹರಸೆ ಬಂದಿದೆ
ಸ್ವಾಗತಿಸಿ ಹೊಸ ವರ್ಷವ ಹರ್ಷದಿಂದೆನುತಿದೆ
ಗತವೈಭವವ ಮರಳಿತರಲು ಬಯಸಿದೆ
ತಿರೆಯ ಸೊಬಗ ಉಳಿಸಿ ಬೆಳೆಸಿರೆನುತಿದೆ
ಸುಖ ಶಾಂತಿ ಸಮೃದ್ಧಿಯ ನೀಡಲೆಂದೆ ಬಂದಿದೆ
ತನು ಮನಕೆ ಸಂತೃಪ್ತಿಯ ನೀಡ ಬಯಸಿದೆ
ಯುಗದ ತಿಮಿರ ಕಳೆದು ಬೆಳಕಚೆಲ್ಲ ಬಯಸಿದೆ
ಗಾನ ಕೋಗಿಲೆಯ ಸುಸ್ವರದ ಇಂಪ ಬಿತ್ತರಿಸಿದೆ
ದಿವಿಜ ಲೋಗದ ಬೆಡಗ ಭುವಿಗೆ ನೀಡ ಬಂದಿದೆ
ಗೆಲುವು ಸದಾ ನಿಮ್ಮ ಬಾಳಿಗಿರಲಿ ಎನುತಿದೆ
ಶುಭದ ನುಡಿಯ ನುಡಿಯಿರೆನುತ ನುಡಿದಿದೆ
ಭರವಸೆಗಳ ಬಾಳಿಗಿತ್ತು ಶುಭವ ನಮಗೆ ಕೋರಿದೆ
ವಸಂತದನಾಗಮನಕೆ ಚೈತ್ರ ಚಿತ್ತಾರ ಬರೆದಿದೆ
ಕೋರಿಕೆಗಳ ಆಲಿಸಿ ಈಡೇರಿಸಲೆಂದೆ ಬಂದಿದೆ
ರುಚಿ ಯಾದ ಹೋಳಿಗೆಯೂಟವ ಮೆಲ್ಲಿರೆಂದಿದೆ
ವನದೇವಿಗೆ ಚಿಗುರಿನುಡಿಗೆ ತೊಡುಗೆ ತೊಡಿಸಿದೆ
ಬೇವು ಬೆಲ್ಲ ತಿಂದು
ಒಳ್ಳೆ ಮಾತನಾಡುವ
ಕಹಿ ಸಿಹಿಯನುಂಡು
ಕಷ್ಟ ಸುಖವ ಸಮದಿಕಾಣುವ
ಸಾಮರಸ್ಯದಿಂದ ಎಲ್ಲ ಬಾಳುವ
ಚೈತ್ರದ ಚಿಗುರು ನಮ್ಮ ಬಾಳ ಬಂಗಾರವಾಗಿಸಲೆನುತ
ಉಗಾದಿಯ ಶುಭಾಶಯಗಳನ್ನು ಕೋರುವ