ಸಂಘ ಸಂಸ್ಥೆಗಳು ಮತ್ತು ನಮ್ಮ ಸಮಾಜ - ವಾಕ್ಪಥದಲ್ಲಿ ನನ್ನ ಮಾತು

ಸಂಘ ಸಂಸ್ಥೆಗಳು ಮತ್ತು ನಮ್ಮ ಸಮಾಜ - ವಾಕ್ಪಥದಲ್ಲಿ ನನ್ನ ಮಾತು

ಚಿತ್ರ

 ಸಂಘ ಸಂಸ್ಥೆಗಳು ಮತ್ತು ನಮ್ಮ ಸಮಾಜ
ಎಲ್ಲ ವಾಕ್ಪಥಿಕರಿಗೆ ನಲ್ಮೆಯ  ನಮಸ್ಕಾರ,
 ವಾಕ್ಪಥಕೆ ವರ್ಷ ತುಂಬಿಸುವ ಸಂದರ್ಬದಲ್ಲಿ ,  ವಾಕ್ಪಥದ ಹನ್ನೆರಡನೆ ಈ ಹೆಜ್ಜೆಯಲ್ಲಿ ನನಗೆ ಮಾತನಾಡಲು ಸಿಕ್ಕಿರುವ ಈ ಅವಕಾಶ ನನಗೆ ಸಂತಸ ತಂದಿದೆ, ನಾನು 'ಸಂಘ ಸಂಸ್ಥೆಗಳು ಮತ್ತೆ ಸಮಾಜ' ಎಂಬ ವಿಷಯದ ಬಗ್ಗೆ ಮಾತನಾಡಲು ಇಷ್ಟ ಪಡುವೆ.
ಇಂದಿನ ಸಮಾಜದಲ್ಲಿ ನಮ್ಮ ಸುತ್ತಲು ಹಲವು ಸಂಘ್ಹ ಸಂಸ್ಥೆಗಳು ಗುಂಪುಗಳು ಬೆಳೆದು ನಿಂತಿರುವುದು ಕಾಣಬಹುದು. ರಸ್ತೆಯೊಂದರಲ್ಲಿ ನಾವು ಅಡ್ಡಾಡಿದರೆ ಕನಿಷ್ಟ ಎರಡು ಮೂರದರು ಯಾವುದೆ ಸಂಘ ಸಂಸ್ಥೆಗಳ ನಾಮ ಪಲಕ ಕಾಣಬಹುದು.  ಅವುಗಳನ್ನು ಗಮನಿಸಿವಾಗ ಅನ್ನಿಸುತ್ತೆ ಪ್ರತಿ ಸಂಘ ಸಂಸ್ಥೆ ತನ್ನದೆ ಆದ ಉದ್ದೇಶ ಚಟುವಟಿಕೆಗಳಿರುತ್ತದೆ ಎಂದು. ಇದನ್ನೆಲ್ಲ ನೋಡುತ್ತ ನಮ್ಮಲ್ಲೊಂದು ಪ್ರಶ್ನೆ ಏಳುತ್ತದೆ, ಈಗ ಕಾಣುತ್ತಿರುವ ಇಷ್ಟೊಂದು ಸಂಘ್ಹ ಅಥವ ಸಂಸ್ತೆಗಳು ಹೇಗಾದವು ಇವುಗಳ ಹುಟ್ಟು ಹೇಗಾಯಿತು , ಮೂಲಭೂತವಾಗಿ ಇವುಗಳ ಅಗತ್ಯವಾದರು ಏನು, ಇವುಗಳ ಹುಟ್ಟು ಬೆಳವಣಿಗೆಗಳ ಇತಿಹಾಸ ಏನಿರಬಹುದು.
ಸ್ಥೂಲವಾಗಿ ನಾವು ಈ ಸಂಘ್ಹ ಸಂಸ್ಥೆಗಳನ್ನು ಅವುಗಳ ಉದ್ದೇಶ ಗಮನಿಸಿ  ಸ್ಥಾಪನೆಗೆ , ಎರಡು ಪ್ರಮುಖ ಕಾರಣಗಳನ್ನು ಕಾಣಬಹುದು.
