ಅವಳ ನೆನೆದು...

ಅವಳ ನೆನೆದು...

ಪುಟ ತಿರುವಿದಂತೆಲ್ಲ ನಿನ್ ಹೆಸರ ಘಮಗಳಿವು

ಹೊರನುಸುಳಿ ಚಿತ್ತಾರ ಚಿತ್ರಿಸಿಹವು!

ಅಕ್ಷರಕೆ ಇಷ್ಟೊಂದು ಶಕುತಿಯಿರೆ ಗೆಳತಿ

ನಿನ್ನಕ್ಕರೆಗೆ ಇನ್ನೆಷ್ಟು ಇರಬೇಡ!

 

*******

 

ಬಾನ ಚುಕ್ಕಿಗಳ ಎಣಿಸ ಹೊರಟಿದ್ದರೆ

ಮುಗಿಸುತ್ತಿದ್ದೆನೇನೋ..

ಪೆದ್ದ ನಾನು

ನಿನ್ನ ಬಣ್ಣಿಸ ಹೊರಟೆ ನಾನು!

 

*******

 

ಕನ್ನಡಿಯು ತೋರಿಸೀತು ಬರಿಯ ನನ್ನ ಹೊರಗಿನ ನನ್ನನ್ನು

ನಿನ್ನ 'ಕಣ್ಣ'ಡಿಯು ತೋರಿಸಿತು ನನ್ನೊಳಗಿನ ನನ್ನನ್ನು

ಕೊಂಚ ನಿನ್ನೊಳಗಿನ ನನ್ನನ್ನು

ಮತ್ತೆ ನನ್ನೊಳಗಿನ ನಿನ್ನನ್ನು..

 

*****

ಎಲ್ಲಿಂದಲೋ ಬಂದು ನೀ 

ನನ್ನ ತಾಕಿದೆ ಹೀಗೆ..

ಎಲ್ಲಿಂದಲೋ ಬೀಸಿದ ಗಾಳಿ

ತಂಪು ನೀಡಿದ ಹಾಗೆ..

 

*****

 

 

 

Rating
No votes yet

Comments