ನಾಳೆಗಾಗಿ ಇಂದೇ ದುಡಿ!

ನಾಳೆಗಾಗಿ ಇಂದೇ ದುಡಿ!

ಒಡಲೆಂಬ ಮನೆಯು ಗಟ್ಟಿಮುಟ್ಟಾಗಿರಲು,
ಮುಪ್ಪೆನುವುದಿನ್ನೂ ಬಳಿಸಾರದೇ ಇರಲು,
ಕಿವಿಮೂಗುಕಣ್ಣುಗಳ ಕಸುವುಗುಂದದೇ ಇರಲು,
ಜೀವ ತಾನಿನ್ನೂ ಸೊರಗಿ ಹೋಗದೇ ಇರಲು,
ಅರಿತವರು ಆಗಲೇ ದುಡಿಯುತಲಿ ಇರಬೇಕು;
ತಮ್ಮ ಏಳಿಗೆಯನ್ನು ತಾವೆ ತರುತಿರಬೇಕು!
ಇದನು ಮಾಡದೆ ಹೋಗಿ ಮನೆ ಹತ್ತಿ ಉರಿವಾಗ
ಬಾವಿ ತೋಡಲು ಹೊರಡುವುದೆಂತಹ ಕೆಲಸ?


ಸಂಸ್ಕೃತ ಮೂಲ (ಭರ್ತೃಹರಿಯ ವೈರಾಗ್ಯ ಶತಕದಿಂದ):

ಯಾವತ್ಸ್ವಸ್ಥಮಿದಂ ಕಲೇಬರಗೃಹಂ ಯಾವಚ್ಚ ದೂರೇ ಜರಾ
ಯಾವಚ್ಚೇಂದ್ರಿಯಶಕ್ತಿರಪ್ರತಿಹತಾ ಯಾವತ್ ಕ್ಷಯೋ ನಾಯುಷಃ |
ಆತ್ಮಶ್ರೇಯಸಿ ತಾವದೇವ ವಿದುಷಾ ಕಾರ್ಯಃ ಪ್ರಯತ್ನೋ ಮಹಾ-
ನ್ನೋದೀಪ್ತೇ ಭವನೇ ತು ಕೂಪಖನನಂ ಪ್ರತ್ಯುದ್ಯಮಃ ಕೀದೃಶಃ ||

 

-ಹಂಸಾನಂದಿ

 

ಕೊಸರು: ಇದೇ ತಿರುಳುಳ್ಳ ಇನ್ನೊಂದು ಸುಭಾಷಿತ ಇಲ್ಲಿದೆ: http://sampada.net/blog/hamsanandi/01/06/2009/20961

 

Rating
No votes yet

Comments