ಮನುಜ ಮತ್ತು ಧರ್ಮ

ಮನುಜ ಮತ್ತು ಧರ್ಮ


ಮುಸ್ಲಿಮರು ತಮ್ಮ ಬಗ್ಗೆ ಬರುವ ಟೀಕೆಗಳನ್ನು (ಹಗೆಪೂರಿತ ಅಲ್ಲ, ಕ್ರಿಯಾತ್ಮಕ) ಹಗುರವಾಗಿ ತೆಗೆದುಕೊಂಡು ಮುನ್ನಡೆಯಲು ಕಲಿಯಬೇಕು ಎಂದು ಹಲವರ ವಾದ ಮತ್ತು ನಿರೀಕ್ಷೆ ಕೂಡಾ. ಒಬ್ಬ ಪಾಶ್ಚಾತ್ಯ ರಾಜಕೀಯ ವಿಶ್ಲೇಷಣೆಕಾರ ಹೇಳಿದ್ದು, "muslims should learn to laugh at themselves". ಒಬ್ಬ ನಿಷ್ಠ ಮುಸ್ಲಿಮನಾಗಿ ನನಗೆ ಈ ಕಾರ್ಟೂನ್ ನಲ್ಲಿ ಯಾವುದೇ ಉತ್ಪ್ರೇಕ್ಷೆ ಕಾಣುತ್ತಿಲ್ಲ, ಮತ್ತು ಈ ವ್ಯಂಗ್ಯ ಚಿತ್ರವನ್ನು ನೋಡಿ ಮನಸಾರೆ ನಕ್ಕಿದ್ದೇನೆ ಕೂಡಾ.


 ಧರ್ಮದ ನೈಜ ಆದರ್ಶಗಳನ್ನು ಕಡೆಗಣಿಸಿ ವೈಯಕ್ತಿಕ, ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಾಗ ಆಗುವ ಅನಾಹುತ ಈ ವ್ಯಂಗ್ಯಚಿತ್ರದ ಸಾರ.


 ಈ ವ್ಯಂಗ್ಯಚಿತ್ರದಲ್ಲಿನ ವ್ಯಕ್ತಿಯ ಅವಸ್ಥೆ ನೋಡಿ; ಬೆಂಕಿಯಿಂದ ಬಾಣೆಲೆಗೆ ಬೀಳುವವನ ಪೇಚು ಇವನದು. ಸುಡುವ ಹಾಲನ್ನು ಕುಡಿಯ ಹೋಗಿ ಬಾಯ್ ಸುಟ್ಟುಕೊಂಡ ಮರ್ಕಟ...


ವಿ.ಸೂ : ಈ ವ್ಯಂಗ್ಯ ಚಿತ್ರ ಎಲ್ಲಾ ಧರ್ಮೀಯರಿಗೂ ಅನ್ವಯಿಸುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ?


ಚಿತ್ರ ಕೃಪೆ:  http://articles.sfgate.com/2009-11-27/comics/17117028_1_synopsis

Rating
No votes yet

Comments