ಸ್ಪೆಶಲ್ ಚಬ್ಬೀಸ್ -ಹಿಂದಿ ಚಿತ್ರ .
ಸರ್ವೇ ಸಾಧಾರಣವಾಗಿ ಹಿಂದಿ ಸಿನೆಮಾಗಳನ್ನು ನೋಡುವವರು ಖಂಡಿತವಾಗಿ ಒಂದಾದರೂ ಅಕ್ಷಯ್ ಕುಮಾರ್ ಚಿತ್ರವನ್ನು ನೋಡಿರದೆ ಇರರು-ಹಾಗೆಯೇ ಅಕ್ಷಯ್ ಕುಮಾರ್ ಮೊದಲ ಅಕ್ಷನ್ ಚಿತ್ರಗಳು ನಂತರ ಹಾಸ್ಯ -ಪಾತ್ರಗಳಿಗೆ ಸೀಮಿತಗೊಂಡ ಬಗೆಗೂ ಗೊತ್ತಿರುತ್ತೆ...
ಎಲ್ಲ ಟಾಪ್ ನಟರ ಹಾಗೆ ಏರು ಪೇರಿನ ವೃತ್ತಿ ಬದುಕಲ್ಲಿದ್ದ ಅಕ್ಷಯ್ ಕುಮಾರ್ ಅದೃಷ್ಟ ಖುಲಾಯಿಸಿದ್ದು ಸಿಂಗ್ ಇಸ್ ಕಿಂಗ್ ಚಿತ್ರ-ಆಮೇಲೆ ಬಂಡ ಎಲ್ಲ ಚಿತ್ರಗಳೂ ಅಪಾರ ಹಣ ಗಳಿಸಿ ಮೊದಲ ೧೦೦ಕೋಟಿ ಕ್ಲಬ್ನಲ್ಲಿನ ಒಬ್ಬ ನಟರಾದರು. ಹೀಗೆ ಅಕ್ಷನ್ ನಂತರ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತ ಹಾಸ್ಯಕ್ಕೆ ಸೀಮಿತಗೊಂಡ ಆಗಾಗ ಅಕ್ಷನ್ ಚಿತ್ರಗಳಲ್ಲಿ ನಟಿಸುವ ಇನ್ನೊಬ್ಬ ಯಶಸ್ವಿ ನಟ ಅಜಯ್ ದೇವಗನ್. ಈ ಹಿಂದೆ ಅಕ್ಷಯ್ ತೆಗೆದ ಬಹುಪಾಲು ಚಿತ್ರಗಳು ಹಾಸ್ಯದ ಹಣೆ ಪಟ್ಟಿ ಹೊತ್ತ ನಾನ್ಸೆನ್ಸ್ ಚಿತ್ರಗಳು ಎಂದರೆ ಕೆಲವರಿಗೆ ಬೇಜಾರಗಬಹ್ದು.. ಆದ್ರೆ ಈ ಸ್ಪೆಶಲ್ ಚಬ್ಬೀಸ್ ಚಿತ್ರವನ್ನು ಮಾತ್ರ ಯಾವದೇ ಮುಲಾಜಿಲ್ಲದೆ ನೋ ನಾನ್ಸೆನ್ಸ್ ಚಿತ್ರ ಎನ್ನಬಹ್ದು.