೧. ಒಂದು , ವ್ಯವಸ್ಥೆಯ ವಿರುದ್ದ ಹೋರಾಡಲು
೨. ಎರಡು, ತಮ್ಮ ಆಸಕ್ತಿ ಗುರಿ, ಉದ್ದೇಶ ಸಾದನೆಯ ಸೀಮಿತ ಉದ್ದೇಶ ಹಾಗು ಅಗತ್ಯಕ್ಕಾಗಿ.
ಇತಿಹಾಸ ಗಮನಿಸಿವಾಗ ವಿಷಿಷ್ಟವಾದ ವಿಷಯವೊಂದು ಗೋಚರಿಸುತ್ತದೆ, ಜನಗಳನ್ನು ಪಾಲಿಸುತ್ತಿರುವ ವ್ಯವಸ್ಥೆ ಅದು ಯಾವುದೆ ಆಗಿರಲಿ ರಾಜಾಡಳಿತ, ಕಮ್ಯೂನಿಸಂ, ಅಥವ ಪ್ರಜಾಪ್ರಭುತ್ವ, ಅಲ್ಲಿ ಆಡಳಿತ ವ್ಯವಸ್ತ್ಯೆಗೆ ವಿರುದ್ದವಾದ ಅಭಿಪ್ರಾಯವೊಂದು ನಿರಂತರವಾಗಿ ರೂಪಗೊಳ್ಳುತ್ತ ಹೆಪ್ಪುಗಟ್ಟುತ್ತ ಹೋಗುತ್ತದೆ. ಮತ್ತು ಇಂತಹ ಆಡಳಿತ ವ್ಯವಸ್ಥೆಯನ್ನು ಏಕವ್ಯಕ್ತಿಯಾಗಿ ವಿರೋದಿಸುವುದು ಸಾದ್ಯವಾಗುವುದೆ ಇಲ್ಲ, ಅದು ಅರಣ್ಯ ರೋದನವಾಗಿಬಿಡುತ್ತದೆ, ಆಡಳಿತ ವ್ಯವಸ್ಥೆ ಅಂತಹ ವಿರೋದವನ್ನು  ಸುಲುಭವಾಗಿ ಧಮನಗೊಳಿಸಿಬಿಡುತ್ತದೆ, ಇಂತಹ ಸಮಯದಲ್ಲಿ ಹುಟ್ಟಿಕೊಳ್ಳುವುದೆ ಸಂಘಸಂಸ್ಥೆಗಳು. ಆಡಳಿತ ವಿರೋದಿ ಗುಂಪುಗಳು , ಇವುಗಳೆಲ್ಲ ಬಹುತೇಕ ರಾಜಕೀಯ ಪ್ರೇರಿತ,
 ಮತ್ತೆ ಸಹಜ ಶಾಂತ ಪರಿಸ್ಥಿಥಿಯಲ್ಲಿ ರೂಪಗೊಳ್ಳೂವ ಸಂಘಸಂಸ್ಥೆಗಳು , ಇವುಗಳ ಉದೇಶ ಬಹುಮುಖ, ಸಮಾಜ ಸೇವೆ, ಸಾಹಿತ್ಯ ಸಂಗೀತ, ಕಲೆ ನಾಡು ನುಡಿಗಳಿಗೆ ಉತ್ತೇಜನ, ಕೆಲವೊಮ್ಮೆ ಒಬ್ಬ ವ್ಯಕ್ತಿ ತನ್ನ ಆಕಾಂಕ್ಷೆ ಗುರಿ ಉದ್ದೇಶ ಸಾದಿಸಲು ಸಹ ಸಂಘಸಂಸ್ಥೆಗಳು ಜನುಮ ತಾಳುತ್ತವೆ.
