ಸ್ಪೈಸ್ ಟೂರ್ ಮತ್ತು ತೋಟ ಚಾರಣ ೨
ನಾಲ್ಕು ವರ್ಷ ಮೊದಲು ತೇಕ್ಕಾಡಿಗೆ ಟೂರ್ ಹೋಗಿದ್ದೆ.
ತೇಕ್ಕಾಡಿಗೆ ಹೋಗಿದ್ದವರಿಗೆ "ಸ್ಪೈಸ್ ಟೂರ್" ಬಗ್ಗೆ ಗೊತ್ತಿರಬಹುದು.
ಅಂದಾಜು ೨೫ ಮಂದಿಯಿದ್ದ ನಮ್ಮ ತಂಡವನ್ನು ಮಿನಿ ಬಸ್ಸಲ್ಲಿ ಒಂದು ಮನೆಯೆದುರಿಗೆ ಕರಕೊಂಡು ಹೋದರು. ಮನೆಯಾಕೆ ನಮ್ಮನ್ನೆಲ್ಲಾ ಹಿತ್ತಲಿಗೆ ಕರಕೊಂಡು ಹೋಗಿ, ಅಲ್ಲಿದ್ದ ಅರಿಶಿನ, ಶುಂಠಿ, ಕಾಳುಮೆಣಸು ಇತ್ಯಾದಿ ಗಿಡಗಳನ್ನು ತೋರಿಸಿದರು! ಪರ್ ಹೆಡ್ ರೂ.೨೦೦!
ಹಿತ್ತಲು ಸುತ್ತುವುದು "ಸ್ಪೈಸ್ ಟೂರ್" ಆದರೆ, ನಾನು ಈ ಹಳ್ಳಿಮನೆಯ ತೋಟ (ಇಲ್ಲಿ ಗುಡ್ಡ ಹತ್ತಿ ಇಳಿದಿದ್ದೇನೆ. ಹಳ್ಳ,ದಿಣ್ಣೆ ದಾಟಿದ್ದೇನೆ. ಬನವಿದೆ. ಪ್ರಾಣಿಪಕ್ಷಿಗಳಿವೆ...) ಸುತ್ತಿದ್ದು "ತೋಟ ಚಾರಣ" ಯಾಕಾಗಬಾರದು?
ಪ್ಯಾಂಟ್,ಶರ್ಟ್,ಶೂ ಹಾಕಿಕೊಂಡು, ಕೊಡೆ, ನೀರಿನ ಬಾಟಲ್ ಹಿಡಕೊಂಡು "ತೋಟ ಚಾರಣ"ಕ್ಕೆ ಹೊರಟೆ. ಹಳ್ಳಿಮನೆಯ ಯಜಮಾನರು ನನ್ನನ್ನು ಹಿಂದೆ ಕರೆಸಿ, ಎಲ್ಲಾ ತೆಗೆದಿಟ್ಟು, ಪಂಚೆ ಉಡಿಸಿ, ಮೇಲೊಂದು ಟವಲ್ ಹೊದಿಸಿ ಕಳುಹಿಸಿದರು.
೨೦-೩೦ ವರ್ಷಗಳಿಂದ ಶೂ/ಚಪ್ಪಲ್ ಇಲ್ಲದೇ ಹೊರಗೆ ಕಾಲಿಟ್ಟು ಅಭ್ಯಾಸವಿಲ್ಲ. ಬರಿಗಾಲಲ್ಲಿ ಕಷ್ಟಪಟ್ಟು ನಡೆಯುತ್ತಿದ್ದೆ. ಅಲ್ಲಿನ ಮಕ್ಕಳು, ಹೆಂಗಸರೆಲ್ಲಾ ಗದ್ದೆ ಬದುವಿನಲ್ಲಿ ನಡೆಯುವ ನನ್ನನ್ನು, ಕ್ಯಾಟ್ ವಾಕ್ ಲಲನೆಯರನ್ನು ನೋಡುವಂತೆ ನಗುತ್ತಾ ನೋಡುತ್ತಿದ್ದರು. ಅವರ ಕಡೆ ಗಮನಕೊಡದೇ, ನಿಮಿಷಕ್ಕೊಮ್ಮೆ ಬಿಚ್ಚಿಹೋಗುವ ಪಂಚೆಯನ್ನು ಎತ್ತಿಕಟ್ಟುತ್ತಾ, ಮುಳ್ಳುಗಿಡಗಳನ್ನು ತಪ್ಪಿಸುತ್ತಾ,ಗದ್ದೆಗೆ ಬೀಳದಂತೆ ಜಾಗ್ರತೆ ವಹಿಸಿ, ಕ್ಯಾಟ್ವಾಕ್ ಅಲ್ಲಲ್ಲ ವಾಕ್ ಮಾಡಿದೆ.
ಗದ್ದೆ ದಾಟುತ್ತಿದ್ದಂತೆ ಮೊದಲಿಗೆ ಕೆಂಪುಕೆಂಫು ಜಂಬುನೇರಳೆ ಹಣ್ಣುಗಳು ಕಣ್ಣಿಗೆ ಬಿದ್ದವು!