ಇಡೀ ಚಿತ್ರದಲ್ಲಿ ಆವರಿಸಿ ಮಜಾ ಕೊಡುವ ಅಭಿನಯ ನೀಡಿ ಚಿತ್ರವನ್ನು ಸಹ್ಯವಾಗುವ-ನಕ್ಕು ಸುಸ್ತಾಗುವ-ಒಂದೊಳ್ಳೆ ಚಿತ್ರ ನೋಡಿದ ಫೀಲ್ ಬರುವ ಹಾಗೆ ಮಾಡುವವರು ಎಂದರೆ ಅಕ್ಷಯ್ ಕುಮಾರ್-ಅನುಪಮ್ ಖೇರ್ ಮತ್ತು ಮನೋಜ್ ಬಾಜಪಾಯಿ. ಈ ವೀಕೆಂಡ್ ಅಥವಾ ಯಾವುದೇ ಸಿನೆಮ ನೋಡಿ ಖುಷಿ ಕೊಡುವ ಚಿತ್ರ ನೋಡಬೇಕು ಎಂದಿದ್ದರೆ ಈಗಲೇ ನೋಡಿ ಈ ಚಿತ್ರವನ್ನು.. ನಿರುದ್ಯೋಗ -ಕೆಲಸ ಮಾಡೋಕು ರೆಡಿ ಇದ್ದು ಕೆಲಸ ಸಿಗದೇ ಸ್ವಲ್ಪ 'ತಲೆ ಓಡಿಸಿ ಐಡಿಯಾ ಮಾಡಿ ಕನ್ನ ಹಾಕುವ ಮಜಾ ಮಾಡುವ ಕಳ್ಳರ ಗುಂಪಿನ ಈ ಕಥೆ ಮಾಮೂಲಾಗಿ ನಾವ್ ಆಗಾಗ ಪತ್ರಿಕೆಗಳಲ್ಲಿ ಓದುವ ನ್ಯೂಸ್ನಲ್ಲಿ ನೋಡುವ ಘಟನೆಗಳು ಸನ್ನಿವೇಶಗಳ ಬಗ್ಗೆಯೇ.
ಮತ್ತು ಇದು ಆಗ ಈಗ ಮುಂದೆಯೂ ನಡೆವ ಪ್ರಕ್ರಿಯೆ.
ಕಥೆ:
ಚಿತ್ರದ ಆರಂಭ ಆಗುವುದು ಸೀ ಬಿ ಅಯ್ಗೆ ಬೇಕಾದ ಸಿಬ್ಬಂಧಿಗಳನ್ನು ನೇಮಕ ಮಾಡುವ ಸಂದರ್ಶನದ ಮೂಲಕ . ಸಂದರ್ಶಕರು ಅಕ್ಷಯ್ ಕುಮಾರ್ ಮತ್ತು ಅನುಪಮ್ ಖೇರ್. ಅಲ್ಲಿ ಕೇಳುವ ಪ್ರಶ್ನೆ, ನೀವ್ ಸೀ ಬಿ ಅಯ್ಗೆ ಯಾಕೆ ಸೆಲೆಕ್ಟ್ ಆಗೋಕೆ ಇಷ್ಟ ಪಡ್ತೀರ? ಅದ್ಕೆ ಅಭ್ಯರ್ಥಿ(ಹುಡುಗಿ)-ಈ ದೇಶದಲ್ಲಿ ಅನ್ಯಾಯ ಆಕ್ರಮ ಹಣ ಗಳಿಕೆ ಸಂಪತ್ತು ಹೆಚ್ಚುತ್ತಿದೆ -ಅದನ್ನು ಕಿತ್ತು ಹಾಕಬೇಕು..! ಇದು ಕನ್ನಡದಲ್ಲಿ ಹೇಳಿದರೆ ಅಸ್ತೆನೂ ಮಜಾ ಇಲ್ಲ-ಹಿಂದಿಯಲ್ಲಿ ಹೇಳೋದು ಹೀಗೆ - ಇಸ್ ದೇಶ್ ಮೇ ಕರಪ್ಚನ್ ಜ್ಯಾದ ಹುವಾ ಹೈ ಉಸ್ಕೋ ಉಕಾಡ್ನ ಹೈ .
ಅದ್ಕೆ ಅಕ್ಷಯ್ ಕೇಳೋದು-ತುಮ್ ಅಕ್ಹೇಲೆ ಉಕಾಡೋಗಿ ? ಅದ್ಕೆ ಅವಳು -ಹಂ ಸಬ್ ಮಿಲ್ಕೆ ಸರ್.
ಈ ಸನ್ನಿವೇಶ ಅಸ್ತೆನೂ ಮಜ್ವಾಗಿಲ್ಲ ಅನ್ನಿಸಬಹುದು ಆದರೆ ಚಿತ್ರದ ಆರಂಭದ ಈ ದೃಶ್ಯ ನಮಗೆ ಈ ಚಿತ್ರದ ಬಗ್ಗೆ ಒಂದು ಪೂರ್ವಭಾವಿ ತೀರ್ಮಾನಕ್ಕೆ ಬರುವ ಹಾಗೆ ಮಾಡುವುದು ಆದ್ರೆ ನಿಜ ಕಥೆ ಬೇರೆ ಇದೆ. ಅದೇ ಈ ಚಿತ್ರದ ವಿಶೇಷತೆ. ಅದಿಲ್ಲಿ ಹೇಳೋಲ್ಲ. ನೋಡಿದರೇನೇ ಮಜಾ..
