ಕಳೆದ ವಾರ ಊರಿಗೆ ಹೋಗಿದ್ದಾಗ, ಮನೆಯ ಜಗುಲಿಯೊಂದರಲ್ಲಿ ಕಪ್ಪು ಬಣ್ಣದ ತುಂಟ ಬೆಕ್ಕಿನ ಮರಿಯೊಂದು ಕಾಣಿಸಿತು. ಹಿಡಿಕಡ್ಡಿಯೊಂದನ್ನು ಮುಂಗಾಲಿನಲ್ಲಿ
ಮೀಟುತ್ತಾ, ಅದು ಚಲಿಸುತ್ತಿದೆ ಎಂಬ ಭ್ರಮೆಯಲ್ಲಿ ಬೆನ್ನಟ್ಟುತ್ತಾ, ಹಲ್ಲಿನಲ್ಲಿ ಕಡಿಯುತ್ತಾ ಆಟವಾಡುತ್ತಿತ್ತು. ಚಿಕ್ಕಂದಿನಲ್ಲಿ ವಠಾರದಲ್ಲಿ ಅಡ್ಡಾಡುತ್ತಿದ್ದ ಪುಂಡ ಬೆಕ್ಕುಗಳಲ್ಲಿ ಕೆಲವು ಕಳ್ಳ ಕಳ್ಳ ಹೆಜ್ಜೆಯಿಟ್ಟು ಕಿಟಕಿಯಿಂದ ನುಗ್ಗಿ ಒಳಬಂದು ಹಾಲು, ಬೆಣ್ಣೆ ಕೊನೆಗೆ ಏನೂ ಸಿಕ್ಕದಿದ್ದರೆ ಎಣ್ಣೆಯನ್ನಾದರೂ ಕುಡಿದು ಪಲಾಯನಗೈಯುತ್ತಿದ್ದವು. ನನ್ನನ್ನೂ ಸೇರಿಸಿ ಮನೆಯವರೂ ಇದುವರೆಗೂ ಮನೆಗೆ ಬರುವ ಬೆಕ್ಕನ್ನು ಓಡಿಸಿದ್ದೆವೆಯೇ ಹೊರತು ಎಂದೂ ಸಾಕಿ ಮುದ್ದು ಮಾಡಿರಲಿಲ್ಲ. ಅಂತದ್ದರಲ್ಲಿ ಈ ಬೆಕ್ಕಿನ ಮರಿ ನಮ್ಮ ಮನೆಗೆ ಹೇಗೆ ಬಂತು ಎಂದು ಕುತೂಹಲವಾಯ್ತು.
ನನ್ನ ತಮ್ಮನನ್ನು ಕರೆದು ಅದರ ಬಗ್ಗೆ ವಿಚಾರಿಸಲಾಗಿ, "ಹೋ ಇದಾ, ಒಂದ್ ಬೆಕ್ ಬಂದ್ ಮರಿ ಹಾಕಿ ಹೋಯ್ತ್. ಎಲ್ಲೆಲ್ ಹಾಕಿತ್ತೇನೋ ಇದ್ರ ಹತ್ರ ಮಾತ್ರ ಸುಳೀಲೇ ಇಲ್ಲ. ಒಂದಿನ ಕಾಂಬುಸಮಿಗೆ ಮನಿ ಮೂಲೆಲ್ ಒಂದ್ ಕಡಿಯಿಂದ್ ಬೆಕ್ಕಿನ್ ಮರಿ ಶಬ್ದ ಕೇಂತಿತ್. ಕಾಂಬುಕೆ ಇಲಿಮರಿಕಣೆಗ್ ಇದ್ದಿತ್. ಕಣ್ಣೂ ಒಡ್ದಿರ್ಲ.. ಮೈ ತುಂಬಾ ಎರು. ಎರುನೆಲಾ ಬಿಡ್ಸಿ ಆವತ್ತಿಂದ್ ಚಮ್ಚದಂಗೆ ಹಾಲು ಕುಡ್ಸಿಯೆ. ಈಗ ಅದೇ ಕುಡಿತ್, ಕಣ್ಣೂ ಒಡ್ತಿತ್." ಎಂದ.
ಮತ್ತೆ ನಾನೇ ಕೆಳಿದೆ, "ಅಲ್ದ ಅದ್ರಬ್ಬಿ ಒಂದ್ಸಲಿಯೂ ಬರ್ಲಿಲ್ಯ ಆಮೇಲೆ, ಅದೆಂತಾ ಬೆಕ್ಕಾಯ್ಕ್" ಅಂದೆ.
