ಇನ್ನೊಂದಿಷ್ಟು ನಗೆಹನಿಗಳು

ಇನ್ನೊಂದಿಷ್ಟು ನಗೆಹನಿಗಳು

ಶಿವರಾಮ:ನನಗೆ ಈ ಮೊಲ ಸಿಕ್ಕಿದೆ. ಏನು ಮಾಡ್ಲಿ?

ಗೆಳೆಯ:ಪ್ರಾಣಿಸಂಗ್ರಹಾಲಯಕ್ಕೆ ಕರಕೊಂಡು ಹೋಗು.

ಮರುದಿನ 

ಗೆಳೆಯ: ಅರೆ, ಈಗಲೂ ಮೊಲ ನಿನ್ನ ಹತ್ರಾನೆ ಇದೆ. ನಿನ್ನೇನೇ ಪ್ರಾಣಿಸಂಗ್ರಹಾಲಯಕ್ಕೆ ಕರಕೊಂಡು ಹೋಗು ಅಂದಿದ್ದೆ. 

ಶಿವರಾಮ:ನಿನ್ನೆ ಮೊಲಾನ ಪ್ರಾಣಿಸಂಗ್ರಹಾಲಯಕ್ಕೆ ಕರಕೊಂಡು ಹೋಗಿದ್ದೆ. ಇವತ್ತು ಸಿನೆಮಾಕ್ಕೆ ಕರಕೊಂಡು ಹೋಗ್ತಾ ಇದ್ದೀನಿ. 

 

ಪ್ರ:ಕೆಲಸದಲ್ಲಿ ಇರೋವಾಗ ಶಿಳ್ಳೆ ಹೊಡೆಯುವವರು ಯಾರು? 

ಉ: ಪೊಲೀಸರು 

 

ಗೆಳೆಯ: ಈ ಸೂರ್ಯ ರಾತ್ರಿ ಹೊತ್ತು ಹೊರಗಡೆ ಬರಲ್ಲ, ಯಾಕೆ ಅಂತ?

ಶಿವರಾಮ: ಬರ್ತಾನಯ್ಯ; ರಾತ್ರಿ ಹೊತ್ತು, ಕತ್ತಲೆ ಇರುತ್ತಲ್ವಾ? ಅದ್ಕೇ, ನಮಗೆ ಕಾಣ್ಸಲ್ಲ ಅಷ್ಟೇ. 

 

ಶಿವರಾಮ ಮತ್ತವನ ಗೆಳೆಯ ಡಾಕ್ಟರರ ಹತ್ತಿರ ಬಂದ್ರು. 

ಡಾ: ಏನಾಯ್ತು?

ಶಿವರಾಮನ ಗೆಳೆಯ: ನಾವು ಗೋಲಿ ಆಡ್ತಾ ಇರೋವಾಗ ಅಕಸ್ಮಾತ್ ನಾನು ಒಂದು ಗೋಲಿ ನುಂಗಿಬಿಟ್ಟೆ. 

ಡಾ:(ಶಿವರಾಮನಿಗೆ) ಇವನು ನಿನ್ನ ತಮ್ಮನಾ? ಬೇಗ ಕರೆದುಕೊಂಡು ಬಂದದ್ದು ಒಳ್ಳೆದಾಯ್ತು.

ಶಿವರಾಮ:ಇವನೇನೂ ನನ್ನ ತಮ್ಮ ಅಲ್ಲ; ಗೋಲಿ ನಂದು, ಅಷ್ಟೇ.

 

ಕೊನೆಯಲ್ಲಿ,

ನಿಮಗಿದು ಗೊತ್ತಿರಲಿಕ್ಕಿಲ್ಲ: Reserved for ladies ಎಂಬಲ್ಲಿ serve or die ಎಂಬ ಸಂದೇಶ ಅಡಗಿದೆ!   

 

 

 

Rating
No votes yet

Comments