ನರಕಕ್ಕೆ ಹೋಗದಿರಲು ಏನು ಮಾಡಬೇಕು?
ನರಕಕ್ಕೆ ಹೋಗದಿರಲು ಏನು ಮಾಡಬೇಕು?
ಅಶ್ವತ್ಥಮೇಕಂ ಪಿಚುಮಂದಮೇಕಂ
ನ್ಯಗ್ರೋಧಮೇಕಂ ದಶತಿಂತ್ರಿಣೀಕಂ|
ಕಪಿತ್ಥಬಿಲ್ವಾಮಲಕ ತ್ರಯಂಚ
ಪಂಚಾಮ್ರರೋಪೀ ನರಕಂನಯಾತಿ||
ಇದು ಬಹುಶಃ ಗರುಡಪುರಾಣದ್ದಿರಬೇಕು.
ಒಂದು ಅಶ್ವತ್ಥ, ಒಂದು ಬೇವಿನ ಮರ,
ಒಂದು ಆಲದ ಮರ, ೧೦ ಹುಣಿಸೆ ಮರ,
ಮೂರು ಬೇಲ, ಬಿಲ್ವ, ನೆಲ್ಲಿ ಮರಗಳು
ಮತ್ತು ಐದು ಮಾವಿನ ಮರಗಳು
ಇವಿಷ್ಟು ಗಿಡಗಳನ್ನು ನೆಟ್ಟು ಮರವಾಗಿ ಮಾಡಿದವ
ನರಕಕ್ಕೆ ಹೋಗೋದಿಲ್ಲ!
ಈ ಮರಗಳೆಲ್ಲ ಔಷಧೀಯ ಗುಣಗಳುಳ್ಳ, ಆಯುರ್ವೇದೀಯ ಮಹತ್ತ್ವ ಉಳ್ಳವು ಎನ್ನುವುದು ಮೇಲ್ನೋಟಕ್ಕೇ ತಿಳಿಯುತ್ತಿದೆ.
ವಿವಿಧ ಜಾತಿಯ ಮರಗಿಡಗಳು ಯಥೇಚ್ಚವಾಗಿದ್ದ ಕಾಲದಲ್ಲೇ ಹೀಗೆ ಎಚ್ಚರವಹಿಸಿದ್ದರು,
ನಾವೂ ಕೂಡಾ ಗಿಡ ಮರಗಳನ್ನು ಬೆಳೆಸುವ ಮೂಲಕ ಒಳ್ಳೆಯ ಪರಿಸರ ನಿರ್ಮಿಸೋಣ.
Rating
Comments
ಉ: ನರಕಕ್ಕೆ ಹೋಗದಿರಲು ಏನು ಮಾಡಬೇಕು?
In reply to ಉ: ನರಕಕ್ಕೆ ಹೋಗದಿರಲು ಏನು ಮಾಡಬೇಕು? by gopinatha
ಉ: ನರಕಕ್ಕೆ ಹೋಗದಿರಲು ಏನು ಮಾಡಬೇಕು?