ಹೆಸರಿನ ಮಹತ್ವ

ಹೆಸರಿನ ಮಹತ್ವ

ಹಿಂದಿನಕಾಲದಲ್ಲಿ ಕೆಲವು ವರ್ಗಗಳಲ್ಲಿ ಅಡ್ಡಾದಿಡ್ಡಿ ಹೆಸರು ಇಟ್ಟಿದ್ದರೆ ಮುಂದುವರೆದ ಇಂದಿನ ದಿನಗಳಲ್ಲಿ ನಾಜೂಕಾಗಿ ಏನೇನೋ ಹೆಸರಿಡುವುದು ರೂಡಿಗೆ ಬಂದಿದೆ. ಆದರೆ  ದೇವರ ಹೆಸರುಗಳನ್ನು ಮಕ್ಕಳಿಗೆ ನಾಮಕರಿಸುತ್ತಿದ್ದುದು ಸಾಮಾನ್ಯ ಸಂಗತಿಯಾಗಿತ್ತು. ಉಧಾಹರಣೆಗೆ ವೀರಶೈವ ಸಮುದಾಯದವರು ಹೆಚ್ಚು ಜನಸಂಖ್ಯೆ ಇರುವಲ್ಲಿ ಬಸವರಾಜ ಹೆಸರು ಜಾಸ್ತಿ. ಅರಸೀಕೆರೆಯಲ್ಲಂತೂ ಕುಂಕುಮದಬಸವರಾಜು,  ಮಿಲ್ ಇಟ್ಟಿರುವ ಮಿಲ್ ಬಸವರಾಜು, ಕೊಬ್ರಿ ಬಸವರಾಜು, ಹೀಗೆ. ಇನ್ನು ನಮ್ಮ ಮನೆಯಲ್ಲಂತೂ ಎಲ್ಲರಿಗೂ ಸುಬ್ರಹ್ಮಣ್ಯ ದೇವರ ಹೆಸರುಗಳು. ಶೇಷಿ, ಸುಬ್ಬಿ, ನಾಗಲಕ್ಷ್ಮಿ,ಅನಂತ, ನಾಗರಾಜ,ಸುಬ್ಬಣ್ಣ...ಹೀಗೆ. ನಮ್ಮ ಮನೆ ದೇವರು ಶ್ರೀ ಕಂಠೇಶ್ವರ. ಆದ್ದರಿಂದ ಶ್ರೀಕಂಠ, ನಂಜುಂಡ, ನಂಜಪ್ಪ,ನಂಜಮ್ಮ ಇತ್ಯಾದಿ.ನಮ್ಮೂರಲ್ಲಿ ವಕ್ಕಲಿಗ ಜನಾಂಗದಲ್ಲಿ ನಂಜೇಗೌಡ , ನಂಜುಂಡ ಎಂಬ ನೂರಾರು ಹೆಸರುಗಳಿವೆ.

ಇನ್ನು ಶ್ರೀ ರಾಮನ ಹೆಸರಿಡದ ವರ್ಗವಿಲ್ಲ. ರಾಮಣ್ಣ, ರಾಮಾಚಾರಿ, ರಾಮೇಗೌಡ,ರಾಮಪ್ಪ, ರಾಮಯ್ಯ, ರಾಮಶೆಟ್ಟಿ, ರಾಮಯ್ಯಂಗಾರ್,ರಾಮಾಶಾಸ್ತ್ರಿ, .....ಇತ್ಯಾದಿ.

ಕೊಸರು:  ಐ.ಏ.ಎಸ್ ಅಧಿಕಾರಿಗಳಲ್ಲಿ  ನಾನು ಕಂಡಂತೆ ಸುಬ್ರಹ್ಮಣ್ಯ ಹೆಸರಿನವರು ಸಾಕಷ್ಟು ಜನರಿದ್ದಾರೆ. ಅದರಲ್ಲಿ ಕೆಲರು ನಮ್ಮ ಸಂಬಂಧಿಗಳೂ ಹೌದು. ಬೆಂಗಳೂರು ಮಹಾನಗರ ಪಾಲಿಕೆಯ ಡಾ.ಜೆ.ಎಸ್.ಸುಬ್ರಹ್ಮಣ್ಯ ಅವರು ನಮ್ಮ ಜಿಲ್ಲೆಯವರು, ಒಂದೇ ಶಾಲೆಯಲ್ಲಿ ಓದಿದವರು. ಹೆಚ್.ಎಸ್.ಸುಬ್ರಹ್ಮಣ್ಯ  ಕೂಡ ನಮ್ಮೂರಿನ ನನ್ನ ಬಂಧುಗಳು, ಇವರು ವರಮಾನ ತೆರಿಗೆ ಇಲಾಖೆಯ ರಾಜ್ಯ ಕಮೀಶನರ್ ನಿವೃತ್ತರು.ಇನ್ನು ಮದ್ರಾಸಿಗಳಲ್ಲಿ ಸುಬ್ರಹ್ಮಣ್ಯಮ್ ಎಂಬ ಮಾಹಾನುಭಾವರು ಸಾಕಶ್ಟಿದ್ದಾರೆ. ಡಾ|| ಸುಬ್ರಹ್ಮಣ್ಯಸ್ವಾಮಿ ಎಂಬ ಪ್ರಳಯಾಂತಕರ ಪರಿಚಯ ಎಲ್ಲರಿಗೂ ಇದೆ ಅಲ್ವಾ?

ಹೆಸರಿನ ಬಗ್ಗೆ ಸಂಶೋಧನೆ ಮಾಡಿದ್ರೆ ಇನ್ನೂ ಸಾಕಷ್ಟು ಮಹತ್ವಗಳು ಬೆಳಕಿಗೆ ಬರಬಹುದು.

Rating
No votes yet

Comments