ಅನುಪಮ್ ಖೇರ್ನನ್ನು ತಮ್ಮ ನಾಯಕ-ಬಾಸ್ ಎಂದು ಮಾಡಿಕೊಂಡು ೪ ಜನರ(ಅಕ್ಷಯ್ ಕುಮಾರ್-ಅನುಪಮ್ ಖೇರ್-ಇನ್ನಿಬ್ಬರು ನಟರು) ತಂಡ
ಸೀ ಬಿ ಅಯ್ - ಇನ್ಕಂ ಟ್ಯಾಕ್ಸ್ ಆಫೀಸರ್ಸ್ ಎಂದು ಆಕ್ರಮ ಸಂಪತ್ತು ಹೊಂದಿರುವರ ರಾಜಕೀಯ ನೇತಾರರು. ಆಭರಣ ವ್ಯಾಪಾರಿಗಳು, ದಲ್ಲಾಳಿಗಳು ಮುಂತಾದವರ ಆಫೀಸು ಮನೆ ಮೇಲೆ ರೇಡ್ ಮಾಡಿ ಅದಕ್ಕೆ ನೈಜ ಪೋಲೀಸರ ಸಹಾಯ ಪಡೆದು ರೈಡ್ನಲ್ಲಿ ಸಿಗುವ ಹಣ -ಆಭರಣ ಇತ್ಯಾದಿ ಸಮೇತ ಎಸ್ಕೇಪ್ ಆಗುವುದು ಈ ಚಿತ್ರದ ಕಥಾವಸ್ತು.
ಬರೀ ಇಸ್ಟೇ ಆಗಿದ್ದರೆ ಇದೂ ೧೦ ರಲ್ಲಿ ೧೧ ಆಗುವ ಚಾನ್ಸ್ ಇತ್ತು...
ಆದರೆ ನಿರ್ದೇಶಕ ನೀರಜ್ ಪಾಂಡೆ (ತೆಗೆದ ಒಂದೇ ಒಂದು ಯಶಸ್ವಿ ಮತ್ತು ವಿನೂತನ ಕಥಾ ವಸ್ತುವಿನ ಚಿತ್ರ -ಎ ವೆಡ್ ನೆಸ್ ಡೇ-೨೦೦೮ ಚಿತ್ರದ ನಿರ್ದೇಶಕ) ತಮ್ಮ ಹಿಂದಿನ ಚಿತ್ರದಂತೆ ಇಲ್ಲೂ ಚಿತ್ರವನ್ನು ವಿಭಿನ್ನವಾಗಿ ತೆಗೆದು ಅನಿರೀಕ್ಷಿತ ಅಂತ್ಯದ ಮೂಲಕ ಪ್ರೇಕ್ಷಕರನ್ನು ಸೆಳೆಯುವರು. ಹೀಗೆ ಸೀ ಬಿ ಅಯ್ -ಇನ್ಕಂ ಟ್ಯಾಕ್ಸ್ ಆಫೀಸರ್ಸ್ ಎಂದು ಗತ್ತಿನಲ್ಲಿ ಅಯ್ ಡಿ ಕಾರ್ಡ್ -ಸರ್ಚ್ ಪೇಪರ್ ತೋರಿಸುತ್ತ ನುಗ್ಗುವ ಈ ತಂಡ ತಮಗೆ ಬೇಕಾದ ಕಾಗದ ಪತ್ರ ಸೀಲ್ ಎಲ್ಲವನ್ನು ಆಯ್ಯಾಯ ಸನ್ನಿವೇಶಗಳಿಗೆ ತಕ್ಕಂತೆ ತಯಾರು ಮಾಡಿ ರೈಡ್ ಮಾಡಿ ಆಕ್ರಮ ಹಣವುಳ್ಳವರನ್ನು ದೋಚಿ -ಮಜಾ ಉಡಾಯಿಸುವರು .
