ಕನಸ ಬೆಸೆಯುವ ಮನವ ತಟ್ಟುವ ಸಾವಿರ ದೀಪವ ಹಚ್ಚುವಾಸೆಯೂ

ಕನಸ ಬೆಸೆಯುವ ಮನವ ತಟ್ಟುವ ಸಾವಿರ ದೀಪವ ಹಚ್ಚುವಾಸೆಯೂ




ಕಾಡಿನಾಚೆಯಾ ಊರ ಹೊರಗಿನಾ
ಆಸೆ ಹೊತ್ತ ಹಿರಿದಾದ ಕನಸಿನಾ
ಮರುಕು ಬಿದ್ದ ಹಳೆ ಗುಡಿಯ ಬದಿಗಿನಾ
ಪುಟ್ಟದಾದ ಒಂದು ಮಿಣುಕು ದೀಪ ನಾ

ಅರಿವಿದೆ ಮನಸ್ಸಿಗೆ ಸತ್ಯದತ್ತಲೂ
ಹರಡಿದೆ ಕತ್ತಲು ನನ್ನ ಸುತ್ತಲೂ
ಬೀಸುವ ಗಾಳಿಯು ಭರದೆ ಮುತ್ತಲೂ
ಸನಿಹದೆ ಬದುಕಿನ ಸಂಜೆಗತ್ತಲೂ

ಅಂತಃ ಶಕ್ತಿಯಾ ಬಳಸಿ ಉರಿಯುವ
ಉರಿದು ಉರಿದು ಜಗವೆಲ್ಲ ಬೆಳಗುವ
ಮನಸ್ಸಿನೊಳಗಿನಾ ಶ್ರೇಷ್ಟ ಶಕ್ತಿಯಾ
ಬಳಸಿ ಬೆಳೆಸಿ ಎಲ್ಲ ಬೆಳಗುವಾಸೆಯೂ

ಜಗವ ಬೆಳಗುವ ಬದುಕು ಮುಟ್ಟುವ
ನಲಿವಿನ ಮನೆಗಳ ಲೋಕ ಕಟ್ಟುವ
ಕನಸ ಬೆಸೆಯುವ ಮನವ ತಟ್ಟುವ
ಸಾವಿರ ದೀಪವ ಹಚ್ಚುವಾಸೆಯೂ

Rating
No votes yet

Comments