ಸುಮ್ನೆಹೀಗೆ-೧೪

ಸುಮ್ನೆಹೀಗೆ-೧೪

ಸುಡುವ ರಣಬಿಸಿಲು
ಮನೆಯೊಳಗೆ ನಳ್ಳಿಯಲಿ
ಸುರಿಯುತಿರುವ ನೀರು
ಸೌಕರ್ಯವೊಂದು ವರ

ಸುರಿಯುತಿರುವ ಜಡಿಮಳೆ
ಮನೆಯೊಳಗೆ ನಳ್ಳಿಯಲಿ
ತೊಟ್ಟಿಕ್ಕದ ನೀರು
ಸೌಕರ್ಯದ ಅಪಸ್ವರ
ಅವಲಂಬನೆಯ ಪ್ರತಿಫಲ

Rating
No votes yet

Comments

Submitted by nageshamysore Thu, 08/22/2013 - 19:51

ಸುರಿದು ಹಾಳಾಗುವ ಮಳೆಯ
ಹಿಡಿದು ಆಳಾಗಿಸದೆ ಮೈ ಮರೆವವರ
ಅಜ್ಞಾನಕೆ ವಿಜ್ಞಾನದಲಿದೆಯೆ ಪರಿಹಾರಾ?

ಪ್ರೇಮಾಶ್ರೀಯವರೆ -" 'ನೀರಾ' ವರಿ" ಚೆನ್ನಾಗಿದೆ :-)