ಹಗುರ ಮನ

ಹಗುರ ಮನ

ಓ ಬ್ಲಾಗಿಗರೇ ನಿಮಗ್ ಯಾತರ್ ಚಿಂತಿ,
ಕಲ್ಲು ಗುಡ್ಡಧಾಂಗ ನೀ ಖಡೀ ನಿಂತಿ,
ಬೀಸ್ತದ್ ಗಾಳಿ ಮ್ಯಾಲಿಂದ್ ಹೊಡಿತಾದ್ ಮಳಿ,
ಆದ್ರೂ ಭಿ ನಿಲ್ಲಪ್ಪ ಖಡೀ ಖಡೀ.
ಮನಸ್ಸು, ಇದು ಎಲ್ಲಿದೆ ಎಂದು ಯಾರಿಗಾದ್ರೂ ಸರಿಯಾಗಿ ಗೊತ್ತಿದ್ರೆ ಅವರಿಗೆ ನಮೋನ್ನಮಃ,
ಆದ್ರೆ ಅದು ಮರ್ಕಟ ಅಂತಮಾತ್ರ ಸಿಕ್ಕ್ದೋರೆಲ್ಲಾ, ಆಡೋರೆಲ್ಲಾ, ನೋಡ್ದೋರೆಲ್ಲಾ ಬೈಯ್ಯೋರೇ.
ಅದು ತುಂಬಾ ಮಧುರ, ಎಲ್ಲಾ ಭಾವನೆಗಳನ್ನ, ನಾನಾ ಆಲೋಚನೆಗಳನ್ನ, ತರಾವರಿ ವಿಚಾರಗಳನ್ನ ಇನ್ನೂ ಏನೇನೋ.... ಎಲ್ಲಾದಕ್ಕೂ ಜಾಗಕೊಟ್ಟು ನಿಮ್ಮ ದೇಹಾನೂ ಕಾಪಾಡುವ ಅನಿವಾರ್ಯತೆ ಅದಕ್ಕೆ ಇದೆರಿ, ಅದಕ್ಕೆ ಅದ್ನ ಹಗುರ ಹೇಗೆ ಮಾಡೋದು ಅಂತ ನನ್ಗೊತ್ತಿರೋ ನಾಲ್ಕು ವಿಚಾರ ಹಂಚ್ಕೋತೀನಿ.
೧. ವಿಷಯಗಳನ್ನ, ವಸ್ತುಗಳನ್ನ, ಶಬ್ದಗಳನ್ನ, ರುಚಿಗಳನ್ನ, ಬಣ್ಣಗಳನ್ನ ಇನ್ನೂ ಏನೇನಿದೆಯೋ ಅದ್ನೆಲ್ಲಾ ಇರೋದ್ನ ಇರೋದ್ರಹಾಗೇ ಯಾವುದೇ ತರ್ಕ ಸೇರಿಸ್ದೇ ಅನುಭವಿಸೋದ್ನ ಕಲೀಬೇಕು.
ಸರಿ ತಪ್ಪು, ಒಳ್ಳೆಯ ಕೆಟ್ಟ, ಸುಖ ದುಖಃ, ಯಾವುದೂ ಇಲ್ಲದ ಸ್ಥಿತಿ ಒಂದು ಇರತ್ತೆ ಅದ್ನ ಹಾಗೆ ಅನುಭವಿಸಬೇಕು.
ಯಾವಾಗ ನಾವು ಯಾವುದನ್ನಾದ್ರೂ ತೀರ್ಮಾನ ಮಾಡ್ತೀವೋ ಅದನ್ನ ಬಿಟ್ಟು ಬೇರೆ ಸತ್ಯ ಹೊಳೆಯೋದೇ ಇಲ್ಲ.
ಒಂದು ಘಟನೆ, ವಿಷಯ, ವಸ್ತು, ಯಾವುದನ್ನೇ ಆಗ್ಲಿ ನೋಡುವಾಗ ಪ್ರೀತಿ, ಸಮಾಧಾನ, ಶ್ರಧ್ಧೆಯಿಂದ ನೋಡಿದ್ರೆ
ಓ ಇದು ಹೀಗಾಯ್ತಲ್ಲ, ಹೀಗಿದ್ಯಲ್ಲಾ ಇದೇ ಸರಿ ಅಂತ ಅದನ್ನ ನಾನು (ನನ್ನ ಅಹಂ) ಒಪ್ಪಿಕೊಂಡ್ಬಿಟ್ರೆ ಸಾಕು, ನಂತ್ರ,
ಏನ್ಮಾಡ್ಬೇಕಂತ "ನನ್ನದೇ" ಮನಸ್ಸು "ನನಗೆ" ಹೇಳತ್ತೆ. ಅಂದಮೇಲೆ ನನ್ನ ಅಹಂ ನ್ನು ನಿಯಂತ್ರಿಸಲು ಒಂದು
ಶಕ್ತಿ ಇದೆ ಅಂತ ಗೊತ್ತಾಯ್ತು. ಆ ಶಕ್ತಿನೇ ಮನಸ್ಸು.
ಅದನ್ನ ಹೇಗೆ ಅದನ್ನ ಸಾಧಿಸೋದು ಅಂತ ಮುಂದೆ...... ಇನ್ನೊಂದು ದಿನ ತಿಳಿಸ್ತೀನಿ. ಮತ್ತೆ ಭೇಟಿ ಆಗೋಣ.

Rating
No votes yet