ಇದು 'ರೈ' ಟ್ 'ಕನಸು'

ಇದು 'ರೈ' ಟ್ 'ಕನಸು'

ಡೆನ್ನಾನ  ಡೆನ್ನಾನ
ತುಳುನಾಡ ಸೀಮೆಡು
ರಮರೊಟ್ಟು ಗ್ರಾಮೋಡು
ಗುಡ್ಡಾದ ಭೂತ ಉಂಡುಗೆ...

ಅನ್ನೋ ಹಾಡಿನೊಂದಿಗೆ ದೂರದರ್ಶನದಲ್ಲಿ 'ಗುಡ್ಡದ ಭೂತ' ಅನ್ನೋ ಧಾರವಾಹಿ ಬರ್ತಿತ್ತು . ಆ ಧಾರವಾಹಿ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡು,ಅಲ್ಲಿಂದ ಕನ್ನಡ ಹಿರಿತೆರೆ ಮೇಲೆ ಕಾಣಿಸಿ,ಇಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತಹ ಪಾತ್ರಗಳನ್ನ ನೀಡದೆ ಇದ್ದಾಗ,'ನಾನ್ ತಮಿಳ್ನಾಡ್ ಕಡೆ ಹೊರಟೆ' ಅಂತೇಳಿ ಹೋಗಿ ತಮ್ಮ ದೈತ್ಯ ಪ್ರತಿಭೆಯಿಂದಲೇ ತಮಿಳು,ತೆಲುಗು,ಮಲಯಾಳಂ,ಹಿಂದಿ ಚಿತ್ರಗಳಲ್ಲಿ ಅಭಿನಯಿಸಿ ಮನೆಮಾತಾಗಿ,ದಕ್ಷಿಣ ಭಾರತದ ಚಿತ್ರ ರಂಗದಲ್ಲೇ ಬೇಡಿಕೆಯ ನಟನಾಗಿ ಬೆಳೆದು ನಿಂತವರು ನಮ್ಮ 'ಪ್ರಕಾಶ್ ರೈ'!

ನಟ ಪ್ರಕಾಶ್ ರೈ, ನಿರ್ದೇಶಕ ಪ್ರಕಾಶ್ ರೈ ಆಗಿ ಕನ್ನಡ ಚಿತ್ರ ಮಾಡ್ತಾ ಇದ್ದೀನಿ ಅಂದಾಗ ಸಹಜವಾಗೇ ನಿರೀಕ್ಷೆಯಿತ್ತು.ಒಂದೇ ಮಾತಿನಲ್ಲಿ ಹೇಳುವುದಾದರೆ 'ರೈ' ನಿರೀಕ್ಷೆಯನ್ನ ಹುಸಿಗೊಳಿಸಿಲ್ಲ!

ಚಿತ್ರದ ಹೆಸರು ನೋಡಿ ಡಾಕ್ಯುಮೆಂಟರಿ ತರ ಇರಬಹುದು ಅಂದುಕೊಂಡು,ಗೆಳೆಯನಿಗೆ ಹೇಳ್ದೆ 'ಲೇ,ಸೆಕೆಂಡ್ ಶೋ ಬೇಡ್ವೋ ನಿದ್ರೆ ಬಂದ್ರು ಬರಬಹುದು' ಅಂತ,ಆದ್ರೆ ಮನೆ ಮಂದಿಯೊಂದಿಗೆ ಕುಳಿತು ನೋಡ ಬಹುದಾದ ಒಂದೊಳ್ಳೆ ಸಿನಿಮಾವನ್ನ ಮಾಡಿ ಕೊಟ್ಟಿದ್ದಾರೆ ರೈ. ಅಪ್ಪ-ಮಗಳ ಅವಿನಾಭಾವ ಸಂಬಂಧದ ಸುತ್ತ ತಿರುಗುವ ಚಿತ್ರ,ಯಾವ ಹಂತದಲ್ಲೂ ಬೋರ್ ಅನ್ನಿಸುವುದಿಲ್ಲ,ಮಧ್ಯೆ ಮಧ್ಯೆ ಬಹಳ ನಗಿಸುತ್ತಾರೆ.ಹಂಸಲೇಖ ಬಹಳ ದಿನಗಳ ನಂತರ ಒಳ್ಳೆ ಸಾಹಿತ್ಯ-ಸಂಗೀತ ನೀಡಿದ್ದಾರೆ, ಮಾಮೂಲಿನಂತೆ ಬಾಲಿವುಡ್ ಗಾಯಕರ ದಂಡೆ ಬಂದು ಹಾಡಿ ಹೋಗಿದೆ :(

ಬಹಳ ದಿನದ ನಂತರ ಕಾಣಿಸಿಕೊಂಡ ಸಿತಾರ ಗಮನ ಸೆಳೆಯುತ್ತಾರೆ, ಅಚ್ಯುತ ,ಪ್ರಕಾಶ ರೈ,ಅಮೂಲ್ಯ,ರಮೇಶ್ ಅರವಿಂದ್ ಎಲ್ಲರ ಅಭಿನಯವು ಮಸ್ತ್ ! ಒಟ್ಟಿನಲ್ಲಿ ಒಂದೊಳ್ಳೆ ಕನ್ನಡ ಸಿನೆಮ ನೋಡಿದ ಖುಷಿ ಅಂತು ಆಯ್ತು.

Rating
No votes yet

Comments