ಚರ್ಚೆಗೊಂದು ವಿಷಯ..ಕಾವ್ಯವನ್ನು ಅನುಭವಿಸಿ ಬರೆಯಬೇಕೆ ಅಥವಾ ಕಲ್ಪನೆಯೊಂದಿದ್ದರೆ ಸಾಕೆ?

ಚರ್ಚೆಗೊಂದು ವಿಷಯ..ಕಾವ್ಯವನ್ನು ಅನುಭವಿಸಿ ಬರೆಯಬೇಕೆ ಅಥವಾ ಕಲ್ಪನೆಯೊಂದಿದ್ದರೆ ಸಾಕೆ?

ನನ್ನ ಕಾಲೇಜು ವ್ಯಾಸಂಗದ ದಿನಗಳ ನೆನಪು...ಭಾಷಾ ವಿದ್ಯಾರ್ಥಿಗಳಿಗಾಗಿ ವಿಚಾರ ಸಂಕಿರಣ ಏರ್ಪಡಿಸಿದ್ದರು.ಆ  ವಿಚಾರ ಸಂಕಿರಣದಲ್ಲಿ ನಮ್ಮ ಕನ್ನಡ ವಿಭಾಗದ ಪ್ರಮುಖ ಕವಿಗಳೆಂದು ಗುರುತಿಸಲ್ಪಟ್ಟ ಇಬ್ಬರು ಉಪನ್ಯಾಸಕರ ವಿಚಾರ ಮಂಡನೆ ಇತ್ತು.

        ಆ ಇಬ್ಬರು ಉಪನ್ಯಾಸಕರೂ ತಮ್ಮ ವಯಕ್ತಿಕ ದ್ವೇಷಗಳನ್ನು ಆಧರಿಸಿಯೇ ವಿಷಯ ಮಂಡಿಸಿದ್ದರಿಂದ ಅದು ಚರ್ಚಾಕೂಟವಾಗಿ ಹೋಯಿತು.ಆಗ ತಾನೆ ಕಾಲೇಜಿಗೆ ಸೇರಿದ್ದ ನಮಗೆ ಅವರ ಪ್ರೌಢ ಪದಭರಿತ ಭಾಷೆ ಅರಿಯದೇ ಗೆಳೆಯರೆಲ್ಲ ಸುಮ್ಮನೆ ಕೇಳಿಸಿಕೊಂಡು ಉಂಡೆದ್ದು ಬಂದಿದ್ದೆವು.

 ಚರ್ಚೆಯ ವಿಷಯದಲ್ಲಿ ನಾನು ಈಗಲೂ ತುಂಬಾ ಎಳಸು.ಸಂಪದದ ಅನುಭವಿಗಳ ಬಳಗದಲ್ಲಿ , ಈ ವಿಷಯಕ್ಕೊಂದು ಉತ್ತಮ ಚರ್ಚೆ ನಡೆದು ಉತ್ತರ ಸಿಗಬಹುದೆಂಬ ಆಶಾ ಭಾವನೆಯೊಂದಿಗೆ .......

      ವಿಷಯ : :..ಕಾವ್ಯವನ್ನು  ಅನುಭವಿಸಿ ಬರೆಯಬೇಕೆ  ಅಥವಾ ಕಲ್ಪನೆಯೊಂದಿದ್ದರೆ ಸಾಕೆ?
    

Rating
No votes yet

Comments