ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು?

ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು?

Comments

ಬರಹ

ಅರಸೀಕೆರೆಯ ಅರವಿಂದ PUC- PCM ಪಾಸು ಮಾಡಿ ಮೂರು ವರ್ಷದಿಂದ ಬೆಂಗಳೂರಿನಲ್ಲಿ ರೂ 3500 ಸಂಬಳದ ಕೆಲಸದಲ್ಲಿದ್ದಾನೆ.

ಇಪ್ಪತ್ತೊಂದು ವಯಸ್ಸು.

SSLC ಯ ತನಕ ಕನ್ನಡಮಾಧ್ಯಮ. ಇಂಗ್ಲೀಷ್ ಕಷ್ಟ ಪಟ್ಟು ಒಂದೊಂದೇ ಅಕ್ಷರ ಜೋಡಿಸಿ TALK = ಟಾಲ್ ಕ್ ಎಂದು ಓದುತ್ತಾನೆ.

PUC MATHS ಪಾಸಾದರೂ ತ್ರಿಜ್ಯ, ವ್ಯಾಸ ಕೂಡಾ ಗೊತ್ತಿಲ್ಲ.

ಹೋಗಲಿ ಕನ್ನಡವಾದರೂ ಚೆನ್ನಾಗಿ ಬರಬಹುದೇನೋ ಅಂದುಕೊಂಡರೆ, ( ಕನ್ನಡ ಬಿಟ್ಟರೆ ಬೇರೆ ಯಾವ ಭಾಷೆಯೂ ಬಾರದು) ಬರೆಯುವಾಗ ಹಾಸನಕ್ಕೆ ಆಸನವೆಂದೂ, ಆದರಕ್ಕೆ ಹಾದರವೆಂದೂ ಬರೆಯುತ್ತಾನೆ.

25ರ ತಿಪಟೂರಿನ ತಿಪ್ಪೇಸ್ವಾಮಿ ಮೈಸೂರಿನಲ್ಲಿ BA final ತನಕ ಓದಿ Englishನಲ್ಲಿ fail ಆಗಿ ಓದು ಬಿಟ್ಟು ಬಿಟ್ಟಿದ್ದಾನೆ. ಇವನ ಕನ್ನಡ ಬರಹ ಕೂಡಾ ಮೊದಲಿನವನ ಹಾಗೆಯೇ - ಆಸನ-ಹಾದರ.. ಇಂಗ್ಲೀಷಂತೂ ದೊಡ್ಡಸೊನ್ನೆ.

ಬೆಂಗಳೂರಿನ ಸರಕಾರೀಶಾಲೆಯಲ್ಲಿನ ಏಳನೇ ತರಗತಿಯ ಹುಡುಗನಿಗೆ ಯಾವ ಮಗ್ಗಿಯೂ ಬಾರದು, ಕನ್ನಡವನ್ನು ತಡವರಿಸದೆ ಓದಲೂ ಬಾರದು.

ಶಿಕ್ಷಣತಜ್ನರೇ ಹೇಳಿ ಯಾಕೆ ಹೀಗೆ? ಮಾತೃಭಾಷೆಯಲ್ಲಿ ಕಲಿತರೆ ವಿಷಯಗಳು ಸುಲಭವಾಗಿ ಅರ್ಥವಾಗಿ ಮನಸ್ಸಿನಲ್ಲಿ ಉಳಿಯಬೇಕಲ್ಲವೇ?

ನಾನೂ ಕನ್ನಡಮಾಧ್ಯಮದಲ್ಲೇ SSLC ಯ ತನಕ ಓದಿದವನು. ಹಾಗೆಂದುಕೊಂಡು ಹೋದವರುಷ ಈಗಿನ SSLC ಯ ಗಣಿತಪುಸ್ತಕ ತೆಗೆದುನೋಡಿದರೆ ಒಂದೇ ಒಂದು ವಾಕ್ಯ ಕೂಡಾ ಅರ್ಥವಾಗಲಿಲ್ಲ. Recreational Maths ನನ್ನ ಅಭಿರುಚಿಯ ವಿಷಯ.

ಸರಿ, ಇಂಗ್ಲೀಷ್ ಮಾಧ್ಯಮದಲ್ಲಿ ಪರಿಸ್ತಿಥಿ ಹೇಗಿದೆ ಎಂಬ ಕುತೂಹಲವಾಯಿತು.

English ಭಾಷೆಯಲ್ಲಿ ಲಭ್ಯವಿರುವ ಪುಸ್ತಕಸಂಪತ್ತು ನೋಡಿ ದಂಗಾದೆ.

Oxford University Press, Cambridge University Press, Orient Longman ಮುಂತಾದ ಪ್ರಮುಖ ಸಂಸ್ಥೆಗಳು ಎಷ್ಟು ಮುದ್ದಾಗಿ, colorful ಆಗಿ, ಯಾರೇ ಆಗಲಿ ನೋಡಿದರೆ ಪ್ರತೀ ಪುಟವನ್ನೂ ವಿವರವಾಗಿ ಓದುವ ಮನಸ್ಸಾಗುವಂತೆ, ಯಾರಿಗೇ ಆಗಲಿ ಸುಲಭವಾಗಿ ಮನದಟ್ಟಾಗುವಂತೆ ಬರೆದಿದ್ದಾರೆ.

ಕರುನಾಡ ಸರಕಾರವು ಪ್ರತಿವರ್ಷ ಎಷ್ಟೋ ಕೋಟಿಗಳನ್ನು ಪ್ರಾಥಮಿಕ ಕನ್ನಡಮಾಧ್ಯಮದ ಶಿಕ್ಷಣಕ್ಕಾಗಿ, ಕನ್ನಡ ಅಭಿವೃದ್ಧಿಗಾಗಿ ಖರ್ಚಿಸುತ್ತದೆ.

ಏನು ಸಾಧಿಸಿದಂತಾಯಿತು?

ಸರಕಾರೀ ಶಾಲೆಗಳಲ್ಲಿ ಪಠ್ಯಪುಸ್ತಕಗಳಲ್ಲಿ ಶಿಕ್ಷಣಮಟ್ಟ ಏಕೆ ಇಷ್ಟೊಂದು ಕುಸಿದಿದೆ?

ಕಾರಣಗಳೇನು?
ಪ್ರಾಥಮಿಕ ಶಿಕ್ಷಣದ ಬುನಾದಿಯೇ ಇಷ್ಟು ಶಿಥಿಲವಾಗಿರುವಾಗ ಅದನ್ನು ಮೊಟ್ಟಮೊದಲು ಸರಿಪಡಿಸುವುದು ಬಿಟ್ಟು ಉಚ್ಚ ಶಿಕ್ಷಣದ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳನ್ನು ಇನ್ನಷ್ಟು ತೆರೆಯುವ ತರಾತುರಿ ಏಕೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet