೧. ಕಥಿ ಹೈಲ್ ಅಯ್ತಲ್ಲ ಮರಾಯ್ರೆ

೧. ಕಥಿ ಹೈಲ್ ಅಯ್ತಲ್ಲ ಮರಾಯ್ರೆ

೧. ಮನಿ ಲೆಕ್ಕ


"ಮಾಣಿ  ಇಗಾ ಸಿದ್ಧಿಯ ಮನಿಗ್ ಹೋಯಿ ಒಂದ್ ಸೊಲ್ಗಿ ಹಾಲ್ ತಕಂಡ್ ಬಾ ಕಾಂಬೊ. ಬೆಳ್ಗಿಂದ ತಲಿ ತಿರ್ಗ್ತಾ ಇತ್ತ್ ಮರಾಯಾ, ಈಗ ಚಾಯಿ ಕುಡೀದಿದ್ರೆ  ಅತೇ ಇಲ್ಲೆ."
ಎಂದರು ಚಿಕ್ಕಮ್ಮ, ಅವರಿಗೂ ಬೆಳಗಿಂದ ಅಗಿ ಸಸಿ ನಟ್ಟೂ ನಟ್ಟೂ ಸಾಕಾಗಿತ್ತು.
"ನಂಗ್ಯಡಿಯ, ಆ ಜಿರಾಪತಿ ಮಳೆಯಲ್ಲ್ ಅಲ್ಲಿಗೋಪುಕೆ ನಂಕೈಲಾಪುದಿಲ್ಲೆ, ನಂಗೆ ಶಾಲಿ ಮಾಸ್ಟ್ರ ಕೊಟ್ಟ ಮನಿ ಲೆಕ್ಕ ಮಾಡುಕಿತ್ತ." ಅಂದ ಅವರ ಮಾಣಿ.
"ನೀ ಕಲ್ತ್ ಗುಡ್ಡಿ ಹಾಕೂದ್ ನಂಗೊತ್ತಿಲ್ಯಾ, ಹಳ್ಳೀ ಜಬ್ಬ! ಹನ್ನ್ರ್ಡೇಳ್ಲ್ ಹೇಳೂಕಾತಿಲ್ಲೆ, ಕಲಿತ್ತ ಅಂಬ್ರು ಕಲಿತ್ತ!!!" ಚಿಕ್ಕಮ್ಮ ಕನಲಿದಳು.
" ನಂಗ್ಯಾಕ್ ಗೊತ್ತಿಲ್ಲೆ, ಈಗ ಮಾಡಿ ತೊರಿಸ್ತೆ ಕಾಣಿ, ಇಗಾ ಹನ್ನ್ರ್ಡೇಳ್ಲ್  ಅಲ್ದಾ ? ಏಳೊಂದ್ಲಿ ಏಳ, ಏಳೆರ್ಡ್ಲಿ ಹದ್ನಾಲ್ಕ, ಅಂದ್ರೆ ಏಳ್ನೂರಾ ಹದ್ನಾಲ್ಕು, ಕಂಡ್ರ್ಯಾ?"
ಸೈ ನೀನ್ ಉದ್ಧಾರ ಆದ ಹಾಗೇ ಬಿಡ್, ಸರಿ ಹಂಗಾರೆ ಅದೇ ಹನ್ನೆರಡನ್ನ ಏಳ್ ಸಲಿ ಬರ್ದ್ ಕೂಡ್ಸ್ ಕಾಂಬೋ, ಈಗ್ಲೂ ಅದೇ ಉತ್ತರ ಬಂದ್ರೆ ನೀನ್ ಹೇಳೂದ್ ಸರಿ ಅಂತ್ ಲೆಕ್ಕ"
ಅದಕ್ಕೇನಂಬ್ರು ಈಗ ಕೂಡ್ಸ್ತೆ ಕಾಣಿ ಹನ್ನೆರಡನ್ನ   ಏಳ್ ಸಾರಿ ಒಂದರ್ ಕೆಳ್ಗೆ ಒಂದ್ ಬರ್ದೆ, ಈಗ ಕಾಣಿ, ಒಂದನ್ನ ಏಳ್ ಸಲಿ ಕೂಡ್ಸ್ ದ್ರೆ ಏಳು, ಕಡಿಗೆ ಎರ್ಡನ್ನ ಏಳ್ ಸಲಿ ಕೂಡ್ಸ್ದ್ರೆ ಹದ್ನಾಲ್ಕು. ಅಂದ್ರೆ ಏಳ್ನೂರಾ ಹದ್ನಾಕು! ಸರೀ ಅಯ್ತಲ್ಲೆ!!

ಕ್ಲಪ್ತ ಸಮಯದಲ್ಲಿ ಜಾಸ್ತಿ ಆವರಿಸಿಕೊಳ್ಳುವ ಭಾಷೆಯೇ ನಮ್ಮ  ಈ ಕುಂದಾಪುರ ಕನ್ನಡ. ಉಪಯೋಗಿಸಿ, ಉಪಯೋಗಿಸಿ, ಸವೆದು ಸಣ್ಣ( ಸುಣ್ಣ ಅಲ್ಲ) ಹೃಸ್ವ..ವಾಗಿ ತನ್ನದೇ ಪರಿಮಳ ಬೀರುವ ಬಾಷೆಯಿದು, ಕುಂದಾಪ್ರ ಕಡೆಯರಾದ್ರೆ ಮಾತ್ರ ನಿರರ್ಗಳವಾಗಿ ಉದುರುವ ನುಡಿಗಳು ಬೆಂಗಳೂರು ಮತ್ತು
ಮಂಗಳೂರು ಕಡೆಯವರ ಹತ್ರಕುಂಡೀ ಕಾಲ್ ಕೊಟ್ಟ ಪದ್ರಡ್.

Rating
No votes yet

Comments