ಅದೊಮ್ಮೆ ಆಡಳಿತ ಪಕ್ಷದ ನೇತಾರರೋಬ್ಬನ ಮನೆಗೆ ರೈಡ್ ಮಾಡಿ ಅಪಾರ ಆಕ್ರಮ ಹಣ ಸಂಪತ್ತು ಸಿಕ್ಕಿ ಅದನ್ನು ತೆಗೆದುಕೊಂಡು ಹೊರಡುವರು. ಅವನಿಗೋ (ನೇತಾರ)ಇವರು ನಕಲಿ ಎಂದು ಗೊತ್ತಾಗುವುದು ಎಲ್ಲ ಮುಗಿದ ಮೇಲೆ-ಆದರೂ ಆ ಬಗ್ಗೆ ಪೊಲೀಸರಿಗೆ ಕಂಪ್ಲೇಂಟ್ ಕೊಡಲು ರೆಡಿ ಇಲ್ಲ ಕಾರಣ ಅದು ಅಕ್ರಮ ಸಂಪತ್ತು-ಅಲ್ಲದೆ ಆ ಬಗ್ಗೆ ಪೇಪರ್ನಲ್ಲಿ ಬಂದು ತನ್ನ ವೋಟ್ಬ್ಯಾಂಕ್ ನಸ್ಟ ಆದರೆ ಎಂಬ ಭಯ. ಅಧಿಕಾರ ಇದೆ ಮುಂದೆ ಮತ್ತೆ ದೋಚಿದರೆ ಆಯ್ತು ಎಂಬ ಭಾವ... ಆದರೆ ಪೋಲೀಸು ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲು ನೈಜ ಸೀ ಬಿ ಅಯ್ ಅಧಿಕಾರಿಗಳಿಗೆ ವರಧಿ ನೀಡಿ ತನಿಖೆ ನಡೆಸಲು ಕೋರುವರು ಆಗ ಬರುವವರೆ- ದಕ್ಷ ಪ್ರಾಮಾಣಿಕ ಖಡಕ್ ಆದರೆ ಶಾಂತ ಸ್ವಭಾವದ ಸೀ ಬಿ ಆಯ್ ಅಧಿಕಾರಿ ಮನೋಜ್ ಬಾಜಪೈ ಈ ನಕಲಿ ಅಧಿಕಾರಿಗಳನ್ನು ಹಿಡಿಯಲು ಪ್ರಯತ್ನಿಸುವುದು ಈ ಕಳ್ಳ ಪೋಲೀಸ್ ಆಟದಲ್ಲಿ ಗೆಲ್ಲೊರ್ಯಾರು ಸೋಲೋರ್ಯಾರು?ಹೇಗೆ? ಯಾಕೆ? ಎನ್ನುವುದು ತೆರೆ ಮೇಲೆ ನೋಡಿಯೇ ಸವಿಯಬೇಕು ಆ ಮಜಾ..!
ಚಿತ್ರ ನೋಡುವಾಗ ಪ್ರತಿ ಕ್ಷಣವೂ ಹಲವು ತಮಾಷೆಯ-ನಗೆ ಉಕ್ಕಿಸುವ ಸನ್ನಿವೇಶಗಳು ಬರುವವು..
೧.ಆರಂಭದಲಿ ಸಂದರ್ಶನದ ಸನ್ನಿವೇಶ -ಆಗ ಸಂದರ್ಶನ ನಡೆಸುವವರ-ಸಂದರ್ಶನಕ್ಕೆ ಬಂದವರ ನಡುವಿನ ಸಂಭಾಷಣೆ..
೨.ಇಡೀ ಚಿತ್ರದ ಹೈಲೈಟ್ ಆದ ೫೦ಜನ ಡೈನಾಮಿಕ್ ತರುಣ ತರುಣಿಯರು ಸೀ ಬಿ ಅಯ್ ಗೆ ಬೇಕು ಎಂದು ಓಪನ್ ಆಗಿ ಪೇಪರ್ನಲ್ಲಿ ಯಾಡ್ ಹಾಕಿ ಅದಕ್ಕೆ ಬರುವ ೧೦೦೬ ಜನ ನಿರುದ್ಯೋಗಿ ತರುಣರ ತಯಾರಿ-ಪೂಜೆ -ದೇವರ್ಗೆ ಬೇಡಿಕೆ ಇತ್ಯಾದಿ..
ಅಂದೂ ಇಂದೂ ಮುಂದೂ ಈ ಸನ್ನಿವೇಶ ಇರುವುದೇ!.
