ಸ್ವತಂತ್ರ ಸಾಫ್ಟ್ ವೇರ್ ರಾಷ್ಟ್ರೀಯ ಸಮ್ಮೇಳನಕ್ಕೆ ಬನ್ನಿ ! (ಮಾರ್ಚಿ ೨೦/೨೧ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ)

ಸ್ವತಂತ್ರ ಸಾಫ್ಟ್ ವೇರ್ ರಾಷ್ಟ್ರೀಯ ಸಮ್ಮೇಳನಕ್ಕೆ ಬನ್ನಿ ! (ಮಾರ್ಚಿ ೨೦/೨೧ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ)

ಅಖಿಲ ಭಾರತ ಮೂರನೇಯ ರಾಷ್ಟ್ರೀಯ ಸ್ವತಂತ್ರ ಸಾಫ್ಟ್ ವೇರ್ ಸಮ್ಮೇಳನ ಬೆಂಗಳೂರಲ್ಲಿ ಮಾರ್ಚಿ ೨೦/೨೧ ರಂದು ನಡೆಯುತ್ತಿದೆ. ಇದನ್ನು ಸ್ವತಂತ್ರ ಸಾಫ್ಟ್ ವೇರ್ ಆಂದೋಲನ ಕರ್ನಾಟಕ" (ಎಫ್.ಎಸ್.ಎಮ್.ಕೆ.) ಆಯೋಜಿಸಿದೆ. ನಮ್ಮ ದೇಶದಲ್ಲಿ ಮತ್ತು ಭಾಷೆಗಳಲ್ಲಿ ಮಾಹಿತಿ ತಂತ್ರಜ್ಞಾನದ ಅಭಿವೃಧ್ಧಿ, ಸುಸಂಗತ ಬಳಕೆ ಮತ್ತು ಆಧುನಿಕೀಕರಣ ಬಯಸುವ ಎಲ್ಲರೂ ಭಾಗವಹಿಸಬೇಕಾದ ಸಮ್ಮೇಳನ.

 ಮಾರ್ಚ್ ೨೦/೨೧ ರಂದು ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿರುವ ೩ ನೇ ಸ್ವತಂತ್ರ ಸಾಫ್ಟ್ ವೇರ್ ರಾಷ್ಟ್ರೀಯ ಸಮ್ಮೇಳನದಲ್ಲಿ

  • ಕನ್ನಡ ಕಂಪ್ಯೂಟರ್ ಬಳಕೆಯ ಸವಾಲುಗಳು

  • ಶಿಕ್ಷಣ, -ಆಡಳಿತದಲ್ಲಿ ಭಾರತೀಯ ಭಾಷೆಗಳ ಬಳಕೆಗೆ ಅಗ್ಗದ ಪರಿಣಾಮಕಾರಿ ಸಾಫ್ಟ್ ವೇರ್ ತಯಾರಿಯಲ್ಲಿ ಸ್ವತಂತ್ರ ಸಾಫ್ಟ್ ವೇರ್ ಬಳಕೆಯ ಅನುಭವಗಳು, ಮುಂದಿನ ಯೋಜನೆಗಳು;

  • ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಐಟಿ ನೀತಿ

  • ವಿಕಲಾಂಗರ ಕಂಪ್ಯೂಟರ್ ಬಳಕೆಯ ಸವಾಲುಗಳು ಪರಿಹಾರಗಳು,

  • ಕೇಂದ್ರ ಸರ್ಕಾರದ ’ಒಂದು ನಂಬರ್’ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆ;

  • ಜ್ಞಾನದ ಆಕರಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿರುವಂತೆ ಇಡುವ ಬಗೆಗಳ ಬಗ್ಗೆ ಚರ್ಚೆ,

  • ಹಲವು ತಾಂತ್ರಿಕ ವಿಷಯಗಳ ಚರ್ಚೆ

ಇತ್ಯಾದಿ ಹಲವು ಆಯಾಮಗಳ ಬಗ್ಗೆ ಗೋಷ್ಟಿಗಳಿರುತ್ತವೆ.

 ಸಾವಿರಕ್ಕೂ ಹೆಚ್ಚು - .ಸಾಫ್ಟ್ ವೇರ್ ಇಂಜಿನಿಯರುಗಳು, ಸಂಶೋಧಕರು, ತಜ್ಞರು, ಅಧ್ಯಾಪಕರು, ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಲವು ರಾಜ್ಯಗಳ ಸ್ವತಂತ್ರ ಸಾಫ್ಟ್ ವೇರ್ ಸಂಘಟನೆಗಳ ಪ್ರತಿನಿಧಿಗಳ ಸಭೆ ಸಹ ನಡೆಯಲಿದೆ. ಸಮ್ಮೇಳನದಲ್ಲಿ ಯಾರೂ ಭಾಗವಹಿಸಬಹುದು.ಸಮ್ಮೇಳನದ ಕಾರ್ಯಕ್ರಮ ಮತ್ತು ಭಾಗವಹಿಸುವ ಬಗ್ಗೆ ವಿವರಗಳಿಗೆ (www.nc2010.fsmk.org/) ವೆಬ್ ತಾಣಕ್ಕೆ ಭೇಟಿ ನೀಡಿ.

