ನೀ ಕಲಿಸಿದ ಪಾಠ

ನೀ ಕಲಿಸಿದ ಪಾಠ

 

 

ಹೌದಲ್ಲಪ್ಪಾ ಕಾಲ ಮಿಂಚಿದೆ

ನೀನೇ ತಾನೇ ಕಲಿಸಿದೋನು

ನಿಮ್ಮ ಸುಖಕ್ಕೆ ಅಡ್ಡಿ ಕೂಳಿಗೆ ದಂಡ

ಅಂತ ನಿನ್ನಪ್ಪ ಅಮ್ಮನ್ನ ಹೊರಹಾಕಿದೆ

ನನ್ನನ್ನ ಒಂಟಿ ಒಂಟಿಯಾಗಿ ಬೆಳೆಸಿದೆ

ಆಗ ನಿನಗೆ ನೆನಪಿಗೆ ಬರಲಿಲ್ಲವಲ್ಲ

ನೀ ಕಲಿಸಿದ ಪಾಠ ಇದೇ ತಾನೆ

 

ಪ್ರಕೃತಿಯಲ್ಲೇ ನೀನು ಕಲಿತ ಪಾಠ

ಹಿರಿಯರ ಪ್ರೀತಿ,ಕಿರಿಯರಸ್ನೇಹ,

ಹೊಂದಿ ಬಾಳುವ,ಹಂಚಿ ತಿನ್ನುವ ಗುಣ

ನೀನೆಷ್ಟು ನಿನ್ನ ಮಕ್ಕಳಿಗೆ ಕೊಟ್ಟೆ?

ಕಲಿಸಲು ನಿನಗೆ ಸಮಯವೆಲ್ಲಿತ್ತು?

ಹಣ ಗಳಿಸುವ ಹುನ್ನಾರದಲ್ಲಿ

ನಮ್ಮವರ ಮರೆತೆ ನೀನು,

ಬಿರುಕುಗೊಂಡಿತು ಬಾಂಧವ್ಯ,

 

ಪ್ರೀತಿಯ ಸೆಲೆಇಲ್ಲದೆ ನಮ್ಮದೇ ಆದ

ಕೋಟೆಯಲಿ ಹಠ,ಸ್ವಾರ್ಥ,

ಅಸೂಯೆಗಳ ಬಿತ್ತಿ ತಾಳ್ಮೆ

ಏಕಾಗ್ರತೆಗಳ ಮರೆತಂತೆ ಬೆಳೆಸಿ

ನನ್ನ ಬೋನ್ಸಾಯ್ ಮಾಡಿದೆ

ರೀತಿ ನೀತಿ ತಿಳಿಸದೇ,

ಸಂಸ್ಕೃತಿಯ ಘನತೆಯಿಲ್ಲದೇ ಇರುವ ನನ್ನಲ್ಲಿ

ಅದೆಲ್ಲಿಂದ ಬಂದೀತು ನೈತಿಕತೆಯ,

ಬೌದ್ದಿಕ,ಸನಡತೆಯು?

ಹಾಕಬೇಕಿತ್ತು ಸಂಬಂಧಗಳಿಗೆ ಪ್ರೀತಿಯ ಬೆಸುಗೆ,

ಕಲಿಸಬೇಕಿತ್ತು ಒಳ್ಳೆಯ ಗುಣಸ್ವಭಾವ,

ಶಿಸ್ತು, ಸಂಯಮ,

ನಮ್ಮನೆಲಜಲದ ಸಂಸ್ಕೃತಿ ಕಂಪ್ಯೂಟರ್,

ಮೊಬೈಲ್ ಸಂಸ್ಕೃತಿಯಲ್ಲಿ ಹಳೆಯ

ಉಚ್ಛಮಟ್ಟದ ಸಂಸ್ಕೃತಿಗಳು ಡಿಲೀಟಾದವು

ಮನದ ಹಾರ್ಡ್ ಡಿಸ್ಕ್ ನಲ್ಲಿ ಮೂಲ ಬೇರುಗಳು

ಬರೇ ಯಾಂತ್ರೀಕೃತವಾದುವು

 

ಆದರೂ ತಳಿಯ ಸರಪಳಿ ಇದೆಯಲ್ಲಾ

ದು ಹ್ಯಾಗೋ ಉಳಿದುಕೊಂಡಿದೆ

ಮನದ ಹಾರ್ಡ್ ಡಿಸ್ಕ್ ನ ಬ್ಯಾಕ್ ಅಪ್

ಫೈಲಿನಲ್ಲಿ ಇನ್ನೂ ಭದ್ರ ಬಿಡು,

ಬರುತ್ತಿದ್ದೇನೆ ನಿನ್ನ ಬಳಿ ಮತ್ತೆ ನಮ್ಮ

ನೆಲಜಲದ ಸಂಸ್ಕೃತಿಯಂತೆ,ಬಾಳಲು,

ನಿಮ್ಮೆಲ್ಲರೊಡನೆ ಬದುಕಲು

Rating
No votes yet

Comments