ಪಡುವಣ ಪಂಡಿತರನ್ನು ಏಕೆ ನಂಬಬಾರದು?

ಪಡುವಣ ಪಂಡಿತರನ್ನು ಏಕೆ ನಂಬಬಾರದು?

Comments

ಬರಹ

ಹಲವಾರು ಸಾರಿ ಸಂಪದದಲ್ಲಿ, ಮಂದಿ ಪಡುವಣ ಪಂಡಿತರ ಕೆಲಸವನ್ನ ಮತ್ತು ಅವರು ಬರೆದಿರುವ ಹೊತ್ತಗೆಗಳನ್ನ ನಂಬಲಾಗುವುದಿಲ್ಲ ಅನ್ನುತ್ತಾರೆ.
ಪುರಾವೆ ಮತ್ತು ಲಾಜಿಕ್ ಇದ್ದು ಯಾರಾದರೂ ಹೇಳಲಿ, ಈ ಮೂಡಣ, ಪಡುವಣ ಎಂಬ ಮೇಲು-ಕೀಳು ಮಾಡುವುದೇಕೆ.

ನನ್ನ ಎಂಜಿನಿಯರಿಂಗ್ನಲ್ಲಿ ನಾನು ಓದಿದ ಹೊತ್ತಗೆಗಳೆಲ್ಲವೂ ಪಡುವಣ ಪಂಡಿತರದೇ

೧) Integrated Electronics - Millman and Halkias ( ಎಲೆಕ್ಟ್ರಾನಿಕ್ಸ್ ಓದಿರುವವರಿಗೆ ಇದು ಎಂತ ಹೊತ್ತಗೆ ಎಂಬ ಅರಿವಾಗಿರುತ್ತದೆ)
೨) Electromagnetics - John D Kraus (ಇದು ಆಟೇಯ ಸಕ್ಕತ್ ಒಳ್ಳೆ ಹೊತ್ತಗೆ)
೩) Computer Organisation - William Hamacher ( ಇದರ ಬಗ್ಗೆ ಹೇಳಬೇಕೆ ?)
೪) Computer Networks - Taenabaum

ಈಟೇಲ್ಲ ಪಡುವಣ ಪಂಡಿತರ ಹೊತ್ತಗೆ ಓದ್ಕಂಡು ಈಗ ದುಡಿತಾ ಇರೋ ನಾವು ಈ ಬಡಪಾಯಿ 'ಬರೊ', 'ಎಮನೊ' ಮಾತ್ರ ಯಾಕೇ ಬೇಡ ಅನ್ನೋದು ಯಾಕೆ?.

ಇನ್ನು ಕನ್ನಡ-ಇಂಗ್ಲೀಸ್ ನಿಗಂಟು ಬರೆದವರು ಕಿಟೆಲ್. ಇವರ ಮೂರುತಿ ಇಂದಿಗೂ ಬೆಂಗಳೂರಿನ 'ಮಹಾತ್ಮ ಗಾಂಧಿ' ರಸ್ತೆಯಲ್ಲಿ ಹಾಕವ್ರೆ. ನಮ್ಮ ಸರಕಾರದವರು
ಇವ್ರಿಗೆ ಸ್ಯಾನೆ ಮರ್ವಾದೆ ತೋರ್ಸೋವರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet