ಜತೆಯಲಿ.. ಜತೆಜತೆಯಲಿ 2

ಜತೆಯಲಿ.. ಜತೆಜತೆಯಲಿ 2

ನಮ್ಮ ಕಟ್ಟಡ ಪ್ರಾಯಶಃ ಭೂಕಂಪದ ಕಂಪನದ ಮಿತಿಯನ್ನು ಸಹಿಸುವ ಗುಣಹೊಂದಿದಂತೆ ಪ್ರತಿ ಮನೆಯೂ ಮೂರು ಮೂರು ಕಾಂಕ್ರೀಟಿನ ಚೌಕಟ್ಟು ಹೊಂದಿದ್ದವು. ನಮ್ಮ ಈ ಮಲಗುವ ಕೋಣೆಯೂ ಅಡಿಪಾಯದಿಂದ ಟೆರೇಸಿನವರೆಗೆ ಅಭಿನ್ನವಾಗಿ ಎರೆದ ಕಾಂಕ್ರೀಟಿನದ್ದಾದ ಲಿಫ್ಟ್ ನ ಪಕ್ಕದ್ದೇ.


ಕಬ್ಬಿಣ ಸಿಮೆಂಟ್ ಬಳಸಿ ಕಟ್ಟಲ್ಪಟ್ಟ ಆ ಬಹು ಮಹಡಿ ಕಟ್ಟಡಗಳು ಯಾವುದೊ ಕ್ರೋಧೀ ಕೆಟ್ಟ ಹುಡುಗ ಕುಟ್ಟಿ ಪುಡಿ ಮಾಡಿದ ಮಕ್ಕಳ ಆಟಿಕೆಗಳಂತೆ
ಉದುರುತ್ತವೆ, ಪ್ರಭಾವೀ ಗೌರವದ ಯಾವ ಹೆಸರುಗಳೂ ಅವುಗಳ ಭವಿಷ್ಯವನ್ನು ಅಂಧಕಾರದಿಂದ ಹೊರಗೆಳೆಯಲು ಅಸಮರ್ಥವಾಗಿರುವವು.  ಭೂಕಂಪದ ಮುನ್ಸೂಚನೆಯನ್ನು ನಿಖರವಾಗಿ ಇನ್ನೂ ಯಾವ ರೀತಿಯಿಂದಲೂ ಅಳೆಯಲಾರೆವೋ, ಅಂತೆಯೇ ಅದನ್ನು ಸಹಿಸುವ  ಕಟ್ಟಡವನ್ನೂ ಕಟ್ಟಲಾರೆವು. ಏನಿದ್ದರೂ ಅವೆಲ್ಲ ನಮ್ಮ ನಮ್ಮ ಸಮಾಧಾನಕ್ಕೆ, ಸಾಂತ್ವನಕ್ಕೆ ಅಷ್ಟೇ.

ನಮ್ಮ ಕಟ್ಟಡದ ಇದಿರಿನಲ್ಲಿದ್ದ ಕಟ್ಟೋಣವು ಕುಸಿದು ನೆಲಕಚ್ಚಿತು.

 

ಗೋಡೆಯಲ್ಲಿನ ಅಲಂಕಾರಿಕ ಚೌಕಟ್ಟುಗಳೆಲ್ಲ ನೆಲಕಪ್ಪಳಿಸಿದವು.

 

ಎಲ್ಲೋ ನನಗಾಗಿಯೇ ಎಂಬಂತೆ ಹುಟ್ಟಿ ಬೆಳೆದು ನನ್ನ ಜತೆ ಸಪ್ತ ಪದಿ ತುಳಿದು, ಸುಖದಲ್ಲಿ ಧುಖದಲ್ಲಿ ಒಡನಾಡಿಯಾದ ಗೆಳತಿಯನ್ನು ಹೀಗೇ ಬಿಟ್ಟು ಹೋಗುವುದೇ..?.
ಆ  ಕ್ಷಣದ ನನ್ನ ನಿರ್ಧಾರ ಬಲಿತು ಸತ್ತರೆ ಎಲ್ಲರು ಓಟ್ಟಿಗೇ ಸಾಯಲೆಂಬ ನಿರ್ಧಾರಕ್ಕೆ ಬಂದೆ.

 

ಯಾವುದಕ್ಕೂ ಇರಲಿ ಎಂದು ಇಬ್ಬರು ಮಕ್ಕಳನ್ನು ಪಕ್ಕದಲ್ಲಿಯೇ ಇದ್ದ ಬೀಟೆ ಮರದ ಮೇಜಿನಡಿಯಲ್ಲಿ ಕುಳ್ಳಿರಿಸಿದೆ.




*******************************                                                                       ******************************                                              **********************



"ಅನೂ ಹೇಳು ನಿನಗೇನನ್ನಿಸಿತ್ತು? ನಾನಂತೂ ಮಮ್ಮಿಯ ಅಸಹಾಯಕಥೆ ನೆನೆಸಿ ಅಲ್ಲಿಯೇ ಉಳಿಯಲು ಮನಸ್ಸು ಮಾಡಿದೆ
ನಾವಿಬ್ಬರೂ ನಿಮಗೆ ಹೋಗಲು ಹೇಳದೆ ಅಲ್ಲಿಯೇ, ಸತ್ತರೆ ನಾವೆಲ್ಲರೂ ಒಟ್ಟಿಗೇ  ಸಾಯಲಿ ಎಂತ ಅಲ್ಲಿಯೇ ಕುಳಿತದ್ದು ಸರಿಯಾ?"


ಕೇಳಿದೆ ನನ್ನ ಬೆಳೆದು ನಿಂತ ಇಂಜಿನೀಯರ್ ಮಗನನ್ನ. ಮೇಲಿನ ಘಟನೆ ನಡೆದು ಏಳೆಂಟು ವರುಷದ ಬಳಿಕ.


"ಇಲ್ಲ ಪಪ್ಪಾ..ನನಗೆ ಭೂಕಂಪದ ಪರಿಣಾಮದ ಅರಿವಿರಲಿಲ್ಲ ಆಗ" ಎಂದನಾತ.


ಈಗಲೂ ಈ ಯೋಚನೆ ನನ್ನನ್ನೇ ಒಮ್ಮೊಮ್ಮೆ ಹಿಂಡುತ್ತಲೇ ಇರುತ್ತದೆ, ನಾನು ಮಾಡಿದ್ದು ಸರಿಯಾ?

 


ನೀವು ಹೇಳಿ  ನೋಡೋಣ..?

 

 

 

 

( ಜತೆಯಲಿ.. ಜತೆಜತೆಯಲಿ 1    http://sampada.net/blog/gopinatha/21/05/2010/25537 )

Rating
No votes yet

Comments