ಮೊದಲ ಮಾನವನಿರ್ಮಿತ ವಸ್ತ್ರವು ಮೊದಲ ಪ್ರಾಣಿಹಿಂಸೆಯ ಸಂಕೇತವೂ ಹೌದು!

ಮೊದಲ ಮಾನವನಿರ್ಮಿತ ವಸ್ತ್ರವು ಮೊದಲ ಪ್ರಾಣಿಹಿಂಸೆಯ ಸಂಕೇತವೂ ಹೌದು!

(೧೨೧) ಯಾರ‍ಾದರೂ ನಿಮ್ಮೆಡೆ ಗುರಿ ಇಟ್ಟಲ್ಲಿ ನೀವು ಅಜರಾಮರರಾಗುವ ಅವಕಾಶ ಪಡೆದಿರಿ ಎಂದರ್ಥ. ಕ್ಯಾಮರದಿಂದ ಗುರಿ ಇಟ್ಟಲ್ಲಿ ಒಂದು ಛಾಯಾಚಿತ್ರವಾಗಿ, ಬಂದೂಕಿನಿಂದ ಗುರಿ ಇಟ್ಟಲ್ಲಿ ’ಸ್ಮೃತಿ’ಯಾಗಿ ಅಮರರಾಗುತ್ತೀರಿ!

(೧೨೨) ನಮಗೇನೂ ಗೊತ್ತಿಲ್ಲದಿರುವುದರ ಬಗ್ಗೆ ಏನೂ ಗೊತ್ತಿಲ್ಲ ಎಂಬ ಅನುಮಾನದಿಂದ ನಾವು ಕಲಿಯುತ್ತೇವೆ. ಕಲಿಯುವುದೆಂದರೆ ಗೊತ್ತಿಲ್ಲದಿರುವುದರ ಇರುವಿಕೆಯನ್ನು ಅನ್ವೇಷಿಸುವುದೇ ಆಗಿದೆ. ಅನ್ವೇಷಿಸುವುದೆಂದರೆ ಗ್ರಹಿಕೆಗೊಂದು ಅಂಗವನ್ನು ಸೇರ್ಪಡೆ ಮಾಡಿದಂತೆಯೇ.

(೧೨೩) ಕಲಿವುದೆಂದರೆ ನಮ್ಮ ಪೂರ್ವಜರು ಏನನ್ನು ಮರೆತಿದ್ದರೆಂಬುದನ್ನು ಪುನರಾವಲೋಕನ ಮಾಡುವುದೇ ಹೊರತು ಅವರು ’ಏಕೆ’ ಮತ್ತು ’ಏನನ್ನು’ ಕಲಿತಿದ್ದರೆಂಬುದನ್ನು ಮರೆವುದಲ್ಲ!

(೧೨೪) ಮೊದಲ ವಸ್ತ್ರವನ್ನು ಧರಿಸಿದ ಕೂಡಲೆ ಮಾನವ ನಿಸರ್ಗದಿಂದ ತನ್ನನ್ನು ಬೇರ್ಪಡಿಸಿಕೊಂಡುಬಿಟ್ಟ. ತೊಡದಿದ್ದರೆ ಸಂಕೋಚವಾಗಬೇಕಿರುವುದು ಆಕೆಗೇ ಎಂದೂ ನಂಬಿಸಿಬಿಟ್ಟ! ಮೊಟ್ಟಮೊದಲ ವಸ್ತ್ರವು ಪ್ರಾಣಿಯ ಚರ್ಮವೇ. ಮತ್ತು ಅದು ಮಾನವ ಪ್ರಾಣಿಯ ಚರ್ಮವಂತೂ ಅಲ್ಲವೇ ಅಲ್ಲ. ಮೊದಲ ನೈಸರ್ಗಿಕ ವಸ್ತ್ರವು ಮಾನವ ಚರ್ಮವೇ ಆಗಿದ್ದರೂ ಸಹ, ನೈಸರ್ಗಿಕ ವಸ್ತ್ರವನ್ನು ತೊಡೆದು ಹಾಕಿದ ಮೊದಲ ಘಟನೆಯೆಂದರೆ ಮಾನವನಿರ್ಮಿತ ವಸ್ತ್ರದ ಮೊದಲ ಪ್ರಯೋಗವೆಂದೇ ಅರ್ಥ. ಅದು ಮೊದಲ ಪ್ರಾಣಿಹಿಂಸೆಯ ಸಂಕೇತವೂ ಹೌದು!

(೧೨೫) ಅತ್ಯಂತ ಲೆಕ್ಕಾಚಾರದ ಪದವು ಒಂದು ಸಂಖ್ಯೆ. ಕಾವ್ಯಾತ್ಮಕ ಸಂಖ್ಯೆಯು ಪದವಾಗುತ್ತದೆ. ಕೆಲವು ಪದಗಳು ಲೆಕ್ಕಾಚಾರ ಹಾಗೂ ಕಾವ್ಯಾತ್ಮಕತೆಯೆರಡನ್ನೂ ಕೊಂದಿರುತ್ತವೆ. ಉದಾಹರಣೆಗೆ ಅಂಗಡಿಯ ಫಲಕಗಳು!

Rating
No votes yet

Comments