ಕೊನೆಗೂ (ಲಿನಕ್ಸಿನ) Firefox 1.5ನಲ್ಲಿ ಕನ್ನಡ ಬಂತು ನೋಡ್ರೀಪ್ಪ!
ಮೊನ್ನೆ ಮೊನ್ನೆ ಹೊಸ ಫೈರ್ ಫಾಕ್ಸ್ ಹೊರಬಂದದ್ದೇ ತಡ, ಹೊಸತಾದ ಯರ್ರಾಭಿರ್ರೀ ಫಾಸ್ಟ್ ಇರೋ ಫೈರ್ ಫಾಕ್ಸ್ ನೋಡಿ ಒಂದೆಡೆ ಖುಷಿಯಾದ್ರೆ, ಪ್ಯಾಂಗೋ ಎನೇಬಲ್ ಈ ಸಲಾನೂ ಮಾಡ್ಲಿಲ್ವಲ್ಲ ಅನ್ನೋ ಬೇಜಾರು ಇನ್ನೊಂದೆಡೆ. ಪ್ಯಾಂಗೋ ಎನೇಬಲ್ ಮಾಡಿದ ಫೈರ್ ಫಾಕ್ಸ್ ಮಾತ್ರ ಕನ್ನಡವನ್ನ ಸರಿಯಾಗಿ ತೋರಿಸತ್ತೆ! ಮಾಮೂಲಿನಂತೆ ಉಬುಂಟು, ಫೆಡೋರಾ, ಮ್ಯಾಂಡ್ರಿವ ಇವುಗಳೊಡನೆ ಬರುವ ಫೈರ್ ಫಾಕ್ಸಿನಲ್ಲಿ ಪ್ಯಾಂಗೋ ಎನೇಬಲ್ ಆಗಿಯೇ ಬರತ್ತೆ... ಆದರೆ ಅವುಗಳನ್ನ ನೋಡಿಕೊಳ್ಳೋರು ತಮ್ಮ ತಮ್ಮ ವಿತರಣೆಗಳಲ್ಲಿ ಹೊಸ ಫೈರ್ ಫಾಕ್ಸ್ ಹಾಕುವವರೆಗೂ ಕಾಯಬೇಕಲ್ಲ! ಒಳ್ಳೆಯ ತ್ರಿಶಂಖು ಸ್ಥಿತಿಯಾಗಿ ಹೋಗಿತ್ತು. ಸರಿ, ಮಾಮೂಲಿನಂತೆ ತೆಲುಗು l10n ತಂಡದ ಸ್ನೇಹಿತನೊಬ್ಬ ಎಂದಿನಂತೆ ಫೈರ್ ಫಾಕ್ಸ್ ನ ಹೊಸ ಆವೃತ್ತಿಯನ್ನ ಪ್ಯಾಂಗೋ ಜೊತೆಗೆ ಕಂಪೈಲ್ ಮಾಡಿ ಎಲ್ಲರಿಗೂ ಕೊಡುತ್ತಾನೆಂದು ಕಾದು ಕುಳಿತೆ. ಅದೂ ಆಗಲೇ ಇಲ್ಲ... ಅವ ತನ್ನ ಊರಿಗೆ ಹೋಗಿ ಕುಳಿತುಬಿಟ್ಟಿದ್ದ.
ಸರಿ, ಏನು ಮಾಡೋದು? ಫೈರ್ ಫಾಕ್ಸ್ ಅನ್ನೇ ಶಪಿಸುತ್ತಾ ನಿನ್ನೆ ರಾತ್ರಿ ಕಂಪೈಲ್ ಮಾಡಲು ಕುಳಿತೆ.
ಫೈರ್ ಫಾಕ್ಸ್ build ಮಾಡೋದು ತಮಾಷೆಯಲ್ಲ - ದೊಡ್ಡ ತಲೆನೋವು ಕೆಲಸ. ಹಿಂದೊಮ್ಮೆ Novellನಲ್ಲಿ internship ಮಾಡುವಾಗ ವಾರಗಟ್ಟಲೆ GNOME ಎಂಬ ವಿಂಡೋ ಮ್ಯಾನೇಜರ್ build ಮಾಡಿದ (ಕಹಿ) ಅನುಭವ ಇನ್ನೂ ಮರೆತಿಲ್ಲವಷ್ಟೆ!
