Bengaluru Decoded 2

Bengaluru Decoded 2

ಬಸವೇಶ್ವರ ನಗರ:
ಭಕ್ತಿ ಭಂಡಾರಿ ಬಸವಣ್ಣನವರ ಹೆಸರಿನ ಈ ಬಡವಣೆಯ ರಾಜಾಜಿನಗರಕ್ಕೆ ಹತ್ತಿರದಲ್ಲಿದೆ. ಇಲ್ಲಿ ಉತ್ತರ ಕರ್ನಾಟಕದ ಬಹುಪಾಲು ಜನ ವಾಸವಾಗಿದ್ದಾರೆ.

ದೊಮ್ಮಲೂರು:
ಬೆಂಗಳೂರಿನ ಪೂರ್ವ ಭಾಗದಲ್ಲಿರುವ ಈ ಬಡಾವಣೆಯ ಮೊದಲಿನ ಹೆಸರು "ಭಗತ್ ಸಿಂಗ್ ನಗರ", ಆದರೆ ಈಗ ದೊಮ್ಮಲೂರು ಎಂದು ಕರೆಯಲು ನಿಖರ ಕಾರಣ ಗೊತ್ತಿಲ್ಲ.
ವಾದ ೧: ಹೆಚ್ಚಾಗಿ ತಮಿಳರೇ ವಾಸವಾಗಿರುವ ಇಲ್ಲಿ, ಚೋಳರು ಕಟ್ಟಿಸಿದ ಚೊಕ್ಕನಾಥಸ್ವಾಮಿ [ಶಿವನ ರೂಪ] ದೇವಾಲಯವಿದೆ. ಇಲ್ಲಿನ ದೇವರಿಗೆ "ತೊಂಬಲೂರ್" [ತಮಿಳಿನಿಂದ ಬಂದ ಹೆಸರು] ಎಂಬ ಹೂವು ತುಂಬ ಇಷ್ಟವಂತೆ, ಹಾಗಾಗಿ ಈ ಪ್ರದೇಶಕ್ಕೆ ದೊಮ್ಮಲೂರು ಎಂದು ಕರೆಯುತ್ತಾರೆ.

Electronics City
[ಬಹುಶಃ ಯಾವುದೇ ವಿವರಣೆ ಬೇಕಗಿಲ್ಲ]
ಒಟ್ಟಾರೆ ಇದರ ವಿಸ್ತೀರ್ಣ ೩೩೨ acres (1.3 km²). ಇದು ಕೊನಪ್ಪನ ಅಗ್ರಹಾರ ಹಾಗು ದೊಡ್ಡತೋಗೂರು ಹಾಗು ಇತರೆ ಹಳ್ಳಿಗಳನ್ನು ಆವರಿಸಿದೆ. ಇಲ್ಲಿ ೧೦೦ಕ್ಕಿಂತ ಹೆಚ್ಚು ಉದ್ಯಮಗಳಿವೆ [IT]. ಇದರ ಉಸ್ತುವಾರಿ Keonics ಎಂಬ ಕಂಪನಿಯ ಹೆಗಲಮೇಲಿದೆ.

ಗಿರಿನಗರ:
ಇದರ ಮೊದಲ ಹೆಸರು Writer's Colony. ಇದು ನೈರುತ್ಯ ದಿಕ್ಕಿನಲ್ಲಿದೆ (South-West). ಮೈಸೂರು ರಸ್ತೆಯವರೆಗೆ ಇದು ವಿಸ್ತರಿಸಿದೆ. ಶ್ರೀನಗರ, ಬ್ಯಾಟರಾಯನಪುರ, ಹೊಸಕೆರೆ ಹಳ್ಳಿ, ವೀರಭದ್ರ ನಗರ, ಶ್ರೀನಿವಾಸ ನಗರ, ಹಾಗು ಬನಶಂಕರಿ ಬಡವಣೆಗಳಿಂದ ಇದು ಸುತ್ತುವರೆದಿದೆ. ಈ ಪ್ರದೇಶದಲ್ಲಿ ಒಂದು ಗುಡ್ಡವಿದೆ [ಆರಂಗಣ ಗುಡ್ಡ] ಆ ಕಾರಣದಿಂದಾಗಿ ಇದಕ್ಕೆ ಗಿರಿನಗರ ಎಂದು ನಾಮಕರಣ ಮಾಡಲಾಗಿದೆ.
ಇಲ್ಲಿರುವ ಕೆಲವು ಪ್ರಸಿಧ್ಧ ದೇವಸ್ಥಾನಗಳು:
೧. ಅವಧೂತ ದತ್ತ ಪೀಠ (ಗಿರಿನಗರ ೨ನೇ ಹಂತ)
೨. ಶ್ರೀ ವಾಸವಿ ಕನ್ಯಕಾ ಪರಮೇಶ್ವರಿ ದೇವಸ್ಥಾನ (ಗಿರಿನಗರ ೨ನೇ ಹಂತ)
೩. ಶಿರಡಿ ಸಾಯಿಬಾಬಾ ಮಂದಿರ (ಗಿರಿನಗರ ೨ನೇ ಹಂತ)
೪. ಗಣೇಶ ದೇವಸ್ಥಾನ [ಆವಲಹಳ್ಳೀ BDA park ಹತ್ತಿರ]
೫. ಶ್ರೀ ಶಕ್ತಿ ಗಣಪತಿ ದೇವಸ್ಥಾನ [ಹೊಸಕೆರೆ ಹಳ್ಳಿ]
೬. ಶ್ರೀ ಶಾರದಾ ಪೀಠ [80 Feet Road]
೭. ರಾಘವೇಂದ್ರ ಸ್ವಾಮಿ ಮಠ [80 Feet Road]
೮. ಶ್ರೀ ರಾಮಾಶ್ರಮ (ರಾಮಮಂದಿರ) [80 Feet Road]
೯. ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ [೧ ನೇ ಹಂತ]
೧೦. ಶ್ರೀ ಮಹಾಗಣಪತಿ ದೇವಸ್ಥಾನ [೧ ನೇ ಹಂತ]

Rating
No votes yet

Comments