ಮಗಳು
ಅವ್ವನ ಸೆರಗಲಿ ಬೆಳೆದ ಹುಡುಗಿ
ಸೆರಗಿನ೦ಚಿನ ಚಿತ್ರವಾದಳು.
ಮಾರು ಆಳ ಬೇರಿನ ಮರದ೦ತೆ ವ್ಯಕ್ತಿತ್ವ,
ರೂಪುಗೊಳ್ಳುವ ಬಗೆ-ಬಿರಿವ ಮೊಗ್ಗು.
ಅವ್ವನ ಸೆರಗಿನ ಸೀಮೆಯೊಳಗೆ
ಕರಳುಬಳ್ಳಿಯ ಕುಡಿ.
ಹರಿವ ನೋಟಕೆ ಬ೦ಧವಿಲ್ಲ,
ಸೆರಗ ಸೋಸಿ ಸಾಗಬೇಕು.
ದಶದಿಕ್ಕುಗಳಿಗೂ ಚೌಕಟ್ಟಿದೆ-ಅವ್ವನ ಸೆರಗಿನಲಿ.
ಸೆರಗಿನೊ೦ದೊ೦ದು ಎಳೆಯ ನೂಲು
ಇವಳನರಿತು ಸಲಹುತಿವೆ,
ಅವ್ವ-ವಾತ್ಸಲ್ಯದ ಗಣಿ.
ನೋವುಗಳಿಗೆ ಒಲವ ಮದ್ದು ಇಲ್ಲಿ,
ಸೋಲುಗಳಿಗೆ ಸಾ೦ತ್ವನ.
ದಣಿದಾಗ ಎದೆಯ ಬಿಸಿಯಪ್ಪುಗೆ,
ಗೆಲುವುಗಳಿಗೆ ಚೇತನ,
ಸಗ್ಗ ಸೀಮೆ ಸುಗ್ಗಿ ಕ೦ಡ ಹುಡುಗಿ -
ಅವ್ವನಿಗೆ ಋಣಿ.
ಬೇರು ಆಳ ಆಳ ನೂಕಿ,
ನೆರಳ ವಿಶಾಲವಾಗಿ ಹರಡಿ,
ತಾನೂ ಅವ್ವನಾಗಬೇಕು,
ಮಾತೃ ಸುಖವ ಪಡೆಯಬೇಕು.
ಏಸೋ ಕನಸುಗಳಿದ್ದವು ಅವ್ವನ ಅಪ್ಪುಗೆಯಲಿ,
ಏಸೋ ಬ೦ಧಗಳಿದ್ದವು ಅವಳ ಸೆರಗಿನಲಿ,
ಸರ್ವವನ್ನು ಮೀರಿ ನಿಲ್ಲುವ ಮಗಳು,
ಆದಳು ಆದರ್ಶ ನಾರಿ.
-ಪ್ರಸನ್ನ
Rating
Comments
ಉ: ಮಗಳು
In reply to ಉ: ಮಗಳು by gopinatha
ಉ: ಮಗಳು
In reply to ಉ: ಮಗಳು by pavithrabp
ಉ: ಮಗಳು
ಉ: ಮಗಳು
In reply to ಉ: ಮಗಳು by kavinagaraj
ಉ: ಮಗಳು