ಜತೆಗೆ ಬಂದಿದ್ದವರನ್ನು,"ಯಾಕೆ ಹಣ್ಣುಗಳನ್ನು ತಿನ್ನದೇ ಬಿಟ್ಟಿದ್ದೀರಿ?" ಎಂದಾಗ, "ಮನೆಯವರು ಇತ್ಲಾಗೆ ಬಂದಾಗ ತೆಗೆದು ತಿನ್ನುವರು. ಹೆಚ್ಚಿನವು ಮಂಗಗಳು ತಿನ್ನುವವು/ಹಾಳು ಮಾಡುವವು" ಎಂದರು. ದಿನವೂ ಮಂಗಗಳ ದಾಳಿಯಾಗುವುದಂತೆ. ಆದರೂ ಚಿತ್ರದಲ್ಲಿ ಕಾಣುವಷ್ಟು ಹಣ್ಣುಗಳು ಉಳಿದಿವೆ.(ಹೀಗೇ ಸಪೋಟ, ಪೇರಳೆ ಸಹ ಮನೆಯವರು+ಮಂಗಗಳು+ಹಕ್ಕಿಗಳು ತಿಂದೂ ಉಳಿದಿದ್ದವು.) ಹೊಂದಾಣಿಕೆಯೆಂದರೆ ಇದು.
ಪೇಟೆಯ ನಾವು ಬಂದೆವು ನೋಡಿ...
ಎಲ್ಲಾ ಹಣ್ಣು ತಿಂದು, ಒಂದು ಪೀಚುಕಾಯಿಯೂ ಉಳಿಯದಂತೆ ಚೀಲದಲ್ಲಿ ತುಂಬಿಸಿಕೊಂಡೆವು. :)
(ಚಾರಣದ ಕೊನೆಯ ಕಂತು ಮುಂದಿನ ಭಾಗದಲ್ಲಿ)
ತೋಟ ಚಾರಣ ೧ ನ್ನು( http://sampada.net/blog/%E0%B2%97%E0%B2%A3%E0%B3%87%E0%B2%B6/14/05/2010/25425 ) ಮೆಚ್ಚಿದ ಸಂತೋಷ ಹಾಗೂ ಗೋಪಿನಾಥರಿಗೆ ನನ್ನಿ.
ತೋಟಚಾರಣ ೩- http://sampada.net/blog/%E0%B2%97%E0%B2%A3%E0%B3%87%E0%B2%B6/24/05/2010/25573
-ಗಣೇಶ
Comments
ಉ: ಸ್ಪೈಸ್ ಟೂರ್ ಮತ್ತು ತೋಟ ಚಾರಣ ೨
In reply to ಉ: ಸ್ಪೈಸ್ ಟೂರ್ ಮತ್ತು ತೋಟ ಚಾರಣ ೨ by shaamala
ಉ: ಸ್ಪೈಸ್ ಟೂರ್ ಮತ್ತು ತೋಟ ಚಾರಣ ೨
ಉ: ಸ್ಪೈಸ್ ಟೂರ್ ಮತ್ತು ತೋಟ ಚಾರಣ ೨
In reply to ಉ: ಸ್ಪೈಸ್ ಟೂರ್ ಮತ್ತು ತೋಟ ಚಾರಣ ೨ by naasomeswara
ಉ: ಸ್ಪೈಸ್ ಟೂರ್ ಮತ್ತು ತೋಟ ಚಾರಣ ೨
ಉ: ಸ್ಪೈಸ್ ಟೂರ್ ಮತ್ತು ತೋಟ ಚಾರಣ ೨
ಉ: ಸ್ಪೈಸ್ ಟೂರ್ ಮತ್ತು ತೋಟ ಚಾರಣ ೨
ಉ: ಸ್ಪೈಸ್ ಟೂರ್ ಮತ್ತು ತೋಟ ಚಾರಣ ೨
In reply to ಉ: ಸ್ಪೈಸ್ ಟೂರ್ ಮತ್ತು ತೋಟ ಚಾರಣ ೨ by kpbolumbu
ಉ: ಸ್ಪೈಸ್ ಟೂರ್ ಮತ್ತು ತೋಟ ಚಾರಣ ೨
ಉ: ಸ್ಪೈಸ್ ಟೂರ್ ಮತ್ತು ತೋಟ ಚಾರಣ ೨
In reply to ಉ: ಸ್ಪೈಸ್ ಟೂರ್ ಮತ್ತು ತೋಟ ಚಾರಣ ೨ by gopaljsr
ಉ: ಸ್ಪೈಸ್ ಟೂರ್ ಮತ್ತು ತೋಟ ಚಾರಣ ೨
In reply to ಉ: ಸ್ಪೈಸ್ ಟೂರ್ ಮತ್ತು ತೋಟ ಚಾರಣ ೨ by ಗಣೇಶ
ಉ: ಸ್ಪೈಸ್ ಟೂರ್ ಮತ್ತು ತೋಟ ಚಾರಣ ೨
In reply to ಉ: ಸ್ಪೈಸ್ ಟೂರ್ ಮತ್ತು ತೋಟ ಚಾರಣ ೨ by Shreekar
ಉ: ಸ್ಪೈಸ್ ಟೂರ್ ಮತ್ತು ತೋಟ ಚಾರಣ ೨