ಹಳ್ಳಿಯ ಪದಗಳು/ಒರೆಗಳು

ಹಳ್ಳಿಯ ಪದಗಳು/ಒರೆಗಳು

ನನ್ನ ಇತ್ತೀಚಿನ ಹಳ್ಳಿ ಸುತ್ತುವಿಕೆಯಿಂದ ಗಮನಕ್ಕೆ(ಮೊದಲೆ ಗೊತ್ತಿತ್ತು ...) ಬಂದ ಕೆಲವು ಒರೆಗಳು...ಏನೋ ಹಳ್ಳಿ ಒರೆಗಳ ಮೇಲೆ ಒಲವು ಹೆಚ್ಚು.

೧) ಮುತ್ತೈದೆ - ಮದುವೆಯಾಗಿ 'ಸೌಭಾಗ್ಯ' ಹೊಂದಿರುವವಳು

೨) ಸೋಗ್ಲು ( ಸೋಗಲು) - ಮುತ್ತೈದೆ ಮನೆಗೆ ಬಂದಾಗ ಕೊಡುವ ದುಡ್ಡು/ರವಿಕೆ

೩) 'ಕಾಡೋರು' ಅಂದ್ರೆ ಗೊತ್ತಿಲ್ಲದವರು ಅಂದ್ರೆ ಅಪರಿಚಿತರು  ಉದಾ: ನಾವೇನು ಕಾಡೋರಿಗೆ ಮಾಡ್ತಾ ಇದ್ವಾ. ನೆಂಟರಿಶ್ಟರಿಗೆ ತಾನೆ (ನೆರೆವು) ಮಾಡೋದು.

೪) ಹೆಮಕ್ಳು = ಹೆಣ್ಣ್ + ಮಕ್ಕಳು

..ನೆಪ್ಪು ಬಂದ್ರೆ ಮತ್ತೆ ಬರೀತೀನಿ

Rating
No votes yet

Comments