2008 ರ ಸಾಲಿನಲ್ಲಿ ಕರವೇ ನಡೆಸಿದ ಹೋರಾಟಗಳು ಮತ್ತವುಗಳ ಪರಿಣಾಮಗಳ ಯಶಸ್ಸಿನ ಪಟ್ಟಿ

2008 ರ ಸಾಲಿನಲ್ಲಿ ಕರವೇ ನಡೆಸಿದ ಹೋರಾಟಗಳು ಮತ್ತವುಗಳ ಪರಿಣಾಮಗಳ ಯಶಸ್ಸಿನ ಪಟ್ಟಿ

ನಮಸ್ಕಾರ ಸ್ನೇಹಿತರೇ,
ಇವತ್ತಿನ ಪರಿಸ್ಥಿತಿಯನ್ನ ಅವಲೋಕಿಸಿದರೆ ನಮಗೆ ಕಾಣ ಸಿಗೋದು ಏನು? ಇವತ್ತಿನ ಸರಕಾರ ಆಗಲೀ ಅಥವಾ ಪ್ರತಿಪಕ್ಷಗಳ ಸ್ಥಾನದಲ್ಲಿ ಕುಳಿತಿರುವ ರಾಜಕೀಯ ಪಕ್ಷಗಳಿಗಾಗಲಿ ನಮ್ಮ ರಾಜ್ಯದ, ರಾಜ್ಯದ ಜನತೆಯ ಬಗ್ಗೆ ಯೋಚಿಸೋಕೆ ಸಮಯ ಇದೆಯಾ?
ಇವತ್ತಿನ ಸಮಯಕ್ಕೆ ನಮ್ಮ ನಾಡು, ನುಡಿ ಮತ್ತು ನಮ್ಮ ಜನತೆಗೆ ಆಗಬೇಕಾದ ಕೆಲಸಗಳು ಆಗಿದ್ದಾವ ಅನ್ನೋ ಮೂಲ ಪ್ರಶ್ನೆಯನ್ನ ಕೇಳಿದರೆ ಸಿಗೋ ಉತ್ತರ "ಇಲ್ಲ".
ನಾವು ಕಳೆದ ವರ್ಷ ನೋಡಿದಾಗ ಕಾಣ ಸಿಗುವ ಸಂತೋಷದ ಸುದ್ದಿಗಳೇನು ಅನ್ನೋದನ್ನ ನೋಡಿದರೆ ಕೆಲವಷ್ಟು ಕಾಣಸಿಗುತ್ತವೆ ಹಾಗೇನೇ ಕೆಟ್ಟ ಸುದ್ದಿಗಳು ಕೂಡಾ ಇವೆ.

ಕನ್ನಡ ನಾಡ, ನುಡಿ ಪ್ರಶ್ನೆಯ ಬಗ್ಗೆ ೨೦೦೮ರಲ್ಲಿ ಬಹಳಷ್ಟು ಚರ್ಚೆ ಮತ್ತು ಹೊರಾಟಾಗಳಾಗಿವೆ. ಅದು ಶಾಸ್ತ್ರೀಯ ಭಾಷ ಸ್ಥಾನಮಾನ ಇರಬಹುದು ಅಥವಾ ಹೊಗೆನಕ್ಕಲ್ ವಿಷಯವಿರಬಹುದು. ಇವೆಲ್ಲ ಚರ್ಚೆ ಮತ್ತು ಹೋರಾಟಗಳಲ್ಲಿ ಕಂಡುಬಂದ ಮುಂಚೂಣಿ ಹೆಸರು ಕರ್ನಾಟಕ ರಕ್ಷಣಾ ವೇದಿಕೆ ಅಂದ್ರೆ ತಪ್ಪಾಗಲ್ಲ.
ಅವರ ನಿರಂತರ ಮತ್ತು ಸಂಘಟಿತ ಹೋರಾಟದ ಫಲವಾಗಿ ಬಹಳಷ್ಟು ಒಳ್ಳೆಯ ಕೆಲಸಗಳಾಗಿವೆ.