೩.ನೇತಾರರ ಮನೆಯಲ್ಲಿ ರೈಡ್ ಆಗಿ ಮಾತು ಕಥೆ ನಡೆಸಿ ಸಮಸ್ಯೆ ಪರಿಹರಿಸುವ ಎಂದು ನೇತಾರ ಸೀ ಬಿ ಅಯ್ ಹೆಡ್ ಅನುಪಮ್ ಖೆರ್ಗೆ ಆಮಿಷ ಒಡ್ಡುವ -ಎಷ್ಟು ಕೊಡುವಿರಿ? ಎಂದಾಗ ೨ ಎನ್ನಲು -ಅನುಪಮ್ ಅವರು ಆ ನೇತಾರರ ಕೆನ್ನೆಗೆ ೨ ಬಾರಿಸಿ -ನಮಗೇ ಲಂಚ ಕೊಡುವಿರಾ? ಎಂದು ಹೇಳುವುದು...ಆಗ ನೇತಾರರ ಪಿ ಏ -ನೀವ್ ೨ ಎಂದು ಹೇಳಿದ್ದು ಒಳ್ಳೆಯದು, ಜಾಸ್ತಿ ಹೇಳಿದ್ದರೆ ಇನ್ನೂ ಹೊಡೆತಗಳು ಬೀಳುತ್ತಿದ್ದವು ಎನ್ನುವುದು.
೪.ಪೋಲೀಸರ ತನಿಖೆ ಬೆನ್ನ ಹಿಂದೆ ಬಿದ್ದಿರುವುದು ಗೊತ್ತಾದಮೇಲೂ ತಮ್ಮ ದೋಚುವಿಕೆ ಮುಂದುವರೆಸುವ ತಂಡದ ಚಾಣಾಕ್ಷತೆಯ ಸನ್ನಿವೇಶಗಳು
೫.ಅನುಪಮ್ ಖೇರ್ ಪತ್ನಿಯರು-ಮಕ್ಕಳು (ಹಲವು ಜನ)ಅವುಗಳ ಭವಿಷ್ಯಕ್ಕಾಗಿ ತಾನು ಇದೇ ಕೊನೆಯ ಕಳ್ಳತನ ಎಂದು ಹೇಳುವ ಸನ್ನಿವೇಶ ಅದಕ್ಕೆ ಅಕ್ಷಯ್ ಕರಾರುವಾಕ್ಕಾಗಿ ಎಷ್ಟು ಸಾರಿ ಈ ಹಿಂದೆಯೂ ಹೀಗೆಯೇ ಅನುಪಮ್ ಹೇಳಿದ್ದರು ಎಂದು ನೆನಪಿಸುವುದು.
೬.ದಲ್ಲಾಳಿಗಳ ಆಫೀಸು ರೇಡ್ ಮಾಡಲು ಹೋಗಿ ಅಲ್ಲಿ ಯಾವುದೋ ಅಂಗಡಿಗೆ ನುಗ್ಗಿ ಇವರ ಆಗಮನ ನೋಡಿಯೂ ತಲೆ ಕೆಡಿಸಿಕೊಳ್ಳದ ಆ ಜನರ ವ್ಯವಹಾರದ ನಡೆ ನೋಡಿ ಅಕ್ಷಯ್ ನಾವ್ ಸೀ ಬಿ ಅಯ್ ಜನ ರೇಡ್ ಎಂದು ಈ ಅನುಪಮ್ಗೆ ರೇಡ್ ಪೇಪರ್ ಕೊಡು ಎಂದಾಗ ಅನುಪಮ್ ಕೈಗೆ ಸಿಕ್ಕ ಜೇಬಲ್ಲಿನ ಯಾವ್ಯ್ದೋ ಖರೀದಿ ಮಾಡಿದ ರಸೀತಿ ಕೊಡುವುದು..! ಆಗ ಅಕ್ಷಯ್ ಆದಿಯಾಗಿ ಎಲ್ಲರೂ ತಾವೇ ಪೆಂಗರಾಗಿ ಸುಮ್ಮನೆ ಹುಸಿ ನಗೆ ನಕ್ಕು ಈ ಅಂಗಡಿ ಅಲ್ಲ ಪಕ್ಕದ್ದು ಎಂದು ಬೇರೂಂದು ಅಂಗಡಿಗೆ ರೇಡ್ ಮಾಡಿ ಅವರ ಕೈನಲ್ಲೇ ಎಲ್ಲ ಹಣ ಕಾಸು ಕಾರಿಗೆ ಸಾಗಿಸಿ ಪ ರಾರಿ ಆಗುವ ದೃಶ್ಯ.