 ಎರಡೂ ದಿನ ಸಮ್ಮೇಳನದಲ್ಲಿ ಭಾಗವಿಹಿಸಲು ಸಮಯವಿಲ್ಲದಿದ್ದರೆ, ಮಾರ್ಚ ೨೦ ರಂದು ಬಳಿಗ್ಗೆ ೧೦-೧೨.೩೦ ರ ಉದ್ಗಾಟನಾ ಸಮಾರಂಭಕ್ಕೆ ಮತ್ತು ಮಾರ್ಚ ೨೧ ರಂದು ಮಧ್ಯಾಹ್ನ ೩.೩೦-೦೫.೦೦ ರ ಸಮಾರೋಪಕ್ಕೆ ಬನ್ನಿ.

ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಹಲವು ಚಟುವಟಿಕೆಗಳು - ಹಲವು ಇಂಜನಿಯರಿಂಗ್ ಕಾಲೇಜುಗಳಲ್ಲಿ ತಾಂತ್ರಿಕ ಕಾರ್ಯಾಗಾರಗಳು, ಲಿನಕ್ಸ್ ಸ್ವಾತಂತ್ರ್ಯ ನಡೆ, ಲಿನಕ್ಸ್ ಕನ್ನಡ ಅವತರಣಿಕೆ ಬಿಡುಗಡೆ, ಸ್ಲಂ ಕಂಪ್ಯೂಟರ್ ಕೇಂದ್ರದ ಮಕ್ಕಳ ಫೋಟೋ ಪೈಂಟಿಂಗ್ ಪ್ರದರ್ಶನ, ಸಾಂಸ್ಕ್ರತಿಕ ಕಾರ್ಯಕ್ರಮಗಳು - ನಡೆದಿವೆ.

 ಜೈ ಕುಮಾರ‍್

ಸ್ವತಂತ್ರ ಸಾಫ್ಟ್ ವೇರ‍್ ಆಂದೋಲನ ಕರ್ನಾಟಕ

ಸ್ವತಂತ್ರ ಸಾಫ್ಟ್ ವೇರ‍್ ಆಂದೋಲನ ಕರ್ನಾಟಕ ’ - ಸ್ವತಂತ್ರ ಸಾಫ್ಟ್ ವೇರ‍್ ಮೌಲ್ಯಗಳಲ್ಲಿ ನಂಬಿಕೆ ಇರುವ ಮತ್ತು ಅದರ ಪ್ರಸಾರದಲ್ಲಿ ಆಸಕ್ತಿ ಉಳ್ಳ ಎಲ್ಲರ ಸ್ವಯಂಸೇವಾ ಸಂಘಟನೆ. ೨೦೦೯ ರಲ್ಲಿ ಆರಂಭವಾಗಿ ಹಲವು ಚಟುವಟಿಕೆಗಳಿಂದ ಅಲ್ಪ ಕಾಲದಲ್ಲಿ ಬೆಳೆದಿದೆ. ಇಂಜಿನೀಯರಿಂಗ್ ಕಾಲೇಜುಗಳಲ್ಲಿ ಸ್ವತಂತ್ರ ಸಾಫ್ಟ್ ವೇರ್ ಬಳಕೆಗೆ ಉತ್ತೇಜನ ನೀಡಲು ಲಿನಕ್ಸ್ ಹಬ್ಬ, ತರಬೇತಿ, ಲಿನಕ್ಸ್ ಬಳಕೆ ಗುಂಪುಗಳ ಸ್ಥಾಪನೆ; ಸ್ವತಂತ್ರ ಸಾಫ್ಟ್ ವೇರ್ ವಿಚಾರಧಾರೆ ಹರಡಲು ಭಾಷಣ, ಚರ್ಚೆ, ಸಂವಾದಗಳನ್ನು ಏರ್ಪಡಿಸುವುದು; ಎಲ್ಲಾ ಕ್ಷೇತ್ರಗಳಲ್ಲಿ ವಿಂಡೋಸ್ ನಿಂದ ಲಿನಕ್ಸ್ ಗೆ ಬದಲಾಯಿಸಲು ಪ್ರಚಾರ, ತಾಂತ್ರಿಕ ಸಹಾಯ; ಕನ್ನಡ ಸ್ವತಂತ್ರ ಸಾಫ್ಟ್ ವೇರ್ ತಯಾರಿಗೆ ಸ್ವಯಂಸೇವಾ ಗುಂಪುಗಳ ಸ್ಥಾಪನೆ, ಸ್ಲಂ ಕಂಪ್ಯೂಟರ್ ತರಬೇತಿ ಕೇಂದ್ರಗಳ ಸ್ಥಾಪನೆ - ಇವು ಎಫ್.ಎಸ್.ಎಮ್.ಕೆ ಹಮ್ಮಿಕೊಂಡಿರುವ ಕೆಲವು ಕಾರ್ಯಕ್ರಮಗಳು.


Rating
No votes yet