ದಿಲ್ಲೀ ಸರಕಾರ ಏಕಿರಬೇಕು ಅಧಿಕಾರದಲ್ಲಿ?
ಅಫ್ಜಲ್ ಗುರುವಿಗೆ ನೀಡಿದರೆ ಗಲ್ಲುಶಿಕ್ಷೆ ಕೋಮು ಗಲಭೆ ಆಗಬಹುದಂತೆ ದಿಲ್ಲಿಯಲ್ಲಿ
ಶೀಲಾ ದೀಕ್ಷಿತ್ ಹೇಳ್ತಾರೆ ಆತನನ್ನು ನೇಣಿಗೇರಿಸದೇ ಜೀವಂತ ಇರಿಸೋಣ ಜೈಲಿನಲ್ಲಿ
ಕಾನೂನು ಮತ್ತು ಶಿಸ್ತುಪಾಲನೆ ಮಾಡಲಾಗದ ಸರಕಾರ ಏಕಿರಬೇಕು ಅಧಿಕಾರದಲ್ಲಿ
ರಾಜ್ಯ ಸರ್ಕಾರಕ್ಕೆ ಅಸಾಧ್ಯವೆಂದಾದರೆ ಕೇಂದ್ರ ಸರಕಾರ ನೀಡಲಿ ರಕ್ಷಣೆ ದಿಲ್ಲಿಯಲ್ಲಿ
ಗಲಭೆ ಆಗಬಹುದೆಂಬ ಅನುಮಾನ ಇದ್ದರೂ ರಕ್ಷಣೆಕೊಡಲಾಗದೆಂಬುದು ಹುಂಬತನ
ಮುನ್ಸೂಚನೆ ಇಲ್ಲದೇ ಗಲಭೆಯಾದಾಗ ಯಾರಿಗೆ ಮೊರೆಹೋಗಬೇಕು ದೇಶದ ಜನ
ಒಂದು ಕೋಮನ್ನು ಓಲೈಸಲು ಭಂಡ ರಾಜಕಾರಣಿಗಳಲ್ಲಿವೆ ನೂರೆಂಟು ಸಬೂಬುಗಳು
ಇಂತಹವರನ್ನು ಕಾಪಾಡಲು ಜೀವತೆತ್ತಿದ್ದರಂದು ಆ ಅಮಾಯಕ ಪೋಲೀಸ ಪೇದೆಗಳು
ಜಾತಿ, ಕೋಮು, ಕುಟುಂಬದ ಓಲೈಕೆ, ಇವು ಈ ಪ್ರಜಾಪ್ರಭುತ್ವಕ್ಕೆ ಬಡಿದಿರುವ ಶಾಪ
ಪರಿಹಾರವೇ ಕಾಣುತ್ತಿಲ್ಲ ಜನ ತಮ್ಮ ಮನದೊಳಗೆ ಎಷ್ಟೇ ತುಂಬಿಕೊಂಡಿದ್ದರೂ ಕೋಪ
ಪುರೋಹಿತಶಾಹಿಗಳು ನಮ್ಮ ಸಮಾಜವನು ಕೆಡಿಸಿಯಾಗಿತ್ತು ಹಿಂದಿನಿಂದಲೂ ಸಾಕಷ್ಟು
ಭ್ರಷ್ಟ ರಾಜಕಾರಣ ಈಗ ಸತ್ಯನಾಶ ಮಾಡುತ್ತಿದೆ ಇನ್ನೆಂದೂ ದುರಸ್ತಿ ಮಾಡಲಾಗದಷ್ಟು!
***** ***** *****
ಆತ್ರಾಡಿ ಸುರೇಶ ಹೆಗ್ಡೆ
Comments
ಉ: ದಿಲ್ಲೀ ಸರಕಾರ ಏಕಿರಬೇಕು ಅಧಿಕಾರದಲ್ಲಿ?
In reply to ಉ: ದಿಲ್ಲೀ ಸರಕಾರ ಏಕಿರಬೇಕು ಅಧಿಕಾರದಲ್ಲಿ? by ksraghavendranavada
ಉ: ದಿಲ್ಲೀ ಸರಕಾರ ಏಕಿರಬೇಕು ಅಧಿಕಾರದಲ್ಲಿ?
In reply to ಉ: ದಿಲ್ಲೀ ಸರಕಾರ ಏಕಿರಬೇಕು ಅಧಿಕಾರದಲ್ಲಿ? by ksraghavendranavada
ಉ: ದಿಲ್ಲೀ ಸರಕಾರ ಏಕಿರಬೇಕು ಅಧಿಕಾರದಲ್ಲಿ?
ಉ: ದಿಲ್ಲೀ ಸರಕಾರ ಏಕಿರಬೇಕು ಅಧಿಕಾರದಲ್ಲಿ?