Magazine Dr..!

Magazine Dr..!

ಬನ್ನಿ ಈ ವ್ಯಕ್ತಿಯನ್ನು ಭೇಟಿಯಾಗೋಣ. ಹೆಸರು ಶೇಖರ್ ಎಂ.ಎ.,ಎಂ.ಡಿ;
ಕಲಿತದ್ದು ಎಂ.ಎ.,ಈ ಎಂ.ಡಿ ಇದೆಯಲ್ಲಾ ಅದು ನಾವು ಕೊಟ್ಟ ಬಿರುದು-ಮ್ಯಾಗJïನ್ ಡಾಕ್ಟರ್-
ಗೊತ್ತಾಗಲ್ಲಿಲ್ಲವಾ? ಅವರು ಓದಿದ ಮ್ಯಾಗJïನ್ನಲ್ಲಿ ಬಂದಿರುವ ಆರೋಗ್ಯ
ಸಂಬಂಧೀ ಲೇಖನಗಳೆಲ್ಲಾ ಅವರಿಗೆ ಕಂಠಪಾಠ. ಮಾತ್ರವಲ್ಲ ಮನೆಯವರ
ಗೆಳೆಯರ,ಅಕ್ಕಪಕ್ಕದವರ ಕಂಠ,ಕಿವಿ,ಹೊಟ್ಟೆಗೂ ತುರುಕುವರು.ನೀವು
ಹೊಸದಾಗಿ ಅವರ ನೆರೆಮನೆಗೆ ಬಿಡಾರ ಬಂದಿದ್ದು ಎಂದಿಟ್ಟುಕೊಳ್ಳಿ. ಪಕ್ಕದಮನೆಯವರು
ಎಂಬ ಸೌಜನ್ಯಕ್ಕೆ ಕಾಫಿಗೆ ಆಮಂತ್ರಿಸಿದಿರಾ...ಮುಗಿಯಿತು... ಕಾಫಿಯ ದುರ್ಗುಣಗಳನ್ನು
ಮ್ಯಾಗಜ಼ಿನ್ನ ಆಧಾರ ಸಹಿತ ಹೇಳಲು ಸುರುಮಾಡಿದರೆ ನಿಮ್ಮ ಕೈಯಲ್ಲಿದ್ದ ಕಾಫಿ
ಗ್ಲಾಸನ್ನು ವಿಷದ ಬಟ್ಟಲೆಂಬಂತೆ ದೂರ ಎಸೆದುಬಿಟ್ಟಿರುತ್ತೀರಿ- ಗ್ಯಾರಂಟಿ! ಅಷ್ಟಕ್ಕೂ
ನಿಲ್ಲುವುದಿಲ್ಲ. ಸಕ್ಕರೆಯ ಅವಗುಣಗಳನ್ನು ಹೇಳಲು ಸುರುಹಚ್ಚಿದ ಕೂಡಲೇ
ನಿಮ್ಮ ಮನೆಯಾಕೆ ಸಕ್ಕರೆಯನ್ನು ಪೂರ್ತಿ ಸಿಂಕಿಗೆ ಸುರಿದಿರುತ್ತಾರೆ. ಇನ್ನರ್ಧ
ಗಂಟೆಯಲ್ಲಿ ಹಾಲನ್ನು ಮೋರಿಗೆ ಚೆಲ್ಲಿಯಾಗಿರುವುದು."ಟೊಮೆಟೊ ತಿನ್ನುತ್ತೀರಾ?
ಟೊಮೆಟೊ ತಿನ್ನುವುದು ಒಂದೇ ಪೇಪರ್ ತಿನ್ನುವುದು ಒಂದೇ.."ಎಂದು
ವಿವರಿಸುವುದನ್ನು ಕೇಳಿಸಿದ ನಿಮ್ಮಾಕೆ ಮಧ್ಯಾಹ್ನ ಸಾರಿಗೆಂದು ಹೆಚ್ಚಿಟ್ಟ
ಟೊಮೆಟೊ ಬಿಸಾಕಿ ನೀವು ಕೈಲಿದ್ದ ಪೇಪರ್ ತಿನ್ನಲು ಸುರುಮಾಡಿರುತ್ತೀರಿ! ಕೋಸು
ಕ್ಯಾರೆಟ್ ಎಲ್ಲಾ ಡಿಡಿಟಿ ಮಯ, ಸೊಪ್ಪುಗಳೆಲ್ಲಾ ಬ್ಯಾಕ್ಟೀರಿಯಮಯ, ತೆಂಗಿನೆಣ್ಣೆ
ಬಾಟಲ್ ನೋಡಿದಿರೋ ನಿಮಗೆ ಹರ್ಟ್ ಅಟ್ಟಾಕ್ ಗ್ಯಾರಂಟೀ. ಕೊನೆಯ ಅರ್ಧ
ಗಂಟೆಯಲ್ಲಿ ನೀವು ನಿಮ್ಮಾಕೆ ಏನು ತಿನ್ನಬೇಕು ಎಂದು ಗೊತ್ತಾಗದೆ ಅಳುತ್ತಾ
ಕುಳಿತಿರುವಾಗ,ದೊಡ್ಡ ಡಾಕ್ಟ್ರ ತರಹ ನಿಮಗೆ ಧೈರ್ಯದಿಂದಿರಲು ಹೇಳಿ ಜಾಗ
ಖಾಲಿಮಾಡಿರುತ್ತಾರೆ. ಇನ್ನೊಂದು ವಾರದಲ್ಲಿ ನೀವು ಹೊಸ ಮನೆ ಹುಡುಕಿದಿರೊ
ಬಚಾವ್. ನೆರೆಮನೆಯವರ ಅವಸ್ಥೆಯೇ ಹೀಗಿದ್ದರೆ ಅವರ ಸ್ವಂತ
