ಮೋಕ್ಷದಿಂದ ಮುಕ್ತಿಗಾಗಿ ದೈವಕ್ಕೆ ಕೃತಜ್ಞವಾಗಿರಬೇಕಾದ ಹಿಂಸೆಗೆ ಪರಿಹಾರ ಕುಡಿತ!
(೧೧೧) ನೀವು ಎಂದಿಗೂ ಅನುಭವಿಸಲಾಗದ ಆನಂದದ ಅತ್ಯುತ್ಕಟಾವಸ್ಥೆಯನ್ನು ’ಮೋಕ್ಷ’ ಎನ್ನುತ್ತೇವೆ. ಯಾವಾಗಲೂ ಅದನ್ನು ಬೇರೆ ಯಾರೋ ಹಿಂದಿನ ಕಾಲದಲ್ಲೇ ಅನುಭವಿಸಿದವರಾಗಿರುತ್ತಾರೆ. ಮೋಕ್ಷ ಭೂತ. ಯಾವುದೇ ಸಾಧನದಿಂದಲೂ, ಯಾವ ಕಾಲಕ್ಕೂ ದೊರಕಲಾರದಂತಿದ್ದರೂ ಅದರ ಚಟವನ್ನು ಮಾತ್ರ ಹುಟ್ಟಿಸಬಲ್ಲಂತಹ ಅಭಿಪ್ಸೆಯೇ ಮೋಕ್ಷ!
(೧೧೨) ನಿನಗೆ ನಿರಂತರ ಮರೀಚಿಕೆಯಾಗಿರುವುದನ್ನು ಮೋಕ್ಷ ಎನ್ನುತ್ತೇವೆ. ನಿನ್ನನ್ನೇ ನಿರಂತರವಾಗಿ ಅರ್ಥೈಸಿಕೊಳ್ಳಲಾಗದ ನಿನ್ನದೇ ಕಲ್ಪನೆಯನ್ನು ದೇವರೆನ್ನುತ್ತೇವೆ!
(೧೧೩) ನೀನು ಇತರರಿಗೆ ಧಾರಾಳವಾಗಿ ನೀಡಲಿಚ್ಛಿಸುವುದು, ಆದರೆ ಸ್ವತಃ ಎಂದಿಗೂ ಬಯಸದೇ ಇರುವುದನ್ನು ’ಹಿಂಸೆ’ ಎನ್ನುತ್ತೇವೆ!
(೧೧೪) ಇತರರು ನಿನಗೆ ನೀಡಬೇಕೆಂದು ಬಯಸುವುದು ಆದರೆ ನೀನೇ ಇತರರಿಗೆ ನೀಡಲೊಲ್ಲದ್ದನ್ನು ’ಕೃತಜ್ಞತೆ’ ಎನ್ನುತ್ತೇವೆ!
(೧೧೫) ಕುಡಿತ ವಿಪರೀತವಾಗಿ, ಚಿತ್ತಾಗಿ, ಕುಸಿದು ನಂತರ ಎಚ್ಚರಗೊಂಡಾಗ ನಿಮ್ಮ ದೇಹದ ಯಾವ ಭಾಗದಲ್ಲಿ ಶಿರವಿದೆ ಎಂಬುದನ್ನು ಪತ್ತೆಹಚ್ಚಲು ಸಹಾಯಕವಾಗುವುದನ್ನು ತಲೆದಿಂಬು ಎನ್ನುತ್ತೇವೆ!
Rating
Comments
ಉ: ಮೋಕ್ಷದಿಂದ ಮುಕ್ತಿಗಾಗಿ ದೈವಕ್ಕೆ ಕೃತಜ್ಞವಾಗಿರಬೇಕಾದ ಹಿಂಸೆಗೆ ...