"ಒಂದೆರಡ್ ಸಲಿ ಬಂದಿತ್, ನಾವು ಹಾಲು ಕುಡ್ಸುಸಮಿಗೇ ಬಂದಿತ್. ಸುಮ್ನೆ ಕಂಡ್ಕಂಡ್ ಹೋಯ್ತ್" ಅಂದ.
ಸುಟಿ ಸುಟಿಯಾದ ಮರಿಯನ್ನ ನಾನೂ ಮೊದಲಬಾರಿಗೆಂಬಂತೆ ಮುದ್ದು ಮಾಡಿದೆ. ಮೊದಮೊದಲು ಹೆದರಿದರೂ ಕಡೆಗೆ ನನ್ನ ಬಳಿ ನಿರ್ಭಯದಿಂದ ಸುಳಿದಾಡಲು ಆರಂಭಿಸಿತು. ಅದರ ತುಂಟಾಟ ನೋಡುವುದು ಮಾತ್ರ ತುಂಬಾ ಸಂತೋಷದ ಕೆಲಸ. ಈ ಬಾರಿ ಇವೆರಡು ಫೋಟೋ ತೆದೆದಿದ್ದೇನೆ. ಮುಂದಿನ ಬಾರಿ ಊರಿಗೆ ಹೋದರೆ, ಅದರ ತುಂಟಾಟದ ಚಿತ್ರಗಳನ್ನು ಸೆರೆಹಿಡಿಯಲು ಪ್ರಯತ್ನಿಸುವೆ.
ನನ್ನ ಕ್ಯಾಮರಾವನ್ನು ಕುತೂಹಲದಿಂದ ವೀಕ್ಷಿಸುತ್ತಿರುವುದು:
<a href="http://www.flickr.com/photos/palachandra/4654691703/" title="CSC_5824 by Palachandra, on Flickr"><img alt="CSC_5824" height="500" src="http://farm5.static.flickr.com/4042/4654691703_723ae0d914.jpg" width="333" /></a>
ಅಂಗೈಯಲ್ಲಿ ಮುದ್ದಿನ ಮರಿ:
<a href="http://www.flickr.com/photos/palachandra/4646554607/" title="KITTEN by Palachandra, on Flickr"><img alt="KITTEN" height="332" src="http://farm4.static.flickr.com/3416/4646554607_403c8e2f33.jpg" width="500" /></a>
ಕಳೆದ ವಾರ ಊರಿಗೆ ಹೋಗಿದ್ದಾಗ, ಮನೆಯ ಜಗುಲಿಯೊಂದರಲ್ಲಿ ಕಪ್ಪು ಬಣ್ಣದ ತುಂಟ ಬೆಕ್ಕಿನ ಮರಿಯೊಂದು ಕಾಣಿಸಿತು. ಹಿಡಿಕಡ್ಡಿಯೊಂದನ್ನು ಮುಂಗಾಲಿನಲ್ಲಿ ಮೀಟುತ್ತಾ, ಅದು ಚಲಿಸುತ್ತಿದೆ ಎಂಬ ಭ್ರಮೆಯಲ್ಲಿ ಬೆನ್ನಟ್ಟುತ್ತಾ, ಹಲ್ಲಿನಲ್ಲಿ ಕಡಿಯುತ್ತಾ ಆಟವಾಡುತ್ತಿತ್ತು. ಚಿಕ್ಕಂದಿನಲ್ಲಿ ವಠಾರದಲ್ಲಿ ಅಡ್ಡಾಡುತ್ತಿದ್ದ ಪುಂಡ ಬೆಕ್ಕುಗಳಲ್ಲಿ ಕೆಲವು ಕಳ್ಳ ಕಳ್ಳ ಹೆಜ್ಜೆಯಿಟ್ಟು ಕಿಟಕಿಯಿಂದ ನುಗ್ಗಿ ಒಳಬಂದು ಹಾಲು, ಬೆಣ್ಣೆ ಕೊನೆಗೆ ಏನೂ ಸಿಕ್ಕದಿದ್ದರೆ ಎಣ್ಣೆಯನ್ನಾದರೂ ಕುಡಿದು ಪಲಾಯನಗೈಯುತ್ತಿದ್ದವು. ನನ್ನನ್ನೂ ಸೇರಿಸಿ ಮನೆಯವರೂ ಇದುವರೆಗೂ ಮನೆಗೆ ಬರುವ ಬೆಕ್ಕನ್ನು ಓಡಿಸಿದ್ದೆವೆಯೇ ಹೊರತು ಎಂದೂ ಸಾಕಿ ಮುದ್ದು ಮಾಡಿರಲಿಲ್ಲ. ಅಂತದ್ದರಲ್ಲಿ ಈ ಬೆಕ್ಕಿನ ಮರಿ ನಮ್ಮ ಮನೆಗೆ ಹೇಗೆ ಬಂತು ಎಂದು ಕುತೂಹಲವಾಯ್ತು.