ನನಗೆ ಬಂದ ಕರವೇಯ ಪತ್ರವನ್ನ ಇಲ್ಲಿ ಹಾಕುತ್ತಿದ್ದೇನೆ
-----------------------------------------------------------------------------------------------------------------------------------------------
ಕನ್ನಡ ಬಂಧು,

ಕರ್ನಾಟಕದ ಎಲ್ಲರಂಗಗಳ ಏಳಿಗೆಯೇ ನಮ್ಮ ಗುರಿ' ಎಂಬ ಧ್ಯೇಯದೊಂದಿಗೆ ಕನ್ನಡ-ಕರ್ನಾಟಕ-ಕನ್ನಡಿಗರ
ಪರ ಹೋರಾಟ ಮತ್ತು ಕಾರ್ಯಕ್ರಮಗಳನ್ನು ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರ ನಾಯಕತ್ವದಲ್ಲಿ
ನಡೆಸಿಕೊಂಡು ಬರುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯು 2008ರ ಸಾಲಿನಲ್ಲಿ ನಡೆಸಿದ ಹೋರಾಟಗಳ
ಮತ್ತವುಗಳ ಪರಿಣಾಮಗಳ ಯಶಸ್ಸಿನ ಪಟ್ಟಿ ಕೆಳಕಂಡಂತಿವೆ....

ರೈಲ್ವೆಯಲ್ಲಿ ಕನ್ನಡಿಗರ ನೇಮಕಾತಿಗೆ ಹೋರಾಟ

ನೈರುತ್ಯ ರೈಲ್ವೆಯ ಡಿ-ವರ್ಗದ 4701 ಕೆಲಸಗಳ ನೇಮಕಾತಿಯಲ್ಲಿ ಕನ್ನಡೇತರರಿಗೆ ಅದರಲ್ಲೂ ಹೆಚ್ಚಾಗಿ
ಬಿಹಾರಿಗಳೂ ಸೇರಿದಂತೆ ಹಿಂದಿ ಭಾಷಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೆಲಸಗಳನ್ನು ನೀಡಲು ರೈಲ್ವೆ ಇಲಾಖೆ
ಹುನ್ನಾರ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಹೋರಾಟ ನಡೆಸಿ ನೇಮಕಾತಿಯನ್ನು ನಿಲ್ಲಿಸಿದ್ದೆವು, ಕರವೇ ನಡೆಸಿದ
ಹೋರಾಟದ ಫಲವಾಗಿ ನೈರುತ್ಯ ವಲಯ ರೈಲ್ವೆ ಮುಖ್ಯಸ್ಥರು ಕೇಂದ್ರ ಸರ್ಕಾರಕ್ಕೆ 'ಕರ್ನಾಟಕದ ರೇಲ್ವೆಯಲ್ಲಿ
ಕನ್ನಡಿಗರಿಗೆ ಹುದ್ದೆಯನ್ನು ಮೀಸಲಿಡುವಂತೆ' ಕೋರಿ ಪತ್ರವನ್ನು ಬರೆದಿದ್ದಾರೆ. ಇದು ಕರವೇ ನಡೆಸಿದ
ಹೋರಾಟಕ್ಕೆ ಸಂದ ಜಯ. ಕರವೇ ನಡೆಸಿದ ಹೋರಾಟದ ಬಗ್ಗೆ ಕೆಳಗಿನ ಕೊಂಡಿಯನ್ನ ನೋಡಿ

http:// karnatakarakshanavedike.org/ modes/news/12/railway- kannagigara--nemakatigagi- horata.html

http://karave.blogspot.com/ search/label/%E0%B2%B0%E0%B3% 88%E0%B2%B2%E0%B3%8D%E0%B2%B5% E0%B3%87

