೩೦೦೦ ವರ್ಷಗಳ ಹಿಂದೆ !!!
ನಾಣಿ ಸ್ನನಮಾಡಿ ಬಂದ, ಎಂದಿನ ಅಭ್ಯಾಸದಂತೆ
"ಗಂಗೇಚ ಯಮುನೆಚೈವ ಗೋದಾವರಿ ಸರಸ್ವತಿ
ನರ್ಮದೆ ಸಿಂಧು ಕಾವೇರಿ ಜಲೈಸ್ಮಿತ್ ಸನ್ನಿದಂ ಕುರು ||" ಎಂದು ಹೇಳತೊಡಗಿದ .....
ಇದ್ದಕ್ಕೆ ಇದ್ದ ಹಾಗೆ, ಆರ್ಕಿಮಿಡಿಸ್ ಗೆ ಬಾತ್ ಟಬ್ ನಲ್ಲಿ ಹೊಳೆದ ಹಾಗೆ, ತಾನು ಇರುವುದು ಇಗ್ಲಂಡ್ , ಇಲ್ಲಿ ಗಂಗೆ ಬರಲು ಹೇಗೆ ಸಾದ್ಯ ? ಅಥ್ವ ಕಾವೇರಿ ಬರಲು ಸಾದ್ಯವೇ ? ಎಂಬ ಪ್ರಶ್ನೆಗಳು ಬಂದರು, ಅಭ್ಯಾಸ ಬಿಡುವಂತಿಲ್ಲ ಅಂತ ಹೇಳಿ ಮುಗಿಸಿದ.
**
ತಾನು ಆಫೀಸ್ ಗೆ ಹೋಗಲು ಬುಕ್ ಮಾಡಿದ್ದ ಟ್ಯಾಕ್ಸಿ ಬಂದು ನಿಂತಿತ್ತು, ಬಾಗಿಲು ತೆಗೆದಾಗ ಅಲ್ಲೊಂದು ಚೀಟಿ ಸಿಕ್ಕಿತು. ಟ್ಯಾಕ್ಸಿಯಲ್ಲಿ ಹೋಗ್ತ ನೋಡಿದ "ಉತ್ತರ ಅಂಬ್ರಿಯ ವಾಟರ್ ಸಪ್ಲೈಯ್ ೨ ಗಂಟೆ ಇರುವುದಿಲ್ಲ " ಎಂದು ಬರೆದಿತ್ತು. ಇಲ್ಲಿ ಯಾವ ನದಿ ಎಂದು ಗೊತ್ತಾಗದಿದ್ದರು, ನಮ್ಮ ಬೆಂಗಳೊರಿನ ವಾಟರ್ ಸಪ್ಲೈಯ್ ತರಹ ಒಂದು ಇದೆ ಎಂದು ಗೊತ್ತಾತ್ತು !!!
**
ಶನಿವಾರ ತನ್ನ ಸ್ನೇಹಿತರೊಡನೆ ಮ್ಯುಸಿಯಮ್ ಗೆ ಪಾದ ಬೆಳೆಸಿದರು. ಆ ಮ್ಯುಸಿಯಮ್ ಡ್ಯನೊಸಾರ್ ಹುಟ್ಟಿದ್ದು, ಮಾನವ ಯಾವಾಗ ಭೊಮಿಗೆ ಬಂದ, ಭೊಮಿಯ ವಯಸ್ಸು ಎಷ್ಟು ? ಇದರೆ ಬಗ್ಗೆ ಸಾಕಷ್ಟು ಸಂಶೋದನೆ ನಡೆಸಿ ಇಟ್ಟಿದ್ದರು !!!. ಹಾಗೆ ನೋಡುತ್ತ ಹೋದಂತೆ ಅಲ್ಲೊಂದು ಟೈಂ ಮಷಿನ್ ಮಾದರಿ ಕಂಡಿತು!!! ಅದು ಒಂದು ರೀತಿ ಸಿಮುಲೇಷನ್ ತರಹ, ನಾಣಿ ಭಾರತವನ್ನು ಸೆಲೆಕ್ಟ್ ಮಾಡಿ, ಗುಂಡಿಯನ್ನು ವತ್ತಿದ, ತಕ್ಷಣ ಅದು ೩೦೦೦ ವರ್ಷಗಳ ಹಿಂದೆ ಭಾರತ ಎಲ್ಲಿತ್ತು ಎಂದು ತೋರಸತೊಡಗಿತು.... ಅದು ಭಾರತವನ್ನು ಭೊಮಿಯ ನಾರ್ತ್ ಪೊಲ್ ಬಳಿ ತೋರಿಸಿತು .....
ನಾಣಿ ಆಗ ನಾರ್ತ್ ಪೊಲ್ ಬಳಿ ಇದ್ದ ಭಾರತ ಇಕ್ವೆಟರ್ ಬಳಿ ಬರಲು ಹೇಗೆ ಸಾದ್ಯ ? ಭೊಮಿಯ ಪದರಗಳ ವ್ಯತ್ಯಸವಾಗಿ ಈಗೆ ಹಾಗಿರಬಹುದೇ? ಹಿಮಾಲಯ ಅಲ್ಲಿ ಇರುವುದಕ್ಕೆ ಅದೇ ಕಾರಣವೇ ? .... ಎಂಬ ಪ್ರಶ್ನೆಗಳು ತಲೆಗೆ ತುಂಬಿದವು ........
ಅಷ್ಟರಲ್ಲಿ "ಲೋ ನಾಣಿ, ನೋಡೊದು ಬಹಳ ಇದೇ ಬಾರಪ್ಪ, " ಅಂತ ಸ್ನೇಹಿತರು ಕರೆದ್ಯೊದರು ...
**
ಮರುದಿನ ಸ್ನಾನ ಮಡಿ ಮುಗಿಸುತ್ತಾ "ಗಂಗೇಚ ..." ಎಂದಾಗ ಮ್ಯುಸಿಯಮ್ ನಲ್ಲಿ ಕಾಡಿದ ಪ್ರಶ್ನೆಗಳು ಎದುರು ಬಂದವು .... ಆದರೇನಂತೆ ಒಂದಾನೊಂದು ಕಾಲದಲ್ಲಿ ಗಂಗೆ ಇಲ್ಲೆ ಇಗ್ಲೆಂಡ್ ಬಳಿ ಇದ್ದುದ್ದರಿಂದ ತಾನು ಹೇಳುವ ಮಂತ್ರವು ವ್ಯಾಲಿಡ್ ಅಂತ ತನ್ನ ಲಾಜಿಕ್ ಹಾಕಿದ !!!!
ಆದರೆ ತನ್ನ ಚಿಂತನೆ ಸರಿಯೆ ? ಎಂಬ ಪ್ರಶ್ನೆ ನಾಣಿಯನ್ನು ಕಾಡುತ್ತಿದೆ !!!
Comments
Re: ೩೦೦೦ ವರ್ಷಗಳ ಹಿಂದೆ !!!
In reply to Re: ೩೦೦೦ ವರ್ಷಗಳ ಹಿಂದೆ !!! by abhimanyu
Re: ೩೦೦೦ ವರ್ಷಗಳ ಹಿಂದೆ !!!