ನನ್ನ ತಮ್ಮನನ್ನು ಕರೆದು ಅದರ ಬಗ್ಗೆ ವಿಚಾರಿಸಲಾಗಿ, "ಹೋ ಇದಾ, ಒಂದ್ ಬೆಕ್ ಬಂದ್ ಮರಿ ಹಾಕಿ ಹೋಯ್ತ್. ಎಲ್ಲೆಲ್ ಹಾಕಿತ್ತೇನೋ ಇದ್ರ ಹತ್ರ ಮಾತ್ರ ಸುಳೀಲೇ ಇಲ್ಲ. ಒಂದಿನ ಕಾಂಬುಸಮಿಗೆ ಮನಿ ಮೂಲೆಲ್ ಒಂದ್ ಕಡಿಯಿಂದ್ ಬೆಕ್ಕಿನ್ ಮರಿ ಶಬ್ದ ಕೇಂತಿತ್. ಕಾಂಬುಕೆ ಇಲಿಮರಿಕಣೆಗ್ ಇದ್ದಿತ್. ಕಣ್ಣೂ ಒಡ್ದಿರ್ಲ.. ಮೈ ತುಂಬಾ ಎರು. ಎರುನೆಲಾ ಬಿಡ್ಸಿ ಆವತ್ತಿಂದ್ ಚಮ್ಚದಂಗೆ ಹಾಲು ಕುಡ್ಸಿಯೆ. ಈಗ ಅದೇ ಕುಡಿತ್, ಕಣ್ಣೂ ಒಡ್ತಿತ್." ಎಂದ.
ಮತ್ತೆ ನಾನೇ ಕೆಳಿದೆ, "ಅಲ್ದ ಅದ್ರಬ್ಬಿ ಒಂದ್ಸಲಿಯೂ ಬರ್ಲಿಲ್ಯ ಆಮೇಲೆ, ಅದೆಂತಾ ಬೆಕ್ಕಾಯ್ಕ್" ಅಂದೆ.
"ಒಂದೆರಡ್ ಸಲಿ ಬಂದಿತ್, ನಾವು ಹಾಲು ಕುಡ್ಸುಸಮಿಗೇ ಬಂದಿತ್. ಸುಮ್ನೆ ಕಂಡ್ಕಂಡ್ ಹೋಯ್ತ್" ಅಂದ.
ಸುಟಿ ಸುಟಿಯಾದ ಮರಿಯನ್ನ ನಾನೂ ಮೊದಲಬಾರಿಗೆಂಬಂತೆ ಮುದ್ದು ಮಾಡಿದೆ. ಮೊದಮೊದಲು ಹೆದರಿದರೂ ಕಡೆಗೆ ನನ್ನ ಬಳಿ ನಿರ್ಭಯದಿಂದ ಸುಳಿದಾಡಲು ಆರಂಭಿಸಿತು. ಅದರ ತುಂಟಾಟ ನೋಡುವುದು ಮಾತ್ರ ತುಂಬಾ ಸಂತೋಷದ ಕೆಲಸ. ಈ ಬಾರಿ ಇವೆರಡು ಫೋಟೋ ತೆದೆದಿದ್ದೇನೆ. ಮುಂದಿನ ಬಾರಿ ಊರಿಗೆ ಹೋದರೆ, ಅದರ ತುಂಟಾಟದ ಚಿತ್ರಗಳನ್ನು ಸೆರೆಹಿಡಿಯಲು ಪ್ರಯತ್ನಿಸುವೆ.
ನನ್ನ ಕ್ಯಾಮರಾವನ್ನು ಕುತೂಹಲದಿಂದ ವೀಕ್ಷಿಸುತ್ತಿರುವುದು:

ಅಂಗೈಯಲ್ಲಿ ಮುದ್ದಿನ ಮರಿ:

ಚಿತ್ರ ಪುಟ ಸೇರಿಸಲು ನೆನಪಿಸಿದ್ದು: ಗಣೇಶ್ :)
Comments
ಉ: ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ?
In reply to ಉ: ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ? by ananthesha nempu
ಉ: ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ?
In reply to ಉ: ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ? by shivaram_shastri
ಉ: ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ?
ಉ: ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ?
ಉ: ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ?
ಉ: ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ?
ಉ: ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ?
ಉ: ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ?
In reply to ಉ: ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ? by shaamala
ಉ: ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ?
ಉ: ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ?
In reply to ಉ: ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ? by Shrikantkalkoti
ಉ: ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ?
In reply to ಉ: ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ? by palachandra

In reply to ಉ: ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ? by ಗಣೇಶ
ಉ: ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ?
ಉ: ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ?
In reply to ಉ: ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ? by naasomeswara
ಉ: ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ?