ಹೊಸ ನಗೆಹನಿಗಳು- ೫೮ ನೇ ಕಂತು

ಹೊಸ ನಗೆಹನಿಗಳು- ೫೮ ನೇ ಕಂತು

ಡಾಕ್ಟರ್  ಕೇಳಿದರು - ರಾತ್ರಿ ಮಲಗುವ ವೇಳೆ ಕಿಟಕಿ ತೆಗೆದಿಟ್ಟು ಮಲಗಲು ಹೇಳಿದ್ದೆ ,   ಈಗ ನಿಮ್ಮ ಉಸಿರಾಟದ ತೊಂದರೆ ಹೋಗಿದೆಯೇ ?

ರೋಗಿ - ಅದು ಹೋಗಿಲ್ಲ ; ಆದರೆ  ನನ್ನ ಲ್ಯಾಪ್ಟಾಪ್ ಮತ್ತು ಮೊಬೈಲ್ ಹೋಗಿವೆ.

----------

ನೌಕರಿ ಬಯಸಿ ಬಂದವನಿಗೆ ಮ್ಯಾನೇಜರ್ ಹೇಳಿದರು - ನಮಗೆ  ಹೊಣೆಗಾರ ಮನುಷ್ಯರು ಬೇಕು. 

ಆತ ಹೇಳಿದ-  ಸರ್ ನಾನು ತುಂಬ ಜವಾಬ್ದಾರಿ ಮನುಷ್ಯ ಸರ್ , ಹಿಂದಿನ ಕೆಲಸಗಳಲ್ಲೆಲ್ಲ ಏನೇ ಅನಾಹುತ , ಅಫರಾತಫರಾ ಆದರೂ  ನನ್ನನ್ನೇ  ಹೊಣೆ ಮಾಡುತ್ತಿದ್ದರು!

----------

ಆ ಸಂಖ್ಯಾಶಾಸ್ತ್ರಜ್ಞನು ಸತ್ತದ್ದು ಹೇಗೆ ಗೊತ್ತೇ ? ನೀರಿನ ಆಳ  ಸರಾಸರಿ ಮೂರು ಅಡಿ ಎಂದು ನದಿಯನ್ನು ದಾಟಲು ಹೋದ!

----------
--ಆ ಸಂಖ್ಯಾಶಾಸ್ತ್ರಜ್ಞನ ಸಂಗತಿ ಇವನಿಗೆ ಗೊತ್ತಿರಬಹುದೇ ?
- ಅದು ಸಂಭವನೀಯ!
---------

Rating
Average: 4.8 (4 votes)