ಸವಿನೆನಪೊಂದೆ ಸಾಕು!
ನಿನ್ನ ಸವಿನೆನಪೊಂದೆ
ನೀ ಕೊಟ್ಟ ಕಾಣಿಕೆ|
ಹತ್ತು ಹಲವು ಕನಸುಗಳು
ಗರಿಗೆದರಿ ಹಾರಿದವು
ಅಂದಿನ ಆ ದಿನಗಳಲ್ಲಿ||
ಗಲ್ಲಕ್ಕೆ ಅಚ್ಚೊತ್ತಿದ್ದ ಸಿಹಿ ಮುತ್ತಿನ
ರಸಾನುಭವದ ಪುಳಕವು
ಮೈ ಮನದಲ್ಲಿ||
ಕೈ ಕೈ ಸಂಗಮದ ಸಮಯ
ಹರಿದ ರೊಮಾಂಚನದ ಮಿಂಚು
ಈಗಲೂ ಮಿಂಚುತ್ತಿದೆ ಆದರೆ ಬೆಳಕಿಲ್ಲ||
ಮರಳನಲ್ಲಿ ಕಟ್ಟಿದ ಗೋಪುರ
ನೀರ ಅಲೆಗೆ ಕುಸಿದು ವ್ಯಥೆಯಾಗಿದೆ,
ಅದನ್ನೆ ನೆನಪಿಸುವುದು ಬೇಕಿಲ್ಲ||
ಸಿಹಿ ನೆನಪು ಹತ್ತಿದ್ದರೂ
ಕಹಿಯನ್ನು ಓಡಿಸಲಾರವು ಅವುಗಳಿಗೆ
ದೇಹವಿಲ್ಲದಿದ್ದರೂ ಕಾಡದೆ ಬಿಡಲಾರವು||
ಎದೆಯ ಪೆಟ್ಟಿಗೆಯಲ್ಲಿ ನೆಲೆಯಾಗಿ
ಆಗಾಗ್ಗೆ ಬುಗ್ಗೆಯಾಗಿ
ಚುಮ್ಮಿ ಮೈಮನ ತಂಪಾದವು!!
Rating
Comments
ಉ: ಸವಿನೆನಪೊಂದೆ ಸಾಕು!
In reply to ಉ: ಸವಿನೆನಪೊಂದೆ ಸಾಕು! by pavangudi
ಉ: ಸವಿನೆನಪೊಂದೆ ಸಾಕು!
ಉ: ಸವಿನೆನಪೊಂದೆ ಸಾಕು!
In reply to ಉ: ಸವಿನೆನಪೊಂದೆ ಸಾಕು! by makrumanju
ಉ: ಸವಿನೆನಪೊಂದೆ ಸಾಕು!
ಉ: ಸವಿನೆನಪೊಂದೆ ಸಾಕು!
In reply to ಉ: ಸವಿನೆನಪೊಂದೆ ಸಾಕು! by malathi shimoga
ಉ: ಸವಿನೆನಪೊಂದೆ ಸಾಕು!
In reply to ಉ: ಸವಿನೆನಪೊಂದೆ ಸಾಕು! by malathi shimoga
ಉ: ಸವಿನೆನಪೊಂದೆ ಸಾಕು!
ಉ: ಸವಿನೆನಪೊಂದೆ ಸಾಕು!
ಉ: ಸವಿನೆನಪೊಂದೆ ಸಾಕು!