ಭಾರತದಲ್ಲಿ ಸಂಘ ಸಂಸ್ಥೆಗಳ ಸ್ವರೂಪ ಅವಲೋಕಿಸಿದಾಗ ಸಹಜವಾಗಿಯೆ ಇಲ್ಲಿ ಧಾರ್ಮಿಕ ಹಾಗು ಸಾಮಜಿಕ ಸ್ಥಿಥಿಗಳು ಸಂಘ ಸಂಸ್ಥೆಗಳಿಗೆ ಕಾರಣವಾಗಿವೆ, ಇತಿಹಾಸ ಗಮನಿಸುತ್ತ ಹಿಂದೆ ಹಿಂದೆ ಹೋದರೆ ಗೌತಮ ಬುದ್ದ ಹಾಗು ಅವನ ಅನುಯಾಯಿಗಳ ಸ್ಥಾಪಿಸಿದ ಸಂಘವೆ ಮೊದಲಿಗೆ ಇದ್ದಂತೆ ಕಾಣುತ್ತದೆ, ಅಲ್ಲಿ ಸಂಘಕ್ಕೆ ಎಷ್ಟು ಪ್ರಾಶಸ್ತ್ಯ ಇದ್ದೀತೆಂದರೆ, ಈ ಘೋಶಣೆ ಗಮನಿಸಿ
ಬುದ್ದಂ ಶರಣಂ ಗಚ್ಚಾಮಿ, ಧರ್ಮಂ ಶರಣಂ ಗಚ್ಚಾಮಿ ಸಂಘಂ ಶರಣಂ ಗಚ್ಚಾಮಿ... ಸಂಘಕ್ಕೆ ಶರಣಾದರೆ ನಿನಗೆ ರಕ್ಷಣೆ ಸಿಗುತ್ತದೆ ಎಂಬ ಅಭಯ ನೀಡುತ್ತದೆ. 
ಇಂತಹ ಬೌದ್ದ ಧರ್ಮ ತನ್ನ ಕಬಂದ ಬಾಹುಗಳನ್ನು ಪಸರಿಸುವಾಗ ಹಿಂದು ಧರ್ಮ ಕಂಗಾಲದಂತೆ ಕಾಣುತ್ತದೆ,  ಆ ನಂತರದಲ್ಲಿ ಮೊದಲ ಬಾರಿಗೆ ಹಿಂದುಗಳಿಗೆ ಒಂದಡೆ ಸೇರುವ ಅವಶ್ಯಕತೆ ಉಂಟಾಗಿದೆ. ಅದರ ಪರಿಣಾಮವೆ ಹಿಂದು ಧರ್ಮದಲ್ಲಿ ಅಲ್ಲಿಯವರೆಗು ಇರದಿದ್ದ ಮಠಗಳ ಅವಶ್ಯಕತೆ ಕಾಣಿಸಿ ಶಂಕರಾಚಾರ್ಯರು ಭಾರತದ ನಾಲ್ಕು ದಿಕ್ಕಿನಲ್ಲಿ ಮಠಗಳ ಸ್ಥಾಪನೆಗೆ ಮುಂದಾದರು.
ಮತ್ತೊಂದು ಆಶ್ಚರ್ಯ ಗಮನಿಸಿ, ಸ್ವಲ್ಪ ವೇದಾಂತ ಹಾಗು ಧರ್ಮವನ್ನು ಮರೆತು ಇದನ್ನು ಆಲಿಸಿ , ಶಂಕರರು  'ಅಹಂ ಬ್ರಹ್ಮಾಸ್ಮಿ' ಎಂದರು, ತಮ್ಮ ಅದ್ವೈತ ಸಿದ್ದಾಂತ ಪ್ರತಿಪಾದಿಸುತ್ತ, ಎಲ್ಲರಲ್ಲಿ ಇರುವ ಆತ್ಮ ಒಂದೆ, ಅವನು ಬ್ರಾಹ್ಮಣನಿರಲಿ ಶೂದ್ರನಿರಲ್ಲಿ ಎಲ್ಲರು ಒಂದೆ ಆತ್ಮದ ಸ್ವರೂಪ ಎನ್ನುವ ಅವರ ಮಾತಿನಲ್ಲಿ , ಹಿಂದುಗಳಲ್ಲಿ ಏಕತೆ ಸಾರುವ, ಸಂಘಟನೆಯ ಪ್ರಯತ್ನವಿದೆಯೆಂದೆ  ನನಗೆ ಅನ್ನಿಸುತ್ತೆ. ಇದು ನನಗೆ ಕಾಣಿಸಿದ ವೇದಾಂತಕ್ಕೆ ಹೊರತಾದ ಕಾರಣವಷ್ಟೆ.