ಕನ್ನಡಕ್ಕೆ ದೊರೆತ ಶಾಸ್ತ್ರೀಯ ಭಾಷಾ ಸ್ಥಾನಮಾನ

ತಮಿಳಿಗೆ ಶಾಸ್ತ್ರೀಯ ಭಾಷೆ ಸ್ಥಾನ ಮಾನವನ್ನು ನೀಡಿ. ಶಾಸ್ತ್ರೀಯ ಭಾಷೆ ಸ್ಥಾನ ಮಾನ ಪಡೆಯಲು ತಮಿಳಿನಷ್ಟೇ
ಅಹ೯ತೆಗಳು ಕನ್ನಡಕ್ಕೆ ಇದ್ದರೂ ಸಹ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ನೀಡದಿರುವುದರ ವಿರುದ್ಧ ಹಲವಾರು ರೀತಿಯ
ಹೊರಾಟವನ್ನು ನಡೆಸಿದ್ದೆವು ಮತ್ತು ಈ ಹೋರಾಟದ ಬಿಸಿಯನ್ನು ಕೇಂದ್ರ ಸರಕಾರಕ್ಕೆ ಮುಟ್ಟಿಸಲು ಸಾವಿರಾರು
ಕರವೇ ಕಾರ್ಯಕರ್ತರು ದೆಹಲಿಯಲ್ಲಿ ಪ್ರತಿಭಟನೆಯನ್ನು ನಡೆಸಿ ಕೇಂದ್ರ ಸರಕಾರಕ್ಕೆ ಮನವಿ ಪತ್ರವನ್ನು ಸಹ
ಕೊಟ್ಟಿದ್ದೆವು. ಇದಲ್ಲದೇ ಕರವೇಯ ಕಾರ್ಯಕರ್ತರು ಈ ಹೋರಾಟದಲ್ಲಿ ಹಲವಾರು ಬಾರಿ ಜೈಲು ವಾಸವನ್ನು
ಸಹ ಅನುಭವಿಸಿದ್ದರು. ಕಳೆದ ಎರಡು ವರ್ಷಗಳಿಂದ ಕನ್ನಡಕ್ಕೆ ಶಾಸ್ಟ್ರೀಯ ಭಾಷೆ ಸ್ಥಾನ ಮಾನ ಕ್ಕಾಗಿ ಕನ್ನಡಿಗರು
ನಡೆಸಿದ ಹೋರಾಟದಲ್ಲಿ ಕರವೇ ಮಹತ್ತರ ಪಾತ್ರ ವಹಿಸಿತ್ತು. ಶಾಸ್ತ್ರೀಯ ಭಾಷೆ ಸ್ಥಾನಮಾನಕ್ಕಾಗಿ ಕರವೇ ನಡೆಸಿದ
ಹೋರಾಟದ ಬಗ್ಗೆ ಕೆಳಗಿನ ಕೊಂಡಿಯಲ್ಲಿ ನೋಡಿ

http://karnatakarakshanavedike .org/modes/view/84/shastreeya_ bhashe_horaatada_haadi.html

http://karave.blogspot.com/ 2008/10/blog-post_31.html

ಬೆಳಗಾವಿಯ ಮಹಾನಗರ ಪಾಲಿಕೆಗೆ ಕನ್ನಡದ ಮೇಯರ್

ಕಳೆದ ೧೭ ವರ್ಷದಿಂದ ಕನ್ನಡದ ಮಹಾ ಪೌರರನ್ನೇ ಕಾಣದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ
ಕರವೇ ನಡೆಸಿದ ಹೋರಾಟದ ಫಲವಾಗಿ ಕನ್ನಡತಿಯೊಬ್ಬರು ಮಹಾಪೌರರಾಗಿ ಆಯ್ಕೆಯಾಗಿದ್ದಾರೆ. ಈ ಆಯ್ಕೆ
ಸುಲಭವಾಗಿ ದೊರೆತದ್ದಲ್ಲ. ಇದರ ಹಿಂದೆ ಕರವೇ ಕಾರ್ಯಕರ್ತರ ಹೋರಾಟ ಬಲಿದಾನ ಸಾಕಷ್ಟಿದೆ. ಈ ಆಯ್ಕೆಯಿಂದ
ನಮ್ಮ ನಾಡಿನಲ್ಲಿ ತಿಂದುಂಡು, ಕರ್ನಾಟಕದ ವಿರುದ್ಧ ವಿಷ ಬೀಜ ಬಿತ್ತುತಿದ್ದ ಎಂ.ಇ.ಎಸ್. ಗೆ ಕರ್ನಾಟಕ ರಕ್ಷಣಾ ವೇದಿಕೆಯು
ತಕ್ಕ ಪಾಠ ಕಲಿಸಿದೆ. ಬೆಳಗಾವಿಯಲ್ಲಿ ನಡೆಸಿದ ಹೋರಾಟ ಮತ್ತು ಅಲ್ಲಿನ ಕನ್ನಡಿಗರನ್ನು ಜಾಗೃತಿ ಗೊಳಿಸಲು ಕೈಗೊಂಡ
ಕಾರ್ಯಕ್ರಮದ ವಿವರಕ್ಕೆ ಕೆಳಗಿನ ಕೊಂಡಿ ನೋಡಿ