ಕೊನೆಗೆ ಮಾಡಿದ್ದು shared build (ಎಂದರೆ, ಈಗಾಗಲೇ ನಿಮ್ಮ ಕಂಪ್ಯೂಟರಿನಲ್ಲಿರುವ ಬೈನರಿಗಳನ್ನು ಬಳಸುತ್ತೆ). static build (ಮೇಲಿನದರ ತದ್ವಿರುದ್ಧ - ತನ್ನದೇ ಡೈರೆಕ್ಟರಿಯಲ್ಲಿರುವ ಬೈನರಿಗಳನ್ನ ಬಳಸುತ್ತೆ... ಡಿಪೆಂಡೆನ್ಸಿ ಇರೋದಿಲ್ಲ) ಮಾಡೋದಕ್ಕೆ ಮನಸ್ಸೂ ಇರ್ಲಿಲ್ಲ, ಆಗಲೇ ಹಳೆಯದಾಗಿರುವ ನನ್ನ ಕಂಪ್ಯೂಟರಿನಲ್ಲಿ ಹೆಚ್ಚು RAM ಕೂಡ ಇಲ್ಲವಾದ್ದರಿಂದ ಅದು ಒಳ್ಳೇ ಚಾಯ್ಸೂ ಆಗಿರಲಿಲ್ಲ. ಸರಿಯಾಗಿ ಎರಡು ಘಂಟೆ ಮತ್ತು ಹಲವು ನಿಮಿಷಗಳು ತಗೊಂಡ ಈ ಕಂಪೈಲೇಶನ್ ನನ್ನಾಶ್ಚರ್ಯಕ್ಕೆ ಏನೇನೂ ವಿಘ್ನಗಳಿಲ್ಲದೇ ಮುಗಿದುಹೋಯ್ತು! (ಲ್ಲ್ರಾರಂಭ ಮಾಡೋದಕ್ಕೆ ಮುನ್ನ ವಿಜ್ಞೇಶ್ವರನನ್ನೂ ನೆನೆಸಿಕೊಂಡದ್ದು ಸಾರ್ಥಕವಾಯ್ತು).
ನಾನು build ಮಾಡಿದ ಪ್ಯಾಕೇಜ್ [:http://www.hpnadig.net/blog/index.php/archives/2005/12/14/firefox-15-pango-enabled-indic-build/|ಈ ಲಿಂಕ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು ನೋಡ್ರಿ!]
ಕಂಪೈಲ್ ಮಾಡಿದ ಫೈರ್ ಫಾಕ್ಸು ಉಬುಂಟುವಿನಲ್ಲಿ ಏನೂ ತೊಂದರೆಯಿಲ್ಲದೆ ಕೆಲಸ ಮಾಡುತ್ತದೆ. ಡೆಬಿಯನ್ ಸಾರ್ಜ್ ಹಾಗೂ ಸಿಡ್ ನಲ್ಲಿ ಹಳೆಯ ಪ್ಯಾಂಗೋ ಆವೃತ್ತಿ ಇರೋದ್ರಿಂದ ನೀವು ಒಂದಷ್ಟು ಅಲ್ಲಿಲ್ಲಿ ನಿಮ್ಮ ಲಿನಕ್ಸಿನಲ್ಲೀಗಾಗಲೇ ಇರುವ ಪ್ಯಾಕೇಜುಗಳೊಂದಿಗೆ ಸ್ವಲ್ಪ ಆಟವಾಡಬೇಕಾಗಿ ಬರಬಹುದು (ಡೆಬಿಯನ್ನಿನಲ್ಲಿ ನಿಮಗೆದುರಾಗುವ ಕೆಲವೊಂದು ತೊಂದರೆಗಳನ್ನು ಮೇಲಿನ ಲಿಂಕ್ ನಲ್ಲಿಯೇ ಪಟ್ಟಿ ಮಾಡಿರುವೆ, ನೋಡಿ).
ಈ ಹೊಸ ಫೈರ್ ಫಾಕ್ಸಿನ ಆವೃತ್ತಿ ಕನ್ನಡ, ಹಿಂದಿ ಹಾಗೂ ಭಾರತೀಯ ಭಾಷೆಗಳನ್ನು ಏನೂ ತೊಂದರೆಯಿಲ್ಲದೆ ರೆಂಡರ್ ಮಾಡುವುದಲ್ಲದೆ ಫಾಸ್ಟ್ ಕೂಡ ಉಂಟು. :)
Comments
ವಿಘ್ನನಿವಾರಕ