೧) ಎಲ್ಲಾರೂ ನಮ್ಮವರೇ.
೨) ನಮ್ಮ ಬೆನ್ನು ನಮಗೆ ಕಾಣುವದಿಲ್ಲ.
೩) ಮನಸ್ಸು ಸ್ವಚ್ಚವಾಗಿರಬೇಕು.
೪) ಯಾರ ಜತೆಗೂ ಧ್ವೇಷ ಕಟ್ಟಿಕೋಬಾರದು.
೫) ಸಿಟ್ಟಿನ ಕೈಯಲ್ಲಿ ಬುದ್ದಿಯನ್ನು ಕೊಡಬಾರದು.
೬) ಯಾರ ಭಾಗ್ಯ ಹೇಗೋ ಯಾರು ಬಲ್ಲರು ? ತಿಪ್ಪೆ ಉಪ್ಪರಿಗೆ ಆಗಬಹುದು , ಉಪ್ಪರಿಗೆಯು ತಿಪ್ಪೆ ಆಗಬಹುದು
೭) ಯಾವಾಗಲೂ ಒಳ್ಳೆಯ ಮಾತಾಡಬೇಕು .
೮) ಕೈಲಾದ ಒಳ್ಳೆಯ ಕೆಲಸ ಮಾಡಬೇಕು.
೯) ದೇವರು ನನಗೆ ಏನೂ ಕಡಿಮೆ ಮಾಡಿಲ್ಲ , ಕೊರತೆ ಅನಿಸಿದರೆ ನಾವು ಪಡೆದುಕೊಂಡು ಬಂದದ್ದು ಅಷ್ಟೇ ಇರುತ್ತದೆ.
ಇವು ನಾನು ಬಲ್ಲ ಒಂದು ಸಾರ್ಥಕ, ಸಂತೃಪ್ತ , ತುಂಬು ಬದುಕಿನ ಜೀವದ ಜೀವನದೃಷ್ಟಿ , ನಮ್ಮ ಪಾಲಿನ ದಾರಿದೀಪಗಳು ಅಂತ ನನಗೆ ಅನಿಸುತ್ತದೆ.
ಈ ಪಟ್ಟಿಗೆ ಮತ್ತೊಂದು ಸೇರಿಸಬಹುದು
೧೦)ನಗ್ ನಗ್ತಾ ಇರಬೇಕು , ನಗಿಸ್ತಾ ಇರಬೇಕು , ಖುಷಿಯಾಗಿ ಇರಬೇಕು
- shreekant.mishrikoti's blog
- Log in or register to post comments
- 579 ಹಿಟ್ಸ್
ಪ್ರತಿಕ್ರಿಯೆಗಳು
ಉ: ಸುಖೀ, ಸಂತೃಪ್ತ ಮತ್ತು ಸಾರ್ಥಕ ಬದುಕಿನ ಸೂತ್ರಗಳು
10ನೆಯದು ಮೊದಲು ಬರಬೇಕು! :)