ನಿನ್ನೆಯ ನೆನಪುಗಳು!

ನಿನ್ನೆಯ ನೆನಪುಗಳು!

ನಾನು*:


 


ಇಂದೇಕೋ


ಬಾಲ್ಯದ ನೆನಪುಗಳು


ಮೇಳೈಸುತ್ತಿವೆ


ಈ ನನ್ನ


ಮನದಂಗಳದಲ್ಲಿ,


 


ಹನಿಗಳು


ಬೇಡ ಬೇಡವೆಂದರೂ


ಹೆಪ್ಪುಗಟ್ಟುತ್ತಿವೆ


ಈ ಕಂಗಳಂಚಿನಲ್ಲಿ!


 


 


ಆತ**:


 


ಈ ನಿನ್ನೆಗಳೇ ಹಾಗೆ


ಮೆಲುಕು ಹಾಕುತ್ತಿದ್ದಷ್ಟೂ


ಕೊಡುತ್ತವೆ ಈ ಮನಸ್ಸಿಗೊಂದಷ್ಟು


ಸವಿಯಾದ ನೋವು,


 


ಈ ನಾಳೆಗಳೇ ಹೀಗೆ


ಎಣಿಸಿದಷ್ಟೂ ಆಗುತ್ತದೆ


ಈ ಮನಸ್ಸು


ಕಹಿಯಾದ ತಾವು!


 


 


 


ನಾನು*: ಆತ್ರಾಡಿ ಸುರೇಶ ಹೆಗ್ಡೆ


ಆತ**: ಆತ್ರಾಡಿ ಪೃಥ್ವಿರಾಜ ಹೆಗ್ಡೆ


 


ಇದು ನನ್ನ ಅನುಜ ಮತ್ತು ನನ್ನ ನಡುವೆ ಜಂಗಮ ದೂರವಾಣಿಗಳ ಮೂಲಕ ನಡೆದ ಸಂದೇಶಗಳ ವಿನಿಮಯ.


 


 

Rating
No votes yet

Comments