ಚಾಗದ ಭೋಗದ....

ಚಾಗದ ಭೋಗದ....

ಇವತ್ತು ಯಾಕೊ school ನಲ್ಲಿ ಕಲಿತ (ಬಾಯಿಪಾಠ ಮಾಡಿದ?) ಪಂಪನ ಈ ಪದ್ಯ ತುಂಬ ನೆನಪಿಗೆ ಬರ್ತಾ ಇತ್ತು.
ಇದು ಮರೆತು ಹೊಗೊ ಅಷ್ಟರಲ್ಲಿ ಬರೆಯೋಣ ಅನ್ನುಸ್ತು ಅದಕ್ಕೆ ಈ ಪ್ರಯತ್ನ.

ಇದು ನನಗೆ ನೆನಪಿರುವ ಹಾಗೆ ಬರೆದದ್ದು. ಆದ್ದರಿಂದ ಮೂಲ ಪದ್ಯಕ್ಕೂ ಇದಕ್ಕೂ ತುಂಬ ವ್ಯತ್ಯಾಸಗಳಿರುತ್ತವೆ. ತಿಳಿದವರು ಸರಿಪಡಿಸ ಬೇಕಾಗಿ ವಿನಂತಿ.

(ok enough of disclaimers :))

(ಪಂಪನ ಕ್ಷಮೆ ಕೋರುತ್ತಾ.......)

ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಿಂಪಿನಿಂಪುಗಳ್ಗಾಗರಮಾದ ಮಾನಸರೆ ಮಾನಸರಂತವರಾಗಿ
ಪುಟ್ಟಲೇನಾಗಿಯೋಮೇನೋ ತೀರ್ದಪುದೇ ತೀರ್ದಪುದಮ್ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ
ಪುಟ್ಟುವುದು ನಂದನದೋಳ್ ಬನವಾಸಿ ದೇಶದೋಳ್

ತೆಂಕಣ ಗಾಳಿ ಸೋಂಕಿದೊಡಂ ಒಳ್ನುಡಿ ಕೇಳ್ದೊಡಮ್
ಇಂಪಾದ ಗೇಯಂ ಕಿವಿಗೊಟ್ಟಡಮ್ ಬಿರಿದ ಮಲ್ಲಿಗೆ ಕಂಡೊಡಮ್
ಆಗ ಕೆಂದಾಲಂಪಮ್ ಎಡೆಗೊಂಡಡಂ ಮಧುಮಹೋತ್ಸವಮಾದೊಡಮ್
ಏನನೆಂಬನಾರಂಕುಶವಿಟ್ಟೊಡಂ ನೆನೆವುದೆನ್ನ ಮನಮ್ ಬನವಾಸಿ ದೇಶಮಂ

Rating
Average: 3.2 (13 votes)

Comments