http:// karnatakarakshanavedike.org/ modes/view/64/belagaavi- digvijaya.html

http://karave.blogspot.com/ 2008/03/blog-post_10.html

ಹೊಗೇನಕಲ್ ನಲ್ಲಿ ಅಕ್ರಮ ಯೋಜನೆಗೆ ತಡೆ

ಕಳೆದ ವರ್ಷ ಕರ್ನಾಟಕದಲ್ಲಿ ಸರಕಾರವಿಲ್ಲದಿದ್ದನ್ನು ಗಮನಿಸಿದ ತಮಿಳುನಾಡು ಸರಕಾರ, ಕರ್ನಾಟಕದ ಹೊಗೇನಕಲ್
ಪ್ರದೇಶದಲ್ಲಿ ತಮಿಳುನಾಡು ಕುಡಿಯುವ ನೀರಿನ ಪೂರೈಕೆಯ ಯೋಜನೆಯೊಂದನ್ನು ಜಾರಿಗೊಳಿಸಲು ಮುಂದಾಯ್ತು.
ನಮ್ಮ ನೆಲದಲ್ಲಿ ಅಕ್ರಮವಾಗಿ ನಿರ್ಮಾಣ ಕೆಲಸ ಆರಂಭಿಸಲು ಮುಂದಾಗಿ ನಮಗೆ ಸೇರಿದ ನಡುಗಡ್ಡೆಯ ಭಾಗದಲ್ಲಿ
ಕಾಮಗಾರಿ ನಡೆಸಲು ಮುಂದಾದ ತಮಿಳುನಾಡಿನ ವಿರುದ್ಧ ಸಿಡಿದೆದ್ದ ಕರವೇಯ ಹೋರಾಟದಿಂದ ಹೊಗೇನಕಲ್ ನಲ್ಲಿ
ತಮಿಳುನಾಡು ಯೋಜನೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟಿದೆ. ಇದು ಕರವೇ ಹೋರಾಟದ ಫಲ. ಮುಂದಿನ ದಿನಗಳಲ್ಲಿ
ಜಂಟಿ ಸಮೀಕ್ಷೆಯ ನಂತರ ತಮಿಳುನಾಡು ತನ್ನ ನೆಲದಲ್ಲಿ ಈ ಯೋಜನೆ ನಡೆಸಲಿ ಎಂಬುದು ಕರವೇಯ ಒತ್ತಾಯವಾಗಿದೆ.

http://karave.blogspot.com/2008_03_30_archive.html

ವಿಧಾನ ಸಭೆಯಲ್ಲಿ ಕನ್ನಡ ಮಾತನಾಡೆನೆಂದ ಶಾಸಕರಿಗೆ ಜ್ಞಾನೋದಯ

ವಿಧಾನ ಸಭೆಯಲ್ಲಿ ಕನ್ನಡದಲ್ಲಿ ಮಾತನಾಡಲು ನಿರಾಕರಿಸಿದ್ದ ಮತ್ತು ಇದರ ವಿರುದ್ಧ ಮಾತನಾಡಿದ್ದ ಇತರ ಸದಸ್ಯದ ವಿರುದ್ಧ
ಹರಿಹಾಯ್ದಿದ್ದ, ವಿಧಾನ ಸಭೆಯ ಸದಸ್ಯ ಡೆರಿಕ್ ಪೂಲಿನ್ ಫಾ ವಿರುದ್ದ ಪ್ರತಿಭಟನೆ ನಡೆಸಿ ಪೂಲಿನ್ ಫಾ ರವರಿಗೆ ತಮ್ಮ ತಪ್ಪನ್ನು
ಅರಿವು ಮಾಡಿಕೊಡಲು ಯಶಸ್ವಿಯಾಗಿದ್ದೆವು. ನಂತರ ಪೂಲಿನ್ ಫಾ ರವರೇ ಖುದ್ಧು ಕರವೇ ಕಛೇರಿಗೆ ಬಂದು ಕರವೇ
ಸದಸ್ಯರಾಗಿದ್ದೇ ಅಲ್ಲದೆ ಇನ್ನೆಂದೂ ವಿಧಾನ ಪರಿಷತ್ತಿನ ಸಭೆಯಲ್ಲಿ ಕನ್ನಡವನ್ನು ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡುವುದಿಲ್ಲವೆಂದು
ಹೇಳಿಕೆಯನ್ನು ನೀಡಿದ್ದಾರೆ. ಹೋರಾಟದ ವಿವರಗಳಿಗೆ ಕೆಳಗಿನ ಕೊಂಡಿಗಳನ್ನು ನೋಡಿ.