ಮನೆಯವರು ಹೇಗಿರಬಹುದು? ಬನ್ನಿ ನೋಡೋಣ..ಈಕೆ ಜಯಮ್ಮ, ಶೇಖರ್ರವರ
ಪ್ರಿಯಪತ್ನಿ. ಒಂದರ್ಥದಲ್ಲಿ ಹೇಳುವುದಾದರೆ ಮ್ಯಾಗಜ಼ಿನ್ ಡಾಕ್ಟ್ರ ಗಿನಿಪಿಗ್. ಮನೇಕಾ
ಗಾಂಧಿಗೆ ನಿಜವಾಗಿಯೂ ಪ್ರಾಣಿದಯೆ ಎಂಬುದಿದ್ದರೆ ಮೊದಲಿಗೆ ಈ ಪ್ರಾಣಿಯ ರಕ್ಷಣೆಗೆ
ಬರಬೇಕು. ಒಂದು ಬೆಳಗ್ಗೆದ್ದಾಗ ಈಕೆಗೆ ಜ್ವರ ಸುರುವಾಯಿತು.ಹೊದ್ದುಕೊಂಡು
ಮಲಗಿದ್ದರು.ಅದೇ ದಿನದ ಪತ್ರಿಕೆಯಲ್ಲಿ ಯಾರೋ ವೈದ್ಯ ಮಹಾಶಯರು ಜ್ವರ
ಬಂದಾಗ ಸ್ನಾನ ಮಾಡಿ ಫ಼್ಯಾನ್ ಗಾಳಿಗೆ ಮಲಗಬೇಕೆಂದು ಬರೆದ ಲೇಖನ
ಬರಬೇಕೇ...ಸರಿ.. ಎಬ್ಬಿಸಿ ಸ್ನಾನ ಮಾಡಿಸಿ ಫ಼್ಯಾನ್ ಹಾಕಿ ಮಲಗಿಸಿ ಕಾರು ಮಾಡಿ
ಡಾಕ್ಟ್ರನ್ನು ಕರೆಯಿಸಿ ಬೈಸಿಕೊಳ್ಳಬೇಕಾಯಿತು.ಡಾಕ್ಟ್ರು ಹೋಗುವವರೆಗೆ ಸುಮ್ಮನಿದ್ದು
ಗೇಟು ದಾಟಿದ ಕೂಡಲೇ "ಆ ಡಾಕ್ಟ್ರಿಗೇನು ಗೊತ್ತಿದೆ? ಔಷಧಿ ಎಂಬ ವಿಷ ಅಷ್ಟು ನಮ್ಮ
ದೇಹಕ್ಕೆ ಹಾಕಿ ನಮ್ಮ ದೇಹದ ರೆಸಿಸ್ಟೆನ್ಸ್ ಕಮ್ಮಿಮಾಡುವರು.ರೋಗ ತಡಕೊಳ್ಳುವ
ಶಕ್ತಿಯೇ ಹೋಗುವುದು...."ಎನ್ನಲು ಸುರುಮಾಡಿ ಪುನಃ ರೋಗಿಯನ್ನು ತನ್ನ
ವಶಕ್ಕೆ ತೆಗೆದುಕೊಳ್ಳುವರು. ಈ ಮಹಾಶಯರ ಟ್ರೀಟ್ಮೆಂಟ್
ಮುಂದುವರಿದಂತೆ ಜಯಮ್ಮನವರ ಖಾಯಿಲೆಗಳು ಒಂದೊಂದಾಗಿ ಹೆಚ್ಚಿ
ಡಯಾಬಿಟಿಸ್,ಹೈಪರ್ಟೆನ್ಷನ್,ಮಂಡಿ ತೊಂದರೆ, ಗ್ಯಾಸ್ಟ್ರಿಕ್,ಪೈಲ್ಸ್...ದಾಟಿ ಈಗ
ಹೃದಯದ ತೊಂದರೆಯವರೆಗೆ ಬಂದು ಮುಟ್ಟಿದೆ.ನೀವು ಶೇಖರ್ ಡಾಕ್ಟ್ರನ್ನು
ಬೆಳಗ್ಗೆಯೇ ಭೇಟಿಯಾಗಲು ಹೋದರೆ ಆ ಸಿಹಿ(ಕಹಿ) ನೆನಪು ನಿಮಗೆ
ಜೀವನಪರ್ಯಂತಬಿಟ್ಟು ಹೋಗದು. "ನೋಡೇ..ನಮ್ಮ ಹುಡುಗನಿಗೆ ಒಂದು
ಕಪ್ ಕಾಫಿ ತಾರೇ...." ಎಂದಾಗ "ಬೇಡ ಈಗಷ್ಟೇ ಕುಡಿದು ಬಂದೆ" ಎಂದರೂ ಬಿಡದೆ "
ಕುಡಿದು ನೋಡಿ, ಮತ್ತೆ ಹೇಳಿ" ಎನ್ನುವರು. ಹೌದು.. ಅವರು ನಿಮಗೆ ಕುಡಿಸುವುದು
ಕಾಫಿ ಪುಡಿಗೆ ಬದಲು ಬೇವಿನ ಎಲೆ ಹಾಕಿ ಸಕ್ಕರೆ ಹಾಲು ಖೋತಾ ಮಾಡಿದ 'ಸ್ಫೆಷಲ್
ಕಾಫಿ.' ಈ ಕಾಫಿ ಕುಡಿದು ಕಪಿ ಮುಖದೊಂದಿಗೆ ಹೊರಬಂದಿರುತ್ತೀರಿ.

Rating
No votes yet

Comments