೭.ಮನೋಜ್ ಬಾಜಪಯ್ ಮತ್ತು ಅಕ್ಷಯ್ ಬಾರ್ನಲ್ಲಿ ಮೀಟ್ ಆಗಿ- ಕೈ ಕುಲುಕಿ ಮಾತಾಡಿ ಅಕ್ಷಯ ದುಬಾರಿ ಸೆರೆ ಕುಡಿವುದು-ಮನೋಜ್ ಅತಿ ಕಡಿಮೆ ಬೆಲೆಯ ಸೆರೆ ತೆಗದುಕೊಂಡು ಸೋಡಾ ಹಾಕಿದರೆ ಅದಕ್ಕೂ ಚಾರ್ಜಾ? ಎಂದು ಬೇರರ್ನ ಕೇಳುವ -ನಂತರ ಅಕ್ಷಯ್ ಗೆ ನೀವ್ ಏನು ಮಾಡುವುದು ಎಂದಾಗ ಅಕ್ಷಯ್-ನಾನು ಇಂಪೋರ್ಟ್ ಎಕ್ಸ್ಪೋರ್ಟ್ ಎಂದು ಹೇಳಿ ಹೊರಡುವುದು- ಆಗ ಇವನ ಬಗ್ಗೆ ಗೊತ್ತಿದ್ದೂ ಚೆಕ್ ಮಾಡಲು ಮನೋಜ್ ಬಾಜಪಯ್ ತನ್ ಜೇಬಿಂದ ೧೦೦ರ ನೋಟು ತೆಗೆದು ನೆಲಕ್ಕೆ ಬೀಳಿಸಿ ಇದು ನಿಮದೇ ಎಂದಾಗ ಅಕ್ಷಯ್ ಹೌದು ಎಂದು ಆ ನೋಟ್ ತೆಗೆದುಕೊಂಡು ಹೋಗುವ ಅದು ನೋಡಿ ನಗುವ ಮನೋಜ್ ಬಾಜಪಯ್ ..
೮.ಇಡೀ ಚಿತ್ರದ ಸನ್ನಿವೇಶಗಳಲ್ಲಿ ಅತಿ ನಗೆ ಉಕ್ಕಿಸುವ -ಕೊನೆಯ ರೇಡ್ ಅದೂ ಮುಂಬೈಯ ಅತಿ ದೊಡ್ಡ ಆಭರಣ ಅಂಗಡಿ ಮೇಲೆ-ಅದರ ಓನರ್ ದೇವರ್ಗೆ ಪೂಜೆ ಮಾಡಿ ಹಿಂದೆ ತಿರುಗಿ ನೋಡಲು ಎದುರಿಗೆ ನಿಂತ ಜನ ಸೀ ಬಿ ಅಯ್ ನೋರು ಎಂದು ತಿಳಿದು ಕೈ ಕಾಲು ಗಡಗಡ ನಡುಗಿ-ಆಗ ಮನೋಜ್ ಬಾಜಪಯ್ -ಇವರು ಹೀಗೆ ಮಾಡಿಯೇ ಅಂಥವರಿಗೆ ಕೆಲಸ ಸಲೀಸಾಗುವುದು ಎನ್ನುವುದು.
೯.ಒಂದು ದೊಡ್ಡ ಬಸ್ಸಲ್ಲಿ ೫೦ ಜನ ನಕಲಿ ಸೀ ಬಿ ಅಯ್ ನವರನ್ನು ಕೂರಿಸಿ ಆ ಬಸ್ಸು ಆ ದೊಡ್ಡ ಆಭರಣ ಅಂಗಡಿ ಮುಂದೆ ನಿಂತು ಎಷ್ಟೊತ್ತಾದರೂ ಒಬ್ಬರೂ ಕೆಳಗೆ ಇಳಿಯದೆ ಇರಲು-ಅದು ಕೇಳುವ ಮನೋಜ್ ಬಾಜಪಯಿಗೆ- ತಾವ್ ನಕಲಿ ಆಫೀಸರ್ಸ್ ಎಂದು ಗೊತ್ತಿರದ ಒಬ್ಬ ತರುಣ -ತಮ್ಮ ಬಾಸ್ ಆಜ್ನೆಗಗೈ ಕಾಯ್ತಿರುವೆವು ಎನ್ನುವುದು .
