ಹಳೆ ಪಾತ್ರೆ..ಹಳೆ ಕಬ್ಬಿಣ...

ಹಳೆ ಪಾತ್ರೆ..ಹಳೆ ಕಬ್ಬಿಣ...

ಹಳೆ ಪಾತ್ರೆ..ಹಳೆ ಕಬ್ಬಿಣ..ಹಳೆ ದೀಪ..
ಅರೆ ಓಯ್..ಹಾಡು ಹೇಳುತ್ತಾ ಇದ್ದರೆ ನನ್ನ ಕತೆ ಸುರುಮಾಡುವುದು ಯಾವಾಗ?
ಈ ಹಳೇ ಐಟಮ್‌ಗಳು ಎಲ್ಲಿ ಸಿಕ್ಕಿದರೂ ಕೈಯಿಂದ ಉಜ್ಜುತ್ತಿದ್ದೇನೆ.
ಹಳೇ ಬಾಟಲ್‌( :) ) ಗಳ ಬಿರಡೆ ತೆಗೆದು ನೋಡುತ್ತಿದ್ದೇನೆ.
ಒಮ್ಮೆ ಜೀನೀ ನನ್ನ ಕೈವಶವಾದರೇ.. .. ..
ಯಾಕೆ ಅಂತೀರಾ -‘ಸಮಾಜ ಸೇವೆಗೆ’
ನಗಬೇಡಿ..ಈ ಜನರೇ ಹೀಗೆ-
ಸಮಾಜಸೇವೆಗೆ ರೌಡಿ ಹೊರಟರೆ ಸಪೋರ್ಟ್, ರವಿರೆಡ್ಡಿ ಹೊರಟರೆ ಡೌಟು ಮಾಡುತ್ತಾರೆ.

ಈ ಸಲ ಇಲೆಕ್ಷನ್‌ಗೆ ನಿಂತವರ ವಿವರ ಓದಿದ್ದೀರಾ?
ಎಸ್ಸಲ್ಸಿ/ಪಿಯುಸಿ-ಆಸ್ತಿ ವಿವರ ಕೋಟಿಗಳಲ್ಲಿ!! ಇಷ್ಟಿದ್ದರೂ ಹಾಯಾಗಿ ಇರುವುದು ಬಿಟ್ಟು ‘ಸಮಾಜಸೇವೆ’ ಮಾಡುವರು.

ನಾನಿದ್ದೇನೆ.. ಡಬಲ್ಡಿಗ್ರಿ- ತಿಂಗಳ ಸಂಬಳ/ಹೆಂಡತಿ ಮಕ್ಕಳ ಸೇವೆ..ಛೇ..ಅಲ್ಲ ಛೀ.
ಇನ್ನು ತಡ ಮಾಡುವುದಿಲ್ಲ. ಸಮಾಜ ಸೇವೆಗೆ ಇಳೀತೇನೆ.
ಅದು ಸರಿ. ಸಮಾಜಸೇವೆಗೂ ಜೀನೀಗೂ ಎಲ್ಲಿಂದೆಲ್ಲಿಯ ಕನೆಕ್ಷನ್ ಎಂದ್ರಾ?
ಹೇಳ್ತೀನಿ, ಕೇಳ್ರೀ.. ..

ತಾವು ಪ್ರಧಾನಿಯಾದರೆ ಸ್ವಿಸ್ ಬ್ಯಾಂಕ್‌ನಲ್ಲಿ ನಮ್ಮವರಿಟ್ಟ ಹಣವನ್ನೆಲ್ಲಾ ತರುತ್ತೇನೆ ಎಂದ್ರು ಅದ್ವಾನಿಜೀ. ಹ್ಹ..
-ಇಲ್ಲಿ ನಮ್ಮ ದೇಶ್ದಲ್ಲಿರುವ (ರಾಜ್ಕಾರಣಿ ಮತ್ತವರ ಸಂಬಂಧಿಗಳ) ಕೋಟಿಗಳ ಬಗ್ಗೆ ಏನೂ ಮಾಡಲಿಕ್ಕಾಗುವುದಿಲ್ಲ. ಇನ್ನು ಸ್ವಿಸ್ ಬ್ಯಾಂಕ್‌ನಿಂದ ಹೇಗಪ್ಪಾ ತರ್ತಾರೆ?
ಇವರ ತಂಡ ಗೋಣಿ ಹಿಡಕೊಂಡು ಸ್ವಿಸ್ ತಲುಪುವಾಗ, ಅಲ್ಲಿನ ಬ್ಯಾಂಕ್‌ನ ಹಣ ಮಂಗಮಾಯ ಮಾಡುವ ತಂತ್ರ ರಾಜಕಾರಣಿಗಳಿಗೆ ಗೊತ್ತಿಲ್ಲವಾ?
ಕಾಲು ಬಿದ್ದು ಕೇಳಿದರೂ, ಪಕ್ಕದ ಪಾ(ತ)ಕಿಗಳು ೨೦ ಕಳ್ಳರನ್ನು ಕೊಡಲು ಒಪ್ಪುವುದಿಲ್ಲ.
ಇನ್ನು ಸ್ವಿಸ್ ಬ್ಯಾಂಕ್‌ಗಳಿಗೇನು ಹೊಟ್ಟೆ ಬಂದಿದ್ಯಾ? ಅದೂ ಈ ರಿಸೆಷನ್ ಕಾಲದಲ್ಲಿ!

ಅರೇ, ಇನ್ನೂ ನಾನು ಜೀನೀ ವಿಷಯಕ್ಕೆ ಬಂದೇ ಇಲ್ವಲ್ಲಾ?
ಹೌದು. ನನ್ನಂತೇ ನೀವೂ ‘ಜೀನಿಯಸ್’, (ಇಂ)‘ಜೀನಿ’यार ಇದ್ದೀರಿ.
ನಿಮ್ಮ ಮನೆಯಲ್ಲಿರುವ ಹಳೇಪಾತ್ರೆ, ಕಬ್ಬಿಣ..ಸ್ವಲ್ಪ ತಿಕ್ಕಿಪ್ಲೀಸ್..
ಜೀನಿ ಸಿಕ್ಕಿದರೆ ಏನು ಮಾಡಬೇಕು? ನಾನು ಏನು ಮಾಡಬೇಕೆಂದಿದ್ದೆ ತಿಳಿಸುವೆನು.(ನಾಳೆ :) , ನಿಮ್ಮದೂ ಏನಾದರೂ ಐಡಿಯಾ ಇದ್ದರೆ ಹೇಳಿ )
ಈಗ ಪಾತ್ರೆ ರಾಶಿ ಬಿದ್ದಿದೆ ಅಡುಗೆ ಮನೆಯಲ್ಲಿ-ತೊಳೆಯಬೇಕು..ಸ್ಸಾರಿ ಉಜ್ಜಬೇಕು.
ಬರ್ತೀನಿ.
-ಗಣೇಶ.

Rating
No votes yet

Comments