 ನಂತರ ಭಾರತದಲ್ಲಿ  ಇಂತಹ ದೊಡ್ಡ ಸ್ವರೂಪದ ಸಂಘಟನೆಯ ಅವಶ್ಯಕತೆ ಕಾಣಿಸುವುದು, ಸ್ವತಂತ್ರ್ಯ ಹೋರಾಟದಲ್ಲಿ. ಬ್ರೀಟೀಷ್ ಏಕ ಚಕ್ರಾದಿಪತ್ಯವನ್ನು ಮುರಿಯಲು, ಸಂಘಟೆನೆಯ ಅವಶ್ಯಕತೆ ಇದ್ದಿತ್ತು. ಆಗ ತಾನೆ ದಕ್ಷಿಣ ಆಫ್ರಿಕದಿಂದ ಮರಳಿದ ಮೋಹನದಾಸ ಕರಮಚಂದ ಗಾಂದಿಯವರು ಸೇರಿದ ಬಾರತದ ಕಾಂಗ್ರೆಸ್ ಆಗಲಿ ಸುಬಾಸ್ ಚಂದ್ರರ ಅಜಾದ್ ಸೈನ್ಯವಾಗಲಿ ಇವೆಲ್ಲ ಒಬ್ಬ ವ್ಯಕ್ತಿಯ ಹೋರಾಟವಾಗಿರದೆ ಸಂಘಟನೆಯ  , ಸಂಘಗಳ ಸಂಸ್ಥೆಗಳ ರೂಪಗಳೆ. ಹಾಗೆಯೆ ರಾಜರಾಮ ಮೋಹನರ ಆರ್ಯಸಮಾಜವಾಗಲಿ ರಾಮಕೃಷ್ಣ ಮಠಗಳೆ ಆಗಲಿ ಇವೆಲ್ಲ ಸ್ವತಂತ್ರ ಹೋರಾಟ ಸಮಯದಲ್ಲಿ ಯಾವುದೊ ಕಾರಣಕ್ಕೆ ಜನರನ್ನು ಒಂದೆಡೆ ಸೇರಿಸುತ್ತಿದ್ದ ಸಂಸ್ಥೆಗಳು, ಜನರಲ್ಲಿ ಅಜ್ಞಾನ ತೊಲಗಿಸಿ ಜಾಗೃತಿ ಮೂಡಿಸಲು ಪ್ರಯತ್ನವಷ್ಟೆ.
 ಸ್ವತಂತ್ರಾನಂತರವು ಬಾರತದಲ್ಲಿ ಸಂಘ ಸಂಸ್ಥೆಗಳು ವಿರಾಟ್ ಸ್ವರೂಪದಲ್ಲಿ ಬೆಳೆದು ನಿಂತವು. ಅದು ಮದರ್ ಥೆರಿಸಾರ 123 ದೇಶಗಳಲ್ಲಿ ೬೧೦ ಸೇವಾ ಸಂಸ್ಥೆಗಳ ಸಾಮಜಿಕ ಸೇವೆಯ
ಸ್ವರೂಪವೆ ಆಗಿರಲಿ,  ಅಥವ ಕರ್ನಾಟಕದ ನೀನಾಸಂ ರೀತಿಯ  ನಾಟಕ  ಸಂಸ್ಥೆ , ಹಾಗೆಯೆ ಸಾಹಿತ್ಯ ಕ್ರೀಡೆಗಳನ್ನು ಬೆಳೆಸುವ ಸಂಘಗಳೆ ಆಗಿರಲಿ ಎಲ್ಲವು ಏಕ ಸ್ವರೂಪ.
