ಭಯೋತ್ಪಾದಕರಿಗೆ ನೇಣು ಮತ್ತು ಸೋಗಲಾಡಿಗಳ ದ್ವಂದ್ವ

ಭಯೋತ್ಪಾದಕರಿಗೆ ನೇಣು ಮತ್ತು ಸೋಗಲಾಡಿಗಳ ದ್ವಂದ್ವ

ಅಫ್ಜಲ್ ನೇಣಿಗೇರಿಸಿದರೆ ದೆಹಲಿ ಮತ್ತು ಕೆಲವು ರಾಜ್ಯಗಳಲ್ಲಿ ಕೋಮು ಗಲಭೆಗಳಾಗಬಹುದು ಎಂಬ ಕ್ಷುಲ್ಲಕ ನೆಪದೊಂದಿಗೆ ಮತ್ತೆ ಈ ಕಡತವನ್ನು ಮತ್ತೊಮ್ಮೆ ನೆನೆಗುದಿಗೆ ಎಸೆಯಲಾಗಿದೆ.
ಭಯೋತ್ಪಾದಕರಿಗೆ ಧರ್ಮವಿಲ್ಲವೆಂದಮೇಲೆ ಕೋಮು ಗಲಭೆಗಳೇಕಾಗಬೇಕು?
ಭಯೋತ್ಪಾದಕರಿಗೆ ಧರ್ಮವಿಲ್ಲ ಎಂದು ಬೊಬ್ಬೆ ಹೊಡೆದವರೆ ಇಂದು ಈ ಭಯೋತ್ಪಾದಕನನ್ನು ನೇಣಿಗೇರಿಸುವುದರಿಂದ ಕೋಮು ಗಲಭೆಗಳಾಗುತ್ತವೆ ಎನ್ನುತ್ತಿದ್ದಾರಲ್ಲ ಇದು ದ್ವಂದ್ವವಲ್ಲವೆ?
ಭಯೋತ್ಪಾದಕನಿಗೆ ಧರ್ಮವಿಲ್ಲದಿದ್ದ ಮೇಲೆ ಯಾವುದೇ ಕೋಮಿಗೆ ಸೇರಿದವನಲ್ಲದ ಮೇಲೆ ಹೇಗೆ ಕೋಮು ಗಲಭೆಗಳಾಗುತ್ತವೆ?

ಭಯೋತ್ಪಾದಕರಿಗೆ ಧರ್ಮವಿಲ್ಲ ಎಂದು ಒಂದು ಕಡೆ ಹೇಳುವುದು ಪಕ್ಕದಲ್ಲೆ ನೇಣಿಗೇರಿಸುವುದರಿಂದ ಕೋಮು ಸಂಘರ್ಷಗಳಾಗುತ್ತವೆ ಎಂದು ನೇಣನ್ನು ಮುಂದೂಡಿಸುವುದು, ನಡೆದಿರುವುದು ಧರ್ಮಾದಾರಿತ ಭಯೋತ್ಪಾದನೆ ಎನ್ನುವುದು ಒಪ್ಪಿಕೊಂಡಂತೆ ಅಲ್ಲವೆ?  

Rating
No votes yet

Comments