http:// karnatakarakshanavedike.org/ modes/view/75/kannada- maaranaadada-shasakana- vidudda-pratibhatane.html

http://karave.blogspot.com/ 2008/08/blog-post_07.html

ವಿಜಾಪುರಮಹಿಳಾ ವಿಶ್ವವಿದ್ಯಾಲಯಕ್ಕೆ ಕನ್ನಡೇತರರ ನೇಮಕಕ್ಕೆ ತಡೆ

ವಿಜಾಪುರ ಜಿಲ್ಲೆಯ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಹುದ್ದೆಗೆ ಆಂಧ್ರ ಪ್ರದೇಶದ ಶಾಸಕಿ ಡಾ||ರಾಜಲಕ್ಷ್ಮಿ
ಅವರನ್ನು ಸದಸ್ಯರನ್ನಾಗಿ ನೇಮಿಸಿರುವ ಕ್ರಮವನ್ನು ಖಂಡಿಸಿ ನಾವು ಪ್ರತಿಭಟಿಸಿದ್ದೆವು. ರಾಜ್ಯಪಾಲರು ಕನ್ನಡ
ಬಾರದವರನ್ನು ಉನ್ನತ ಸ್ಥಾನಗಳಿಗೆ ನೇಮಿಸಿ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆಂದು ರಾಜ್ಯಾಧ್ಯಕ್ಷರಾದ
ನಾರಾಯಣ ಗೌಡರು ಅಸಮಾಧಾನ ವ್ಯಕ್ತಪಡಿಸಿದರು. ಈ ನೇಮಕಾತಿಯನ್ನು ಕೂಡಲೇ ರದ್ದುಗೊಳಿಸಿ ನಾಡಿನ
ಹಿರಿಯ ಶಿಕ್ಷಣಕಾರರನ್ನು ನೇಮಿಸಬೇಕಾಗಿ ಅಧ್ಯಕ್ಷರು ಒತ್ತಾಯಿಸಿದ್ದರು. ಕರವೇ ಕಾರ್ಯಕರ್ತರು ರಾಜ್ಯದ ಮೂಲೆ
ಮೂಲೆಗೆಗಳಲ್ಲಿ ಇದರ ವಿರುದ್ಧ ಹೋರಾಟ ನಡೆಸಿದ್ದರು. ಹೋರಾಟವು ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತಿದುದ್ದನ್ನು
ಮನಗಂಡ ರಾಜ್ಯಪಾಲರು ಈ ನೇಮಕಾತಿಯನ್ನು ರದ್ದುಗೊಳಿಸಿದರು. ಇದು ಕರವೇ ನಡೆಸಿದ ಹೋರಾಟಕ್ಕೆ ಸಂದ ಜಯ
ಹೋರಾಟದ ವಿವರಗಳಿಗೆ ಕೆಳಗಿನ ಕೊಂಡಿಗಳನ್ನು ನೋಡಿ

http:// karnatakarakshanavedike.org/ modes/view/62/vijaapura- vishwavidyaalaya.html

http://karave.blogspot.com/2008_02_03_archive.html

ನಾಡಪರವಾದ ನಮ್ಮೆಲ್ಲ ಹೋರಾಟಗಳ ಬೆನ್ನಹಿಂದಿನ ಶಕ್ತಿ ನೀವೇ...
ಕರ್ನಾಟಕ ರಕ್ಷಣಾ ವೇದಿಕೆಗೆ ನಿಮ್ಮ ಬೆಂಬಲ ಸದಾ ಕಾಲ ಹೀಗೇ ಇರಲಿ...

- ಕರ್ನಾಟಕ ರಕ್ಷಣಾ ವೇದಿಕೆ

Rating
No votes yet