 
ಯಾವುದೆ ಶಕ್ತಿಯಾಗಿರಲಿ ಒಳ್ಳೆಯದಕ್ಕೆ ಉಪಯೋಗವಾಗುವಂತೆ ಕೆಟ್ಟ ಉದ್ದೇಶಕ್ಕು ಬಳಕೆಯಾಗುತ್ತದೆ ಹಾಗೆ ಸಂಘಸಂಸ್ಥೆಗಳು ಕೆಲವೊಮ್ಮೆ ಧೂರ್ತ ಉದ್ದೇಶಕ್ಕು ಸ್ಥಾಪನೆಯಾಗಬಹುದು, ಕೆಲವೊಮ್ಮೆ ಸರ್ಕಾರಕ್ಕೆ ಕಟ್ಟ ಬೇಕಾದ ಸುಂಕಗಳನ್ನು ಉಳಿಸುವ ಚಿಕ್ಕ ಉದ್ದೇಶಕ್ಕು ಸಂಸ್ಥೆಗಳನ್ನು ಸ್ಥಾಪಿಸಿರಬಹುದು ಅನ್ನುವುದೆ ಆಶ್ಚರ್ಯ ಬಾರತದಲ್ಲಿ ಬೃಹುತ್ ಉದ್ಯಮಗಳನ್ನು ನಡೆಸುವ ಸಂಸ್ಥೆಗಳೆ ಈ ರೀತಿ ಸೇವೆಯ ಹೆಸರಿನ ಸಂಸ್ಥೆಗಳನ್ನು ಕಟ್ಟುತ್ತವೆ ಮತ್ತು ಅದಕ್ಕೆ ಧಾರ್ಮಿಕ ಸ್ವರೂಪವಿರುವದರಿಂದ ಯಾರು ಪ್ರಶ್ನಿಸುವರಿಲ್ಲ..
ಕಾಲ ಅದುನಿಕವಾದಂತೆ , ಎಲ್ಲ ಬದಲಾವಣೆ ಜೊತೆಗೆ ಸಂಘ ಸಂಸ್ತೆಗಳ ಅಥವ ಗುಂಪು ಕಟ್ಟುವ ವಿದಾನ ಹಾಗು ಕಾರಣಗಳು ಬದಲಾಗುತ್ತ ಹೋದವು. ಸಮಾಜಸೇವೆ , ಕಲೆ ನಾಟಕ ಸಂಗೀತ ಎಂಬ ಕಾರಣಗಳ ಜೊತೆಗೆ ಅಭಿಮಾನಗಳ ಸಂಘಗಳು ಹುಟ್ಟಿಕೊಂಡವು , ಕರ್ನಾಟಕದಲ್ಲಿ ರಾಜ್ ಅಭಿಮಾನಿ, ವಿಷ್ಣು ಅಭಿಮಾನಿಗಳ ರೀತಿಯ ಸಂಘಗಳು ಜನ್ಮ ತಾಳಿದವು. ಅವುಗಳ ಸಿಮೀತ ಉದ್ದೇಶ ತಾವು ಮೆಚ್ಚಿದ ನಾಯಕನ ಅರಾದನೆ, ಅದಕ್ಕೆ ಕೆಲವೊಮ್ಮೆ ಸಮಾಜ ಸೇವೆಯ ಮುಖವು ಇತ್ತು.
ತಂತ್ರಜ್ಞಾನ ಬೆಳೆದಂತೆ ಸಂಘಗಳ ರೂಪ ಮತ್ತೆ ಬದಲಾಯಿತು, ಅಂತರ್ಜಾಲದಲ್ಲಿ ನಿಮ್ಮ ತಾಣಗಳಲ್ಲಿ ನಿಮಗೆ ಬೇಕಾದ ಗುಂಪುಗಳನ್ನು ಕಟ್ಟಬಹುದು ಅದನ್ನು ಇಷ್ತಪಟ್ಟು ಸೇರುವವರು ಹಲವರು. ಸಾಮಾಜಿಕ ತಾಣಕ್ಕೆ ಉದಾಹರಣೆ ನಮ್ಮ 'ಸಂಪದ' ಕಮ್ನಿಟಿಯನ್ನು ನೋಡಬಹುದು ಇದು ಕೇವಲ ಶುದ್ದ ಸಾಹಿತ್ಯವನ್ನು ಬೆಳೆಸಲೆಂದ ಇರುವ ತಾಣ.