೧೦..ನಿಸ್ಸಂಶಯವಾಗಿ ಚಿತ್ರದ ಕೊನೆಯ ದೃಶ್ಯ-ನಾವೇನೋ ಎಣಿಸೋದು ಅಲ್ಲಿ ಆಗೋದೇ ಬೇರೆ.ಮನೋಜ್ ಬಾಜಪಾಯಿ ಇಂಗು ತಿಂದ ಮಂಗ ಆಗೋದು. ಅದು ತೆರೆ ಮೇಲೆ ನೋಡಿ ಸವಿಯಬೇಕು.
ನಿಸ್ಸಂಶಯವಾಗಿ ಇದು ನೋಡಿ ಎಂಜಾಯ್ ಮಾಡಬಹುದಾದ ಚಿತ್ರ-ಈ ನಡುವೆ ಬಂದ ಚಿತ್ರಗಳಲ್ಲಿ ಎದ್ದು ಕಾಣುವಂತ ಚಿತ್ರ. ಮತ್ತು ಅದಾಗಲೇ ಎಲ್ಲ ಪತ್ರಿಕೆ ದೃಶ್ಯ ಮಾಧ್ಯಮಗಳಿಂದ ಭೇಷ್ ಪಡೆದ -ಗಲ್ಲಾ ಪೆಟ್ಟಿಗೆ ಲೂಟಿ ಹೊಡೆದ ಹೊಡೆಯುತ್ತಿರುವ-ಹಲವು ಪ್ರಶಸ್ತಿ ಪುರಸ್ಕಾರ ಪಡೆಯಬಹುದಾದ ಚಿತ್ರ..
ಮೊನ್ನೆ ಮೊನ್ನೆ ಬಂದ ಒಹ್ ಮೈ ಗಾಡ್ ಮತ್ತು ಕಿಲಾಡಿ ೭೮೬ ನಂತರ ಅಕ್ಷಯ್ ಕುಮಾರ್ ಅವರಿಂದ ಮತ್ತೊಂದು ಫೀಲ್ ಗುಡ್ ಚಿತ್ರ-ಈಗ ಸಲ್ಮಾನ್ ಮತ್ತು ಅಕ್ಷಯ್ ಮಧ್ಯೆ ಯಾರು ನಂಬರ್ ಒನ್ ಎಂಬ ಸ್ಪರ್ಧೆ..ನೋಡಿ ಎಂಜಾಯ್ ಮಾಡಿ...
>ನಾ ಬರೆಯಬೇಕಾಗಿದ್ದು ಕುಂಗ್ಫು ಹಸಲ್ -೨೦೦೪ ಚಿತ್ರದ ಬಗ್ಗೆ-ಆದರೆ ನಿನ್ನೆ ಆಕಸ್ಮಿಕವಾಗಿ ಅನಿರೀಕ್ಷಿತವಾಗಿ ಹೊಚ್ಹ ಹೊಸ ಚಿತ್ರ ಸ್ಪೆಶಲ್ ೨೬ ಹಿಂದಿ ಚಿತ್ರ ನೋಡಿದೆ-ಮತ್ತು ಆ ಚಿತ್ರ ಇನ್ನೂ ಸಿನೆಮ ಮಂದಿರಗಳಲ್ಲಿ ಇರುವುದರಿಂದ ನೀವೆಲ್ಲ ನೋಡಿ ಎಂಜಾಯ್ ಮಾಡಲಿ ಎಂದು ಈ ಚಿತ್ರದ ಬಗ್ಗೆ ಬರೆದೆ.
ಚಿತ್ರ ಮೂಲಗಳು :
ವಿಕಿಪೀಡಿಯ:
ಯೂಟೂಬ್ ಟ್ರೇಲರ್ :
ಯೂಟೂಬ್ ಫುಲ್ ಸಿನೆಮ
(ಈ ಹೊಚ್ಹ ಹೊಸ ಸಿನೆಮ ಅಲ್ಲಿ ಪೂರ್ಣವಾಗಿ ಲಭ್ಯ ಆಗಿದ್ದು ಹೇಗೋ ಗೊತ್ತಿಲ್ಲ..!)
ಅಯ್ ಎಂ ಡಿ ಬಿ :
Rating