ಸಂಪದ ಗಾನ
ಸಂಪದವೆಂಬುದು ಕನ್ನದ ಪ್ರಾಣ, ನಾಡು ನುಡಿಯ ಹೊಸ ತ್ರಾಣ ||
ಕನ್ನಡ ದೀಪಕೆ ಎಣ್ಣೆಯ ಗಾಣ, ಜಾಣ ಜಾಣೆಯರ ತಾಣ ||ಪ||
ಅಂತರ್ಜಾಲದ ಕನ್ನಡ ಕೊಂಡಿ |
ಲೋಕಜ್ಞಾನಕೆ ಹೊಸ ಬೆಳಕಿಂಡಿ |
ಬೇರಲಿ ಹೀರುತ
ಚಿಗುರನು ಮೊಳೆಸುತ
ಬರೆಯಲಿ ಅಭಿನವ ಇತಿಹಾಸ ||
ಕನ್ನಡ ನುಡಿಯುತ
ಓದುತ ಬರೆಯುತ
ಬದುಕಲಿ ಮೂಡಲಿ ಕಿರುಹಾಸ ||೧||
ಪ್ರತಿದಿನ ಸೇರುವ ಹೊಸ ಕಥೆ ಕವನ |
ಚರ್ಚೆಯ ವಿಚಾರ ಸಚಿತ್ರ ಲೇಖನ |
ಮುಕ್ತ ಮಾಹಿತಿಯ
ವಿಧ ವಿಧ ರೂಪವ
ಪಡೆಯಲಿ ನಿತ್ಯದ ಓದುಗರು ||
ಮಾತಿನ ಪೂಜೆಯ
ಪ್ರಸಾದ ಪಡೆಯುತ
ಹರಿಸಲಿ ಮಮತೆಯ ನಾಡಿಗರು ||೨||
ಆಡುವ ಭಾಷೆಯ ಆಳ ಅಗಾಧ |
ಹಲವು ತಂತಿಗಳು ಸೇರಿ ಸುನಾದ |
ಕನ್ನಡ ಬೆಳೆಸಿರಿ
ಕನ್ನಡ ಉಳಿಸಿರಿ
ಬಳಸಿರಿ ಕನ್ನಡ ಕೀಲಿಮಣೆ ||
ನಮ್ಮನೆ ಭಾಷೆಯ
ದೀಪವ ಹಚ್ಚಲು
ನಾವಲ್ಲದೆ ಇನ್ಯಾರು ಹೊಣೆ? ||೩||
ಸಂಪದ ಗಾನಕ್ಕೆ ಧಾಟಿ ಹಾಕಿ ಹಾಡಿದರೆ ಹೇಗಾಗುತ್ತದೆ ಎಂದು ಇಲ್ಲಿ ಕೇಳಿ :
http://www.esnips.com/doc/246cdc23-f85b-4958-bd69-10b78da0c090/Sampada-Gana
ಹಾಡಿದ್ದು.. ಧಾಟಿ ಹಾಕಿದ್ದು ನನ್ನ ತಂಗಿ.
Rating
Comments
ಉ: ಸಂಪದ ಗಾನ
In reply to ಉ: ಸಂಪದ ಗಾನ by rameshbalaganchi
ಉ: ಸಂಪದ ಗಾನ
ಉ: ಸಂಪದ ಗಾನ
In reply to ಉ: ಸಂಪದ ಗಾನ by gopinatha
ಉ: ಸಂಪದ ಗಾನ
ಉ: ಸಂಪದ ಗಾನ
In reply to ಉ: ಸಂಪದ ಗಾನ by ananthesha nempu
ಉ: ಸಂಪದ ಗಾನ
ಉ: ಸಂಪದ ಗಾನ
In reply to ಉ: ಸಂಪದ ಗಾನ by kpbolumbu
ಉ: ಸಂಪದ ಗಾನ
ಉ: ಸಂಪದ ಗಾನ
In reply to ಉ: ಸಂಪದ ಗಾನ by shivaram_shastri
ಉ: ಸಂಪದ ಗಾನ