ಕೆಲವೊಮ್ಮೆ ಒಬ್ಬ ವ್ಯಕ್ತಿಯನ್ನು ವಿರೋದಿಸಲು ಸಹ ಫೇಸ್ ಬುಕ್ ನಂತ ತಾಣಗಳಲ್ಲಿ ನೀವು 'I Hate...' ರೀತಿಯ ಗುಂಪು  ಕಟ್ಟಬಹುದು 


 ಈ ಹಿನ್ನಲೆಯಲ್ಲಿ  ನಮ್ಮ ಸಂಘ ವಾಕ್ಪಥ .. ಇದರ ಸಿಮೀತ ಉದ್ದೇಶ ಬಾಷಣಕಲೆಯ ಅಭ್ಯಾಸ, ಮಾತಿನ ಮೂಲಕ ಸಮಾಜ ಕಟ್ಟುವ , ಸೇವೆ ಮಾಡುವ ಗುರಿ ನಮ್ಮದು. ಇದನ್ನು ಪ್ರಾರಂಬಿಸಿದ ವರ್ಷದ ಸಂಬ್ರಮದಲ್ಲಿ ನನಗೆ ಮಾತನಾಡಲು ಸಿಕ್ಕಿರುವ ಈ ಸಂದರ್ಬ ನನಗೆ ಸಂತಸ ತಂದಿದೆ.
ಬಹುಷ ಈಚೆಗೆ ಕಸ್ತೂರಿಯಲ್ಲಿ ಓದಿದ ಈ ಪುಟ್ಟ ಲೇಖನದ ಸಾಲುಗಳನ್ನು ಓದಿದರೆ ವಾಕ್ಪಥದ
ಉದ್ದೇಶ ನಿಮಗೆ ಅರ್ಥವಾಗಬಹುದು
ಸಂಕ್ಷೇಪವಾಗಿ ಬರೆಯಿರಿ ಎಂಬುದು ಬರ್ನಾಡ್ ಷಾ ಅವರ ಮುಖ್ಯ ಉಪದೇಶ.ಒಮ್ಮೆ ಅವರು ನಾಲಕ್ಕು ಪುಟಗಳ ಪತ್ರ ಬರೆದು ಕಡೆಯಲ್ಲಿ ಬರೆದರು , ಸಂಕ್ಷಿಪ್ತವಾಗಿ ಬರೆಯಲು ನನಗೆ ಸಮಯವಿರಲಿಲ್ಲ ಎಂದು.
ಅಮೇರಿಕದ ಅಧ್ಯಕ್ಷ ವಿಲ್ಸನ್ನರು ಒಮ್ಮೆ ಹೀಗೆ ಹೇಳೀದ್ದರು "ಹತ್ತು ನಿಮಿಷದ ಬಾಷಣ ಮಾಡಲು ನನಗೆ ಎರಡುವಾರಗಳ ತಯಾರಿ ಬೇಕು,  ಆದರೆ ಒಂದು ತಾಸಿನ ಬಾಷಣ ಮಾಡಲು ಒಂದು ವಾರ ತಯಾರಿ ಸಾಕು" .
              
ಒಬ್ಬರು ಕೇಳಿದರು 'ಹಾಗಿದ್ದಲ್ಲಿ ಎರಡು ತಾಸಿನ ಬಾಷಣಕ್ಕೆ ಎಷ್ಟು ತಯಾರಿ ಬೇಕು?"
ವಿಲ್ಸನ್ನರು ಉತ್ತರಿಸಿದರು  "ಅದಕ್ಕೇನು ತಯಾರಿ ಬೇಡ ಈಗಲೆ ಮಾಡಬಲ್ಲೆ" 
ನನ್ನ ಮಾತುಗಳನ್ನು   ಕೇಳುತ್ತಿರುವ  ಎಲ್ಲ ವಾಕ್ಪಥಿಕರಿಗೆ ನನ್ನ ವಂದನೆಗಳನ್ನು ಅರ್ಪಿಸುತ್ತ ಮಾತು ಮುಗಿಸುತ್ತಿದ್ದೇನೆ.
ಎಲ್ಲರಿಗು ನಮಸ್ಕಾರ.

 

Rating
Average: 3 (2 votes)

Comments